For Quick Alerts
  ALLOW NOTIFICATIONS  
  For Daily Alerts

  ಮೇಘಾ ಶೆಟ್ಟಿ: ರಶ್ಮಿಕಾ ಮಂದಣ್ಣ ಬಿಟ್ಟು ಮೇಘಾ ಶೆಟ್ಟಿಗೆ ಶುರುವಾಯ್ತಾ ಡಿಮ್ಯಾಂಡ್?

  By ಎಸ್ ಸುಮಂತ್
  |

  ಹಿಂಗೊಂದು ಪ್ರಶ್ನೆ ಮೂಡುವಂತೆ ಮಾಡುತ್ತಿದ್ದಾರೆ ಮೇಘಾ ಶೆಟ್ಟಿ ಫ್ಯಾನ್ಸ್. ಮೇಘಾ ಶೆಟ್ಟಿ ಸದ್ಯ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಜೊತೆ ಜೊತೆಗೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಮೇಘಾ ಶೆಟ್ಟಿಯನ್ನು ಮೆಚ್ಚಿಕೊಂಡಾಗಿದೆ. ಈಗ ಪುಷ್ಪ 2 ಸಿನಿಮಾದಲ್ಲಿ ಮೇಘಾ ಶೆಟ್ಟಿ ಇರಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.

  ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿತ್ತು. ಸಖತ್ತಾಗಿಯೇ ಓಡಿತ್ತು. ಈಗ ಪುಷ್ಪ2 ಸಿನಿಮಾಗಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ. ಭಾಗ ಒಂದರಲ್ಲಿ ಇದ್ದಂತ ರಶ್ಮಿಕಾ ಮಂದಣ್ಣ ಅವರೇ ಈ ಸಿನಿಮಾದಲ್ಲೂ ಮುಂದುವರೆಯಲಿದ್ದಾರೆ. ಆದರೆ ಅಬಿಮಾನಿಗಳ ಡಿಮ್ಯಾಂಡ್ ಬೇರೆಯೇ ಆಗಿದೆ.

  ಮೇಘಾ ಶೆಟ್ಟಿಯ ಹೊಸ ಫೋಟೋಗೆ ಪ್ಯಾನ್ಸ್ ಫಿದಾ

  ಮೇಘಾ ಶೆಟ್ಟಿಯ ಹೊಸ ಫೋಟೋಗೆ ಪ್ಯಾನ್ಸ್ ಫಿದಾ

  ಜೊತೆ ಜೊತೆಯಲಿ ಧಾರಾವಾಹಿ ಮೂರು ವರ್ಷಗಳನ್ನು ದಾಟಿ ಮುಂದೆ ಸಾಗುತ್ತಾ ಇದೆ. ಈ ಧಾರಾವಾಹಿಯಲ್ಲಿ ಅನು ಸಿರಿಮನೆ ಎಲ್ಲರನ್ನು ಆಕರ್ಷಿಸಿರುವಂತ ಪಾತ್ರ. ಆರ್ಯನ ಪಾತ್ರ ಬದಲಾದ ಮೇಲೆ ಟಿಆರ್ ಪಿಯಲ್ಲಿ ಕೊಂಚ ಇಳಿಕೆಯಾಗಿರುವ ಧಾರಾವಾಹಿ ಇನ್ನು ಕೂಡ ಹಲವರ ಮನಸ್ಸನ್ನು ಗೆದ್ದಿದೆ. ಈ ಧಾರಾವಾಹಿಯ ನಟಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಇದೀಗ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಮೇಘಾ ಶೆಟ್ಟಿಯ ಲುಕ್ ಸೂಪರ್

  ಮೇಘಾ ಶೆಟ್ಟಿಯ ಲುಕ್ ಸೂಪರ್

  ಮೇಘಾ ಶೆಟ್ಟಿ ಆಗಾಗ ಫೋಟೋ ಶೂಟ್ ಮಾಡಿಸುತ್ತಲೇ ಇರುತ್ತಾರೆ. ಈಗ ಹೊಸದಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಅದುವೇ ಲಂಗ ದಾವಣಿಯಲ್ಲಿ. ತಲೆಗೆ ಹೂ ಮುಡಿದು, ಕೈಗೆ ಬಳೆ ತೊಟ್ಟು, ಸಾದಾ ಸೀದಾ ಹಳ್ಳಿ ಹುಡುಗಿಯ ರೀತಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಬಾರಿ ಕೂಡ ಜಾನಪದ ಲುಕ್ ನಲ್ಲಿ ಮೇಘಾ ಶೆಟ್ಟಿ ಕಂಗೊಳಿಸಿದ್ದರು.

  ಪುಷ್ಪ2ನಲ್ಲಿ ಮೇಘಾ ಶೆಟ್ಟಿಗೆ ಚಾನ್ಸ್ ಕೊಡಿ ಎಂದ ನೆಟ್ಟಿಗರು

  ಪುಷ್ಪ2ನಲ್ಲಿ ಮೇಘಾ ಶೆಟ್ಟಿಗೆ ಚಾನ್ಸ್ ಕೊಡಿ ಎಂದ ನೆಟ್ಟಿಗರು

  ಇನ್ನು ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪಕ್ಕ ಹಳ್ಳಿ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಕೆಲವೊಂದು ವಿಚಾರಗಳಿಂದ ರಶ್ಮಿಕಾ ಮಂದಣ್ಣ ವಿವಾದದಲ್ಲಿಯೇ ಸಿಲುಕುತ್ತಿದ್ದಾರೆ. ಟ್ರೋಲಿಗರಿಗೆ ಮತ್ತೆ ಮತ್ತೆ ಆಹಾರವಾಗುತ್ತಿದ್ದಾರೆ. ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುತ್ತೀವಿ ಅಂತ ಬೇರೆ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಇಂಥ ಹೊತ್ತಲ್ಲಿ ಮೇಘಾ ಶೆಟ್ಟಿ ಲುಕ್ ನೋಡಿದ ಫ್ಯಾನ್ಸ್ ರಶ್ಮಿಕಾ ಮಂದಣ್ಣನನ್ನು ಪುಷ್ಪ ಸಿನಿಮಾದಿಂದ ತೆಗೆದು ಹಾಕಿ, ನಮ್ಮ ಮೇಘಾ ಅಕ್ಕನಿಗೆ ಚಾನ್ಸ್ ಕೊಡಿ ಎಂದು ಕೇಳಿಕೊಂಡಿದ್ದಾರೆ.

  ಸಿನಿಮಾ ಸೀರಿಯಲ್ ಬ್ಯಾಲೆನ್ಸ್ ಮಾಡುವ ನಟಿ

  ಸಿನಿಮಾ ಸೀರಿಯಲ್ ಬ್ಯಾಲೆನ್ಸ್ ಮಾಡುವ ನಟಿ

  ಮೇಘಾ ಶೆಟ್ಟಿ ಅನು ಸಿರಿಮನೆಯಾದಾಗಿನಿಂದ ಕರ್ನಾಟಕದ ಮನೆ ಮನಗಳಲ್ಲೂ ರೀಚ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಂತು ಯಾವಾಗಲೂ ಆಕ್ಟೀವ್ ಆಗಿಯೇ ಇರುತ್ತಾರೆ. ಈ ನಟಿಗೆ ಒಂದು ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಹಾಗೇ ಸೀರಿಯಲ್ ಜೊತೆಗೆ ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಈಗಾಗಲೇ ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸಿನಿಮಾವನ್ನು ಮಾಡಿಯಾಗಿದೆ. ಸಿನಿಮಾಗಳ ಆಫರ್ ಗಳು ಬರುತ್ತಾ ಇದ್ದರೂ ಸಹ ನಟಿ ಧಾರಾವಾಹಿ ಮಾತ್ರ ಬಿಟ್ಟಿಲ್ಲ.

  English summary
  zee kannada serial jothe jotheyali Written Update on Megha shetty new look. Here is the details about Megha shetty new photos
  Thursday, December 15, 2022, 19:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X