ಬಿಗ್ ಬಾಸ್ ಮನೆಗೆ ಮೇಘನಾ ರಾಜ್, ಧ್ರುವ ಸರ್ಜಾ ಕೆಂಡ..ಕೆಂಡ..

ಪ್ರತಿ ವರ್ಷ ''ಬಿಗ್ ಬಾಸ್'' ಸುತ್ತ ಮುತ್ತ ಕುತೂಹಲ ಮನೆ ಮಾಡುತ್ತೆ. ಈ ವರ್ಷ ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಕಾರ್ಯಕ್ರಮ ಶುರುವಾಗುವ ಒಂದೆರಡು ತಿಂಗಳ ಮುನ್ನವೇ ಸ್ಪರ್ಧಿಗಳ ಕುರಿತು ಚರ್ಚೆ ಶುರುವಾಗುತ್ತೆ. ಅಂತೆ-ಕಂತೆಯ ಸಂತೆಯಲ್ಲಿ ಹಲವಾರು ಜನರ ಹೆಸರು ಕೇಳಿ ಬರುತ್ತೆ.

ಆ ಭಾಷೆ ಈ ಭಾಷೆ ಅಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈ ಕುರಿತು ಪ್ರತಿ ವರ್ಷ ಚರ್ಚೆ ನಡೆಯುತ್ತಲೇ ಇರುತ್ತೆ. ಆ ಪೈಕಿ ಕೆಲವರು ನೇರಾನೇರವಾಗಿಯೇ ತಮ್ಮ ಕುರಿತು ಹರಡಿರುವ ಸುದ್ದಿಗೆ ಪ್ರತಿಕ್ರಿಯೆಯನ್ನು ಕೊಡುತ್ತಾರೆ. ''ಬಿಗ್ ಬಾಸ್‌''ನಲ್ಲಿ ಭಾಗವಹಿಸುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾರೆ. ಸುಖಾ ಸುಮ್ಮನೆ ತಮ್ಮ ಹೆಸರನ್ನು ಎಳೆದು ತರದಂತೆ ಮನವಿಯನ್ನು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ''ಬಿಗ್ ಬಾಸ್‌'' ನಲ್ಲಿ ತಾವು ಭಾಗವಹಿಸುತ್ತಿರುವ ಸುದ್ದಿಯನ್ನು ಕೇಳಿ ಕೆರಳಿ ಕೆಂಡವಾಗುತ್ತಾರೆ. ಉದಾಹರಣೆಗೆ ''ಮೇಘನಾ ರಾಜ್''.

Meghana Raj Sarja and Dhruva Sarja Show Fury Over Completely FAKE Bigg Boss Kannada 12 News

ಹೌದು, ಕಳೆದ ಕೆಲ ದಿನಗಳಿಂದ ಮೇಘನಾ ರಾಜ್ ಅವರ ಎರಡನೇ ಮದುವೆಯ ಕುರಿತು ಹಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದರು. ತುಂಬಾನೇ ತಲೆ ಕೆಡಿಸಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಿ ನೀಡಿ ಮೇಘನಾ ರಾಜ್ ಕೂಡ ಸುಸ್ತಾಗಿದ್ದಾರೆ. ಆದರೂ ಕೂಡ ಈ ಎರಡನೇ ಮದುವೆ ಸುತ್ತ ಮುತ್ತ ಸುದ್ದಿಗಳೂ ಇನ್ನೂ ಚಾಲ್ತಿಯಲ್ಲಿವೆ.

ಹೀಗಿರುವಾಗ ಇದೀಗ ಕೆಲ ದಿನಗಳಿಂದ ಈ ಬಾರಿ ''ಬಿಗ್ ಬಾಸ್'' ಮನೆಗೆ ಮೇಘನಾ ರಾಜ್ ಹೋಗ್ತಿದ್ದಾರೆ ಎನ್ನುವ ಸುದ್ದಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡಲಾಗಿದೆ. ಹೀಗೆ ತೇಲಿ ಬಿಡಲಾದ ಸುದ್ದಿ ಮೇಘನಾ ರಾಜ್ ಅವರವರೆಗೆ ತಲುಪಿದೆ. ತಮ್ಮ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಸ್ಟ್‌ ಮೇಘನಾ ಅವರ ಕಣ್ಣಿಗೆ ಬಿದ್ದಿದೆ.

ಈ ಹಿನ್ನೆಲೆ ಕೂಡಲೇ ಪ್ರತಿಕ್ರಿಯೆಯನ್ನು ನೀಡಿರುವ ಮೇಘನಾ ರಾಜ್ ಈ ಸುದ್ದಿ ಸತ್ಯಕ್ಕೆ ಸಂಪೂರ್ಣ ದೂರವಾದದ್ದು ಎಂದು ಹೇಳಿದ್ದಾರೆ. ಈ ತರಹದ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಯಾರು ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟೀಕರಣವನ್ನು ನೀಡಿರುವ ಮೇಘನಾ ರಾಜ್ ಇದು ಸಂಪೂರ್ಣ ಸುಳ್ಳು. ಈ ರೀತಿಯ ಸುದ್ದಿಗಳು ಪ್ರೇಕ್ಷಕರನ್ನು ಮತ್ತು ನನ್ನ ಅಭಿಮಾನಿಗಳನ್ನು ತಪ್ಪು ದಾರಿಗೆಳೆಯುತ್ತವೆ. ಇಂತಹ ಸುಳ್ಳು ಸುದ್ದಿಗಳನ್ನು ಕೂಡ ನಿಜಾ ಎಂದು ನಂಬುವಂತೆ ಮಾಡುತ್ತವೆ ಎಂದು ಹೇಳಿರುವ ಮೇಘನಾ ನಾನು ಯಾವುದೇ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿಲ್ಲ. ಘನವೆತ್ತ ಸುದ್ದಿ ವಾಹಿನಿಗಳು ಈ ರೀತಿಯ ಸುದ್ದಿಗಳನ್ನು ಹಾಕುವ ಮೊದಲು ಕನಿಷ್ಠ ಪಕ್ಷ ನನ್ನ ಪ್ರತಿಕ್ರಿಯೆಯನ್ನಾದರೂ ಕೇಳಿ ಆ ನಂತರ ಪ್ರಕಟಿಸಿ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿಯ ಕುರಿತು ಈ ಮೂಲಕ ಕೆಂಡ ಕಾರಿದ್ದಾರೆ.

Meghana Raj Sarja and Dhruva Sarja Show Fury Over Completely FAKE Bigg Boss Kannada 12 News

ಇನ್ನೂ ಮೇಘನಾ ರಾಜ್ ಅವರ ಈ ಪೋಸ್ಟ್‌ನ್ನು ತಮ್ಮ ಸೋಶೀಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಕೂಡ ಹಂಚಿಕೊಂಡಿದ್ದು ಈ ಮೂಲಕ ಮೇಘನಾ ರಾಜ್ ಅವರ ಕುರಿತು ಹಬ್ಬಿರುವ ಸುಳ್ಳು ಸುದ್ದಿಯನ್ನು ಖಂಡಿಸಿದ್ದಾರೆ. ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ಇನ್ನುಳಿದಂತೆ ಸೆಪ್ಟೆಂಬರ್ 28ರಿಂದ ಈ ಬಾರಿ ಕನ್ನಡದ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಲಿದೆ. ಈ ವರ್ಷ ಕೂಡ ಸುದೀಪ್ ಸಾರಥ್ಯದಲ್ಲಿ ಕಾರ್ಯಕ್ರಮ ಮೂಡಿ ಬರಲಿದ್ದು ವಿಜಯ್ ಸೂರ್ಯ ಸೇರಿ ಇನ್ನು ಹಲವರ ಹೆಸರುಗಳು ಈ ಬಾರಿಯ ''ಬಿಗ್ ಬಾಸ್‌'' ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ. ಆ ಪೈಕಿ ಯಾರೆಲ್ಲಾ ಹೋಗಲಿದ್ಧಾರೆ ಎನ್ನುವ ಉತ್ತರ ಅವತ್ತೇ ಅಂದರೆ ಸೆಪ್ಟೆಂಬರ್ 28ರಂದೇ ಸಿಗಲಿದೆ.

More from Filmibeat

English summary
Meghana Raj Sarja and Dhruva Sarja blast fake news regarding her participation in Bigg Boss Kannada 12. Get the full story on their viral response that has set the record straight.
Read more about: meghana raj biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X