26 ಸಿನಿಮಾಗಳಿಗೆ ಹಾಡು ಹಾಡಿದ ಮೆಹಬೂಬ್ ಸಾಬ್
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ಅದೆಷ್ಟೋ ಪ್ರತಿಭಾವಂತ ಗಾಯಕರನ್ನು ಕರ್ನಾಟಕಕ್ಕೆ ಪರಿಚಯ ಮಾಡಿಸಿದೆ. ಆ ಪೈಕಿ ಒಬ್ಬರು ಮೆಹಬೂಬ್ ಸಾಬ್.
ಸರಿಗಪಮ ಸೀಸನ್ 13 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೆಹಬೂಬ್ ಸಾಬ್ ಎರಡನೇ ಸ್ಥಾನ ಪಡೆದರು. ನಂತರ ಅವರ ಸಿನಿಮಾ ಜರ್ನಿ ಶುರು ಆಯ್ತು.
'ರಾಂಬೋ 2' ಸಿನಿಮಾದ 'ಬಿಟ್ ಹೋಗ್ಬೆಡ ನನ್ನ..' ಹಾಡಿನ ಮೂಲಕ ಮೆಹಬೂಬ್ ದೊಡ್ಡ ಖ್ಯಾತಿ ಪಡೆದರು. ಆ ಹಾಡಿನ ಬಳಿಕ 26 ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ. 'ರಾಂಬೋ 2', 'ಕತ್ತಲ ಕೋಣೆ', 'ಮನೋರಥ' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರಿಗೆ ಅವಕಾಶ ಸಿಕ್ಕಿದೆ.

ಕಳೆದ ವಾರ ಮತ್ತೆ ಮೆಹಬೂಬ್ ಸಾಬ್ ಸರಿಗಮಪ ವೇದಿಕೆ ಮೇಲೆ ಬಂದಿದ್ದರು. ಈ ವೇಳೆ ತಮ್ಮ ಹಾಡುಗಳು ಬಗ್ಗೆ ಮಾತನಾಡಿದರು. ಮೆಹಬೂಬ್ ಸಾಧನೆಗೆ ಗಾಯಕ ವಿಜಯ ಪ್ರಕಾಶ್, ಅನುಶ್ರೀ, ರಾಜೇಶ್ ಕೃಷ್ಣನ್ ಹಾಗೂ ಹಂಸಲೇಖ ಅಭಿನಂದನೆ ಸಲ್ಲಿಸಿದರು.
More from Filmibeat
English summary
Zee Kannada channel's 'Sarigamapa Season 13' runner up Mehbub Saab sang more than 26 movies.


Click it and Unblock the Notifications











