»   » ಸೀರಿಯಲ್ ಲೋಕಕ್ಕೆ ಕಾಲಿಟ್ಟ 'ಚಾರ್ಮಿನಾರ್' ಚೆಲುವೆ ಮೇಘನಾ

ಸೀರಿಯಲ್ ಲೋಕಕ್ಕೆ ಕಾಲಿಟ್ಟ 'ಚಾರ್ಮಿನಾರ್' ಚೆಲುವೆ ಮೇಘನಾ

Posted By:
Subscribe to Filmibeat Kannada

ನಟಿ ಮೇಘನಾ ಗಾಂವ್ಕರ್ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. 'ಜೀ ಕನ್ನಡ' ವಾಹಿನಿಯ ಜನಪ್ರಿಯ 'ಪತ್ತೇದಾರಿ ಪ್ರತಿಭಾ' ಸೀರಿಯಲ್ ನಲ್ಲಿ 'ಚಾರ್ಮಿನಾರ್' ಚೆಲುವೆ ಮೇಘನಾ ನಟಿಸುತ್ತಿದ್ದಾರೆ.

'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರದ ಬಳಿಕ ಮೇಘನಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅದಕ್ಕೆ ಕಾರಣ ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ 'ಸಿನಿಮಾಗಳಲ್ಲಿ ಸಾಹಿತ್ಯ ಕೃತಿಗಳು' ಎಂಬ ವಿಷಯದ ಮೇಲೆ PHD ಮಾಡುತ್ತಿದ್ದಾರೆ.

Meghana Gaonkar's Guest Appearance In Pattedari Pratibha Serial

ಈಗ 'ಪತ್ತೇದಾರಿ ಪ್ರತಿಭಾ' ಸೀರಿಯಲ್ ನಲ್ಲಿ ಒಂದು ಸಣ್ಣ ಅತಿಥಿ ಪಾತ್ರವನ್ನು ಮೇಘನಾ ನಿರ್ವಹಿಸಲಿದ್ದಾರೆ.

'ಪತ್ತೇದಾರಿ ಪ್ರತಿಭಾ' ಧಾರಾವಾಹಿಯ ನಿರ್ದೇಶಕ ನವೀನ್ ಕೃಷ್ಣ ಅವರು ಮೇಘನಾಗೆ ಸ್ನೇಹಿತರಾಗಿರುವುದರಿಂದ ಸೀರಿಯಲ್ ನಲ್ಲಿ ಅತಿಥಿ ಪಾತ್ರ ಮಾಡುವುದಕ್ಕೆ ಮೇಘನಾ ಒಪ್ಪಿಕೊಂಡಿದ್ದಾರೆ. ಅದು ಬಿಟ್ಟರೇ ಬೇರೆ ಯಾವುದೇ ಸೀರಿಯಲ್ ನಲ್ಲಿ ಮೇಘನಾ ಸದ್ಯಕ್ಕೆ ನಟಿಸುವುದಿಲ್ಲ ಎಂದಿದ್ದಾರೆ.

English summary
Kannada Actress Meghana Gaonkar is making Guest Appearance In Zee Kannada Channel's 'Pattedari Pratibha' Serial.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada