For Quick Alerts
  ALLOW NOTIFICATIONS  
  For Daily Alerts

  ತೊದಲು ನುಡಿಯಲ್ಲಿ 'ಅಪ್ಪಾ' ಎಂದ ರಾಯನ್ ರಾಜ್: ಮೇಘನಾ ದಿಲ್ ಖುಷ್!

  |

  ನಟಿ ಮೇಘನಾ ರಾಜ್ ಸದಾ ತಮ್ಮ ಮಗನ ವಿಚಾರದಲ್ಲಿ ಸುದ್ದಿ ಆಗುತ್ತಾರೆ. ಮೇಘನಾ, ಚಿರು ಪುತ್ರ ರಾಯನ್ ರಾಜ್ ಕರುನಾಡ ಜನರ ಹೃದಯಲ್ಲಿ ಸ್ಥಾನ ಪಡೆದಿರುವ ಮುದ್ದು ಮಗು. ರಾಯನ್ ಆಟ ತುಂಟಾಟ ನೋಡಲು ಸಹಸ್ರಾರು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಹಾಗಾಗಿ ರಾಯನ್ ರಾಜ್ ಈಗಲೇ ಜನರ ಮನಸಲ್ಲಿ ಪುಟ್ಟ ಹೀರೋನಂತೆ ಕಂಗೊಳಿಸುತ್ತಿದ್ದಾನೆ.

  ಮಗುವಿಗೆ ವರ್ಷ ತುಂಬಿದ ಬಳಿಕ ಮೇಘನಾ ವೃತ್ತಿ ಬದುಕಿನಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಒಂದೊಂದೆ ಸಿನಿಮಾ ಮತ್ತು ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೇಘನಾ ಅವರು ಈಗ ಟಿವಿ ಕಾರ್ಯಕ್ರಮದ ಮೂಲಕ ಎಲ್ಲರ ಮುಂದೆ ಬಂದಿದ್ದಾರೆ. ಜೊತೆಗೆ ಸಿನಿಮಾಗಳಲ್ಲೂ ಅಭಿನಯ ಮುಂದುವರೆಸಿದ್ದಾರೆ.

  ಮೇಘನಾ ರಾಜ್‌ಗೆ ಮಗನನ್ನು ಬಿಟ್ಟಿರಲು ಅಭದ್ರತೆ ಕಾಡುತ್ತಂತೆ: ಶೂಟಿಂಗ್‌ನಲ್ಲಿದ್ದಾಗಾ ಏನ್‌ ಮಾಡ್ತಾರೆ?ಮೇಘನಾ ರಾಜ್‌ಗೆ ಮಗನನ್ನು ಬಿಟ್ಟಿರಲು ಅಭದ್ರತೆ ಕಾಡುತ್ತಂತೆ: ಶೂಟಿಂಗ್‌ನಲ್ಲಿದ್ದಾಗಾ ಏನ್‌ ಮಾಡ್ತಾರೆ?

  ಮಕ್ಕಳು ಮುದ್ದು, ಮುದ್ದಾಗಿ ತೊದಲು ನುಡಿಯಲ್ಲಿ ಮಾತಾಡುವುದೇ ಬಲು ಚೆಂದ. ರಾಯನ್‌ಗೆ ಒಂದು ವರ್ಷ ತುಂಬಿದೆ. ನಿಧಾನವಾಗಿ ರಾಯನ್ ಮಾತು ಕಲಿಯುತ್ತಿದ್ದಾನೆ. ಮಗನ ಬಗ್ಗೆ ಸದಾ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ, ನಟಿ ಮೇಘನಾ ರಾಜ್ ಈಗ ರಾಯನ್ ಮೊದಲ ತೊದಲು ನುಡಿಯ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

  ಬಾಯಿ ತುಂಬಾ 'ಅಪ್ಪಾ' ಎಂದು ನುಡಿದ ರಾಯನ್!

  ಪುಟ್ಟ ಕಂದ ರಾಯನ್ ರಾಜ್ ಮಾತಾಡಿರುವ ವಿಡಿಯೋವನ್ನು ಅಮ್ಮ, ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ರಾಯನ್ ಅಮ್ಮ ಹೇಳಿಕೊಡುವ ತೊದಲು ನುಡಿಯನ್ನು ಆಡಿದ್ದಾನೆ. ಮೇಘನಾ ರಾಜ್ ರಾಯನ್‌ಗೆ ಅಪ್ಪಾ ಎಂದು ಹೇಳಲು ಹೇಳಿಕೊಟ್ಟಿದ್ದಾರೆ. ಅಂತರೆರಯೇ ರಾಯನ್ ಅಪ್ಪಾ ಎಂದು ನುಡಿದಿದ್ದಾನೆ, ಮೊದಲು ಪಪ್ಪಾ ಎಂದ ರಾಯನ್, ನಂತರ ಅಪ್ಪಾ ಎಂದಿದ್ದಾನೆ. ಈ ವಿಡಿಯೋವನ್ನು ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಲಿಸ್ಟ್ ಸೇರಿದೆ.

  ತಾತ, ಅಪ್ಪ, ಅಮ್ಮ ಎಂದ ರಾಯನ್!

  ತಾತ, ಅಪ್ಪ, ಅಮ್ಮ ಎಂದ ರಾಯನ್!

  ಇನ್ನು ವಿಡಿಯೋದಲ್ಲಿ ರಾಯನ್ ರಾಜ್ ಅಪ್ಪ ಎನ್ನುವುದು ಮಾತ್ರವಲ್ಲ. ತಾತ, ಅಮ್ಮ, ಪಪ್ಪ ಎಂದಿದ್ದಾನೆ. ರಾಯನ್ ತೊದಲು ನುಡಿಯಲ್ಲಿ ಅಮ್ಮ, ತಾತ, ಅಪ್ಪ ಎಂದಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಕಷ್ಟು ಲೈಕ್ಸ್ ಕೂಡ ಬಂದಿದೆ. ನಟಿ ಮೇಘನಾ ರಾಜ್ ಆಗಾಗಾ ತಮ್ಮ ಮಗನ ಬಗ್ಗೆ ಒಂದಲ್ಲಾ ಒಂದು ಫೋಟೊ ವಿಡಿಯೋ ಹಂಚಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ರಾಯನ್ ವಿಡಿಯೋ ಫೊಟೋಗಳನ್ನು ನೋಡಲು ಬಯಸುವ ಸಾಕಷ್ಟು ಜನರು ಇದ್ದಾರೆ.

  ರಾಯನ್ ರಾಜ್‌ಗೆ ಮ್ಯೂಸಿಕ್ ಎಂದರೆ ಬಲು ಇಷ್ಟ!

  ರಾಯನ್ ರಾಜ್‌ಗೆ ಮ್ಯೂಸಿಕ್ ಎಂದರೆ ಬಲು ಇಷ್ಟ!

  ರಾಯನ್ ಟಿವಿಯಲ್ಲಿ ಮೇಘನಾ ಅವರ ಕಾರ್ಯಕ್ರಗಳನ್ನು ಹಾಕಿದರೆ. ನೋಡುತ್ತಾನಂತೆ, ಅಲ್ಲದೆ ಡಾನ್ಸ್ ಕೂಡ ಮಾಡುತ್ತಾನಂತೆ. "ನನ್ನ ಕಾರ್ಯಕ್ರಮವನ್ನು ರಾಯನ್ ಟಿವಿಯಲ್ಲಿ ನೋಡ್ತಾನೆ. ಅವನು ಡಾನ್ಸ್ ಮಾಡ್ತಾನೆ. ಅಂದರೆ ಕಲರ್ ಫುಲ್ ಫ್ರೇಮ್, ಮ್ಯೂಸಿಕ್, ಅವನಿಗೆ ಇಷ್ಟ ಆಗುತ್ತೆ. ಹಾಗಾಗಿ ಡಾನ್ಸ್ ಮಾಡ್ತಾನೆ. ಆದರೆ ಇದನೆಲ್ಲಾ ಅರ್ಥಮಾಡಿಕೊಳ್ಳಲು ಅವನು ತುಂಬಾ ಚಿಕ್ಕವನು." ಎಂದಿದ್ದಾರೆ.

  ಸಿನಿಮಾಗಳಲ್ಲೂ ನಟಿ ಮೇಘನಾ ಬ್ಯುಸಿ!

  ಸಿನಿಮಾಗಳಲ್ಲೂ ನಟಿ ಮೇಘನಾ ಬ್ಯುಸಿ!

  ಕಿರುತೆಯ ಕಾರ್ಯಕ್ರಮದ ಜೊತೆಗೆ ನಟಿ ಮೇಘನಾ ರಾಜ್ ಅವರು ಸಿನಿಮಾದಲ್ಲಿ ಸಕ್ರಿಯ ಆಗ ತೊಡಗಿದ್ದಾರೆ. ಈಗಾಗಲೇ ಅವರು ಒಂದೆರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅವರ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಇತ್ತೀಚೆಗೆ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ ಆಗುವ ಬಗ್ಗೆ ಫೊಟೋ ಒಂದನ್ನು ಕೂಡ ಮೇಘನಾ ಅವರು ಹಂಚಿಕೊಂಡಿದ್ದರು. ಒಟ್ಟಾರೆ ಮೇಘನಾ ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಸಕ್ರಿಯ ಆಗುತ್ತಿದ್ದು, ಅಭಿಮಾನಿಗಳ ಮುಂದಿದೆ ಸಿನಿಮಾಗಳ ಮೂಲಕ ಮತ್ತೆ ಬರಲಿದ್ದಾರೆ.

  English summary
  Meghana Raj Son Rayan Raj Start Speaking He Said Appa As First Word, Meghana Raj Share Video,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X