'ಸೀತಾರಾಮ' ಶೂಟಿಂಗ್‌ಗಾಗಿ ನಾಲ್ಕು ಪ್ಲೇಟ್ ಪಾನಿಪುರಿ ತಿಂದ ಮೇಘನಾ ಶಂಕರಪ್ಪ; ವಿಡಿಯೋ ವೈರಲ್
ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳಿಗೆ ರಾಮ ಯಾರು ಎಂಬ ಸತ್ಯ ಗೊತ್ತಾಗಿ ಕೋಪದ ಜೊತೆಗೆ ಸುಳ್ಳು ಹೇಳಿದ್ದಕ್ಕೆ ನಿರಾಸೆಗೊಂಡಿದ್ದಾಳೆ.
ಅಶೋಕ ದೇಸಾಯಿ ಕುಟುಂಬದ ಕುಡಿ ಅಲ್ಲ, ರಾಮ್ ಬಾಸ್ ಎಂಬ ಸತ್ಯ ತಿಳಿದ ಪ್ರಿಯಾ ಕೂಡ ನಿರಾಸೆಗೊಂಡಿದ್ದು, ಒಬ್ಬಳೇ ಆತಂಕಗೊಂಡಿದ್ದಾಳೆ.

ಸೀತಾ ರಾಮ ಧಾರಾವಾಹಿಯಲ್ಲಿ ಈಗ ಎಲ್ಲರ ಮನದಲ್ಲೂ ಗೊಂದಲ, ನಿರಾಸೆ, ಬೇಸರ, ಕೋಪ, ಹತಾಶೆ ಮನೆ ಮಾಡಿದೆ. ಆದರೆ, ಭಾರ್ಗವಿ ಮಾತ್ರವೇ ಹ್ಯಾಪಿಯಾಗಿದ್ದಾಳೆ.
ಸೂಪರ್ ಆಗಿದೆ ಪ್ರಿಯಾ-ಅಶೋಕ್ ಜೋಡಿ
ಈ ಧಾರಾವಾಹಿಯಲ್ಲಿ ಅಶೋಕನಿಗೆ ಜೋಡಿಯಾಗಿ ಪ್ರಿಯಾ ಇದ್ದಾಳೆ. ಪ್ರಿಯಾ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಅಶೋಕನಿಗೆ ಗೊತ್ತಿದ್ದರೂ, ಸುಮ್ಮನಿದ್ದಾನೆ. ಪ್ರಿಯಾಳಿಗೆ ಶ್ರೀಮಂತನ ಮನೆಯ ಹುಡುಗನನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗಬೇಕು ಎನ್ನುವ ಆಸೆ. ಈಗ ಅಶೋಕ್ ದೇಸಾಯಿ ಕುಟುಂಬದವನಲ್ಲ ಎಂಬುದನ್ನು ತಿಳಿದು ಬಹಳ ಬೇಸರಗೊಂಡಿದ್ದಾಳೆ. ಆದರೆ ಅಭಿಮಾನಿಗಳು ಇವರಿಬ್ಬರೂ ಡೇಟಿಂಗ್ ಆರಂಭಿಸುತ್ತಾರೋ ಎಂದು ಕಾಯುತ್ತಿದ್ದಾರೆ. ಗುಂಡು ಗುಂಡಾಗಿರುವ ನಟಿ ಪ್ರಿಯಾ ಅವರು ಬಹಳ ಮುದ್ದಾಗಿದ್ದು, ಅವರ ನಟನೆಯನ್ನು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.
ನಾಲ್ಕು ಪ್ಲೇಟ್ ಪಾನಿಪುರಿ ತಿಂದ ನಟಿ
ಇನ್ನು ಸೀತಾಳಿಗೆ ಕೋಪ ಬಂದಿರುವುದಕ್ಕೆ ರಾಮ್ ಸಂಕಟದಲ್ಲಿ ಊಟ ಮಾಡಿಲ್ಲ. ಹೀಗಿರುವಾಗ ಪ್ರಿಯಾ ಮಾತ್ರ ಸೀತಾಳಂತೆ ನಿರಾಸೆಗೊಂಡಿದ್ದರೂ ಕೂಡ ಪ್ಲೇಟ್ ಮೇಲ್ ಪ್ಲೇಟ್ ಪಾನಿಪುರಿ ತಿಂದು ತನ್ನ ಕೋಪವನ್ನು ಊಟದ ಮೇಲೆ ತೋರಿಸಿಕೊಂಡಿದ್ದಾಳೆ. ತನ್ನ ಕೋಪ ಮತ್ತು ಗೊಂದಲದ ಮನಸ್ಸನ್ನು ತಿಳಿಗೊಳಿಸಿಕೊಳ್ಳಲು ಪಾನಿಪುರಿ ತಿಂದಿರುವ ಪ್ರಿಯಾಳನ್ನು ನೋಡಿ ವೀಕ್ಷಕರು ನಕ್ಕಿದ್ದಾರೆ. ಆದರೆ, ಪ್ರಿಯಾಳ ಸಂಕಟ ಅವಳಿಗೆ ಮಾತ್ರವೇ ಗೊತ್ತು.

ನಟಿ ಮೇಲೆ ಅಭಿಮಾನಿಗಳ ಕಾಳಜಿ
ಪ್ರಿಯಾ ಪಾನಿಪುರಿ ತಿನ್ನುವ ದೃಶ್ಯದಲ್ಲಿ ನಾಲ್ಕು ಪ್ಲೇಟ್ ತಿಂದಿದ್ದು, ಈ ಬಗ್ಗೆ ಸ್ವತಃ ನಟಿ ಮೇಘನಾ ಶಂಕರಪ್ಪ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ತಿಳಿದ ಅಭಿಮಾನಿಗಳು ಅಯ್ಯೋ ಪಾಪ ಎಂದು ನಕ್ಕಿದ್ದಾರೆ ಕೂಡ. ಮೇಘನಾ ಶಂಕರಪ್ಪ ಇತ್ತೀಚೆಗಷ್ಟೇ ಸ್ವಲ್ಪ ಸಣ್ಣ ಕಾಣಿಸುತ್ತಿದ್ದರು. ಆದರೆ ಶೂಟಿಂಗ್‌ಗಾಗಿ ಹೀಗೆ ಪ್ಲೇಟ್ ಮೇಲೆ ಪ್ಲೇಟ್ ಚಾಟ್ಸ್ ತಿಂದರೆ ಮತ್ತೆ ದಪ್ಪಗಾಗಬಹುದು ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಮೇಘನಾ ಧಾರಾವಾಹಿ ಜರ್ನಿ
ಭರತನಾಟ್ಯವನ್ನು ಇಷ್ಟಪಡುವ ಮೇಘನಾ ಬಿಬಿಎಂ ಓದಿದ್ದಾರೆ. ಉದಯ್ ಪುರ್, ಜೈಪುರ, ಕುಂದಾಪುರ ಸೇರಿದಂತೆ ಅಲ್ಲಲ್ಲಿ ಪ್ರವಾಸ ಕೂಡ ಕೈಗೊಳ್ಳುತ್ತಿರುತ್ತಾರೆ. 'ಕಿನ್ನರಿ', 'ಕೃಷ್ಣ ತುಳಸಿ', 'ದೇವಯಾನಿ', 'ರತ್ನಗಿರಿ ರಹಸ್ಯ', 'ಸಿಂಧೂರಿ', 'ನಮ್ಮನೆ ಯುವರಾಣಿ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟಿದ್ದ ಮೇಘನಾ ಮುಂದೆ 'ಕಿನ್ನರಿ' ಧಾರಾವಾಹಿ ಮೂಲಕ ನಟನೆಯನ್ನು ಪ್ರಾರಂಭಿಸಿದರು. ಮೇಘನಾ ದಪ್ಪಗಿದ್ದರೂ ಕೂಡ ಬಹಳ ಮುದ್ದಾಗಿ ಕಾಣಿಸುತ್ತಾರೆ. ಸೀತಾ ರಾಮ ಧಾರಾವಾಹಿ ಮೇಘನಾ ನಟನಾ ವೃತ್ತಿಗೆ ಒಳ್ಳೆಯ ಬ್ರೇಕ್ ಕೊಟ್ಟಿದೆ. ಧಾರಾವಾಹಿಯಲ್ಲಿ ಚಟಪಟ ಅಂತ ಮಾತನಾಡುವ ಮೇಘನಾ ನಿಜ ಜೀವನದಲ್ಲೂ ಹಾಗೆಯೇ ಮಾತನಾಡುತ್ತಾರಂತೆ. ಯಾವ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಕ್ಕೆ ಬಯಸುವುದಿಲ್ಲವಂತೆ.


Click it and Unblock the Notifications











