ಬ್ಯೂಟಿಫುಲ್ ಮನಸ್ಸುಗಳು ರತ್ನ ಈಗ ಸ್ಮಾಲ್ ಸ್ಕ್ರೀನ್ ಸೂಪರ್ ಸ್ಟಾರ್
ಬ್ಯೂಟಿಫುಲ್ ಮನಸ್ಸುಗಳು ಚಿತ್ರ ಬಿಡುಗಡೆ ಆದಾಗ ಚಿತ್ರದ ಬಗ್ಗೆ ಹಾಗೂ ಅದರಲ್ಲಿನ ಪಾತ್ರದ ಬಗ್ಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು. ನಾಯಕಿ ಪಾತ್ರದಲ್ಲಿ ಅಭಿನಯಿಸಿದ ಶೃತಿ ಹರಿಹರನ್ , ನಿನಾಸಂ ಸತೀಶ್ ಸೇರಿದಂತೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಮೇಘಶ್ರೀ ಪಾತ್ರವನ್ನೂ ಎಲ್ಲರೂ ಮೆಚ್ಚಿಕೊಂಡಿದ್ದರು.
ಬ್ಯೂಟಿಫುಲ್ ಮನಸ್ಸುಗಳು ಚಿತ್ರಕ್ಕೂ ಮುಂಚೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ ಮೇಘಶ್ರೀ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ತಂದುಕೊಟ್ಟ ಸಿನಿಮಾ . ಅದಾದ ನಂತರ ಮುಗುಳು ನಗೆ ಸಿನಿಮಾದಲ್ಲಿ ಮೇಘ ಗಣೇಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಮೇಘಶ್ರೀ ಸದ್ಯ ಕಿರುತೆರೆಯಲ್ಲಿ ಸ್ಟಾರ್ ನಟಿಯಾಗಿದ್ದಾರೆ. ಅದರ ಜೊತೆಯಲ್ಲಿ ಹೊಸ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಮೇಘಶ್ರೀ ಅಭಿನಯದ ಚಿತ್ರ ಯಾವುದು? ಕಿರುತೆರೆಯಲ್ಲಿ ಸ್ಟಾರ್ ಆಗಿರುವ ಈ ನಟಿಯ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಮುಂದೆ ಓದಿ

ಪದ್ಮಾವತಿ ಧಾರಾವಾಹಿಯಲ್ಲಿ ಮೇಘ
ನಟಿ ಮೇಘಶ್ರೀ 'ಬ್ಯೂಟಿಫುಲ್ ಮನಸ್ಸುಗಳು' ಹಾಗೂ 'ಮುಗುಳು ನಗೆ' ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರಿಗೆ ಚಿರ ಪರಿಚಿತರು. ಈಗಾಗಲೇ ಕನ್ನಡದಲ್ಲಿ ಹತ್ತು ಚಿತ್ರಗಳಲ್ಲಿ ಅಭಿನಯಿಸಿರುವ ಮೇಘಶ್ರೀ ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಖ್ಯಾತ ಧಾರಾವಾಹಿಗಳಲ್ಲಿ ಅಭಿನಯ
ಕಿರುತೆರೆಯಲ್ಲಿಯೂ ಹತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಮೇಘಶ್ರೀ ಹೆಚ್ಚಾಗಿ ಅಭಿನಯಿಸಿದ್ದು ನೆಗೆಟಿವ್ ಪಾತ್ರಗಳಲ್ಲಿ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ಪದ್ಮಾವತಿ ಧಾರಾವಾಹಿಯಲ್ಲಿ ನಾಯಕನ ಅಕ್ಕನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಸಿನಿಮಾ-ಧಾರಾವಾಹಿಗಳಲ್ಲಿ ಅಭಿನಯ
ಧಾರಾವಾಹಿ ಹಾಗೂ ಸಿನಿಮಾ ಎರಡರಲ್ಲಿಯೂ ಅಭಿನಯ ಮಾಡುತ್ತಾ ಬರುತ್ತಿರುವ ಮೇಘಶ್ರೀ ಇತ್ತೀಚಿಗಷ್ಟೆ 'ಸ್ಟೇಟ್ ಮೆಂಟ್' ಎನ್ನುವ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತಂಡ ಹಾಗೂ ಹಾಡು ಚೆನ್ನಾಗಿದೆ ಎನ್ನುವ ನಿಟ್ಟಿನಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿ
ಸದ್ಯ ಧಾರಾವಾಹಿಯಲ್ಲಿ ಬ್ಯುಸಿ ಆಗಿರುವ ಮೇಘಶ್ರೀ ಒಳ್ಳೆ ಬ್ಯಾನರ್ ನಲ್ಲಿ ನಿರ್ಮಾಣ ಆಗುವ ಚಿತ್ರದಲ್ಲಿನ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಅಭಿನಯಿಸುವ ಆಸೆ ಹೊಂದಿರುವ ಮೇಘಶ್ರೀ ಆದಷ್ಟು ಬೇಗ ಒಳ್ಳೆ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.


Click it and Unblock the Notifications











