ಪಿಂಕ್ ರೋಸ್ ಮುಡಿದು ಅಪ್ಸರೆಯಂತೆ ಕಂಗೊಳಿಸಿದ ಮೇಘಾ ಶೆಟ್ಟಿ

By ಪ್ರಿಯಾ ದೊರೆ

ಜೀ ಕನ್ನಡದಲ್ಲಿ ಮೂಡಿ ಬರುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿ ಮೇಘಾ ಶೆಟ್ಟಿ ಅನು ಸಿರಿಮನೆಯಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಮುಗಿದ ಮೇಲೆ ಕಿರುತೆರೆಯಿಂದ ದೂರ ಉಳಿದಿರುವ ನಟಿ ಕ್ಯಾಮರಾದಿಂದ ಅಂತೂ ದೂರ ಸರಿದಿಲ್ಲ. ಆಗಾಗ ಮುದ್ದು ಮುದ್ದಾಗಿ ಹೊಸ ಹೊಸ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೇಲಿ ಬಿಡುತ್ತಾರೆ.

ಮೊದಲ ಧಾರಾವಾಹಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೇಘಾ, ಸದ್ಯ ಸಿನಿಮಾ ಕಡೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ಮೇಘಾ ಶೆಟ್ಟಿ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿ ಬಳಗ ಕಾತುರವಾಗಿದೆ. ಮೇಘಾ ಶೆಟ್ಟಿ ಅವರನ್ನು ಲಕ್ಕಿ ಹೀರೋಯಿನ್ ಎಂದರೆ ತಪ್ಪಾಗಲಾರದು. ಯಾಕೆಂದರೆ, ಮೇಘಾ ನಟಿಸಿದ ಮೊದಲ ಧಾರಾವಾಹಿಯೇ ಸೂಪರ್ ಡೂಪರ್ ಹಿಟ್ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಅವಕಾಶಗಳು ಇವರನ್ನು ಹುಡುಕಿ ಬರುತ್ತಿದೆ.

Megha Shetty soars temperatures high with her gorgeous Bridal Look photoshoot

ಸ್ಯಾಂಡಲ್‌ವುಡ್‌ನಲ್ಲೂ ಬ್ಯುಸಿಯಾಗಿರುವ ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ 'ತ್ರಿಬಲ್ ರೈಡಿಂಗ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೇ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರೊಂದಿಗೆ 'ದಿಲ್ ಪಸಂದ್' ಚಿತ್ರದಲ್ಲೂ ಮೇಘಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಹಾಗೂ 'ಕೈವ' ಸಿನಿಮಾಗಳು ಆಕೆ ಕೈಯಲ್ಲಿವೆ.

ಪಿಂಕ್ ರೋಸ್ ಮುಡಿದ ಮೇಘಾ

ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಆಗಾಗ ರೀಲ್ಸ್, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ವಿಭಿನ್ನ ಲೆಹಂಗಾ ತೊಟ್ಟು, ಪಿಂಕ್ ರೋಸ್ ಮುಡಿದು ಮೇಘಾ ಶೆಟ್ಟಿ ಅವರು ಅಪ್ಸರೆಯ ಹಾಗೆ ಕಾಣುತ್ತಿದ್ದಾರೆ. ಇದರ ಫೋಟೋ ಶೂಟ್ ಮಾಡಿಸಿದ್ದಾರೆ. ಇದಕ್ಕೆ ಲೈಕ್ಸ್, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಲವ್ ಯೂ, ಲುಕಿಂಗ್ ಕ್ಯೂಟ್, ನಿಮ್ಮನ್ನು ಮದುವೆಯಾಗುವರು ಪುಣ್ಯ ಮಾಡಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಈ ಫೋಟೋಗಳಿಗೆ ಅದಾಗಲೇ ನಲವತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

Megha Shetty soars temperatures high with her gorgeous Bridal Look photoshoot

ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುವ ನಟಿ

ಮೇಘಾ ಶೆಟ್ಟಿ ಇನ್ ಸ್ಟಾಗ್ರಾಂ ಪೇಜ್ ಅನ್ನು ಬರೋಬ್ಬರಿ 1.1 ಮಿಲಿಯನ್ ಫಾಲೋ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 335 ಪೋಸ್ಟ್‌ಗಳನ್ನು ಹಾಕಿದ್ದಾರೆ. ತಾವು ಮಾಡುವ ಯೋಗ, ವರ್ಕೌಟ್, ರೀಲ್ಸ್ ಹಾಗೂ ಫೋಟೋ ಶೂಟ್, ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಈ ಮೂಲಕ ಆಗಾಗ ತಮ್ಮ ಫ್ಯಾನ್ಸ್ ಮನಗೆಲ್ಲುತ್ತಾರೆ. ಇನ್ನು ತಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆಯೂ ಅಪ್ ಲೋಡ್ ಮಾಡುತ್ತಿರುತ್ತಾರೆ.

ಸ್ನೇಹಿತರೊಂದಿಗೆ ರೀಲ್ಸ್ ಮಾಡುವ ಬೆಡಗಿ

ಮೇಘಾ ಶೆಟ್ಟಿ ಫ್ರೆಂಡ್ಸ್ ಜೊತೆಗೆ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಅಕ್ಕನ ಜೊತೆಗೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಅವರ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಬರೀ ಅಕ್ಕನ ಜೊತೆಗೆ ಮಾಡಿರುವ ರೀಲ್ಸ್, ಅಕ್ಕನ ಜೊತೆಗೆ ಎಂಜಾಯ್ ಮಾಡುವ ರೀಲ್ಸ್ ಕಾಣಿಸುತ್ತದೆ. ಜೊತೆಗೆ 'ಜೊತೆ ಜೊತೆಯಲಿ' ಧಾರಾವಾಹಿಯ ರಮ್ಯಾ ಜೊತೆಗೂ ಹೆಚ್ಚು ಕ್ಲೋಸ್ ಆಗಿದ್ದಾರೆ. ಆದರೆ, ಇತ್ತೀಚೆಗೆ ರೀಲ್ಸ್‌ಗಿಂತ ಹೆಚ್ಚಾಗಿ ಫೋಟೋಶೂಟ್ ಹೆಚ್ಚು ಮಾಡಿಸುತ್ತಿದ್ದಾರೆ.

More from Filmibeat

English summary
Megha Shetty soars temperatures high with her gorgeous Bridal Look photoshoot. Jothe Jotheyali Serial actress now works in Kannada films. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X