Megha Shetty: ಮೇಘಾ ಶೆಟ್ಟಿ ವೈರಲ್ ಫೋಟೊಶೂಟ್ ಹಿಂದೆ ಏನೆಲ್ಲಾ ಸರ್ಕಸ್ ನಡೆದಿದೆ ನೋಡಿ!
ಇತ್ತೀಚೆಗಂತೂ ಸೋಷಿಯಲ್ ಮೀಡಿಯಾ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಬೆಳೆದುಬಿಟ್ಟಿದೆ. ಬಹುತೇಕರು ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಿಗೂ ಇನ್‌ಸ್ಟಾ, ಫೇಸ್‌ಬುಕ್, ಟ್ವಿಟ್ಟರ್ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತೆ. ಬಳಕೆ ಮಾಡುವುದನ್ನು ಸಿಕ್ಕಾಪಟ್ಟೆ ಫಾಸ್ಟ್ ಆಗಿನೇ ಕಲಿತಿರುತ್ತಾರೆ. ತಮ್ಮ ನೆಚ್ಚಿನ ಸ್ಟಾರ್‌ಗಳನ್ನು ಮೊದಲು ಫಾಲೋ ಮಾಡಿರುತ್ತಾರೆ.
ನೆಚ್ಚಿನ ನಟ-ನಟಿಯರ ಬಗ್ಗೆ ತಿಳಿದುಕೊಳ್ಳಬೇಕು ಅಂದಾಗ, ಅವರ ಫೋಟೋಗಳನ್ನು ನೋಡಬೇಕು ಎಂದಾಗ ಬೇರೆಲ್ಲೋ ಹುಡುಕುವ ಅಗತ್ಯವಿಲ್ಲ. ಜಸ್ಟ್ ಅವರ ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗೆ ಹೋದರೆ ಸಾಕು. ಬ್ಯೂಟಿಫುಲ್ ಫೋಟೋ ಜೊತೆಗೆ, ಅವರ ದಿನಚರಿಯೂ ಅಲ್ಲಿಯೇ ಸಿಕ್ಕಿಬಿಡುತ್ತದೆ. ಆದರೆ ಒಂದೊಂದು ಫೋಟೋ ಹಿಂದೆ ಎಷ್ಟು ಜನರ ಶ್ರಮವಿರುತ್ತದೆ ಗೊತ್ತಾ. ಆ ವಿಡಿಯೋವೊಂದು ವೈರಲ್ ಆಗಿದೆ.

ಇತ್ತಿಚೆಗೆ ಮೇಘಾ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲೈಟ್ ಪಿಂಕ್ ಲಾಂಗ್ ಡ್ರೆಸ್ ನಲ್ಲಿ ಕಂಗೊಳಿಸಿರುವ ಫೋಟೋವದು. ಆ ಬ್ಯೂಟಿಪುಲ್ ಫೋಟೋದಲ್ಲಿ ಮೇಘಾ ಶೆಟ್ಟಿ ಕೂಡ ಮುದ್ದಾಗಿ ಕಾಣುತ್ತಿದ್ದಾರೆ. ಈ ಪಿಂಕ್ ಫೋಟೋಗೆ ಲೈಕ್ಸ್, ಕಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ.
ಫೋಟೊಶೂಟ್ ಹಿಂದಿನ ಸರ್ಕಸ್
ಅಷ್ಟೊಂದು ಲೈಕ್, ಕಮೆಂಟ್ಸ್ ಬರುತ್ತಿರುವ ಮೇಘಾ ಶೆಟ್ಟಿಯ ಫೋಟೋ ಸುಮ್ಮನೆ ಬಂದಿರುವುದಲ್ಲ. ಯಾವುದೇ ಒಂದು ಬ್ಯೂಟಿಫುಲ್ ವಸ್ತುಗಳು ಸಿಗಬೇಕು ಎಂದರೆ ಅಥವಾ ಅದು ಬ್ಯೂಟಿಪುಲ್ ಆಗಿ ಕಾಣಬೇಕು ಎಂದರೆ ಅದರ ಹಿಂದೆ ಹಲವರ ಶ್ರಮ ಇರಲೇಬೇಕು. ಅದೇ ರೀತಿ ಸುಂದರವಾದ ನಟಿಯರ ಫೋಟೋಗಳು ಬರಬೇಕು ಎಂದರೆ ಕ್ಯಾಮೆರಾ ಮಾತ್ರ ಚೆನ್ನಾಗಿ ಇದ್ದರೆ ಸಾಕಾಗುವುದಿಲ್ಲ. ಅದರ ಹಿಂದೆ ಹಲವರ ಶ್ರಮ ಇದೆ. ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಎದ್ದು ಕಾಣುತ್ತಿದೆ.
ಶಮತಾ ಶ್ರಮದಿಂದ ಏನೆಲ್ಲಾ ಆಯ್ತು ನೋಡಿ
ಔಟ್ ಡೋರ್ ಫೋಟೋ ತೆಗೆದರೆ ಶ್ರಮ ಕಡಿಮೆ ಇರುತ್ತದೆ. ಲೋಕೇಷನ್ ಹುಡುಕಿದರೆ ಮುಗಿಯಿತು. ಆದರೆ ಒಳಾಂಗಣ ಫೋಟೋಗಳನ್ನು ತೆಗೆಯುವಾಗ ಬ್ಯಾಗ್ರೌಂಡ್ ಕೂಡ ನೋಡಬೇಕಿರುತ್ತದೆ. ಒಂದು ಕರ್ಟನ್ ಹಾಕಿ ಫೊಟೋಶೂಟ್ ಮಾಡಲಾಗಿದೆ. ಮೇಘಾ ಶೆಟ್ಟಿ ಪೋಸ್ ಕೊಡುವಾಗ ಹಿಂದೆ ಒರಗಿಕೊಳ್ಳಬೇಕು. ಆದರೆ ಅದು ಕ್ಯಾಮೆರಾದಲ್ಲಿ ಕಾಣಬಾರದು. ಇದೆಲ್ಲವನ್ನು ಬ್ಯಾಲೆನ್ಸ್ ಮಾಡಲು ಫೋಟೋಶೂಟ್ ಮಾಡುವ ಟೀಂನಲ್ಲಿ ಎಲ್ಲರೂ ಶ್ರಮ ಹಾಕಿದ್ದಾರೆ. ಶಮತ ಎನ್ನುವವರು ಮೇಘಾ ಶೆಟ್ಟಿಯನ್ನು ಹೋಲ್ಡ್ ಮಾಡಿದ್ದಾರೆ. ಅವರ ಪೋಸ್ ಕೊಡುವಾಗ ಶಮತ ಬೆನ್ನೆಲುಬಾಗಿ ನಿಂತಿದ್ದಾರೆ.

ನೆಟ್ಟಿಗರಿಂದ ಪ್ರಶಂಸೆ
ಈ ವಿಡಿಯೋಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಮೇಘಾ ಶೆಟ್ಟಿಯ ಫೋಟೋಶೂಟ್ ಮಾಡುವಾಗ ಹೋಲ್ಡ್ ಮಾಡಿದ ಶಮತಾಗೆ ಶಬ್ಬಾಶ್ ಎನ್ನುತ್ತಿದ್ದಾರೆ. ಎಲ್ಲರೂ ಪಟ್ಟ ಕಷ್ಟಕ್ಕೆ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಕಮೆಂಟ್ ಮೂಲಕ ಹಾರ್ಟ್ ನೀಡಿದ್ದಾರೆ. ಒಂದು ಫೋಟೋ ಹಿಂದೆ ಎಷ್ಟೆಲ್ಲಾ ಕೆಲಸ ನಡೆಯುತ್ತದೆ ಎಂಬುದು ಈ ವಿಡಿಯೋ ಮೂಲಕ ತಿಳಿಯುತ್ತಿದೆ. ಕೆಲವರಂತು ನಾನು ನಿಮ್ಮ ಜೊತೆಗೆ ಕೆಲಸಕ್ಕೆ ಸೇರಬಹುದೇ ಎಂದು ಮೆಸೇಜ್ ಹಾಕುತ್ತಿದ್ದಾರೆ.


Click it and Unblock the Notifications











