'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಗೆದ್ದವರಿಗೆ ಸಿಕ್ಕ ಬಹುಮಾನ ಎಷ್ಟು.?

By Bharath Kumar

Recommended Video

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಗೆದ್ದವರಿಗೆ ಸಿಕ್ಕಿದ್ದು ಇಷ್ಟಾ... | Filmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಯಶಸ್ವಿಯಾಗಿ ಅಂತ್ಯವಾಗಿದೆ. ಸುಮಾರು ಮೂರುವರೆ ತಿಂಗಳು ಕಾಲ ಸುಧೀರ್ಘವಾಗಿ ಮನರಂಜಿಸಿದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ನಾಲ್ಕನೇ ಆವೃತ್ತಿಯ ವಿನ್ನರ್ ಯಾರೆಂದು ಬಹಿರಂಗವಾಗಿದೆ.

ನಗರದಲ್ಲೇ ಹುಟ್ಟಿ ಬೆಳದ, ಹಳ್ಳಿ ಜೀವನ ಏನೆಂದು ತಿಳಿಯದ 12 ಹುಡುಗಿಯರು ತಮ್ಮ ಮನೆಗಳಿಂದ, ಸಂಬಂಧಿಕರಿಂದ ದೂರವಾಗಿ 3 ತಿಂಗಳ ಕಾಲ ಅಜ್ಞಾತ ಹಳ್ಳಿಯಲ್ಲಿ ವಾಸಿಸಬೇಕಿತ್ತು.

ಈ ಕಾರ್ಯಕ್ರಮದ ಅರಂಭದಲ್ಲಿ ಒಟ್ಟು 12 ಜನ ಭಾಗವಹಿಸಿದ್ದರು. ಆದ್ರೆ, ಕೊನೆಯದಾಗಿ ಫಿನಾಲೆ ವೇದಿಕೆಯಲ್ಲಿ ನಾಲ್ಕು ಜನ ಸ್ಥಾನ ಪಡೆದುಕೊಂಡಿದ್ದರು. ಅಭಿಘ್ನ, ಮೆಬೀನಾ ಮೈಕೆಲ್, ಶಹನ್ ಪೊನಮ್ಮ, ಪ್ರಿಯಾಂಕಾ ಈ ನಾಲ್ಕು ಜನರಲ್ಲಿ ಗೆದ್ದವರು ಒಬ್ಬರು. ಇವರಿಗೆ ಸಿಕ್ಕಿದ್ದು ಬಹುದೊಡ್ಡ ಮೊತ್ತ. ಹಾಗಿದ್ರೆ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ ನಾಲ್ಕರ ವಿನ್ನರ್ ಯಾರು.? ಅವರಿಗೆ ಸಿಕ್ಕ ಬಹುಮಾನ ಎಷ್ಟು.? ಮುಂದೆ ಓದಿ.....

ಮೆಬೀನಾ ಮೈಕೆಲ್ ಮುಡಿಗೆ ಪ್ರಶಸ್ತಿ

ಮೆಬೀನಾ ಮೈಕೆಲ್ ಮುಡಿಗೆ ಪ್ರಶಸ್ತಿ

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ನಾಲ್ಕನೇ ಆವೃತ್ತಿಯ ವಿನ್ನರ್ ಆಗಿ ಮೆಬೀನಾ ಮೈಕೆಲ್ ಹೊರಹೊಮ್ಮಿದ್ದಾರೆ. ಯಾವುದೇ ವಿವಾದ, ಎಲ್ಲ ಚಟುವಟಿಕೆಯಲ್ಲೂ ಉತ್ತಮವಾಗಿ ಭಾಗವಹಿಸಿದ್ದ ಮೆಬೀನಾ ಪ್ರಶಸ್ತಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ಮೊದಲ ಸ್ಥಾನಕ್ಕೆ ಸಿಕ್ಕ ಬಹುಮಾನ.?

ಮೊದಲ ಸ್ಥಾನಕ್ಕೆ ಸಿಕ್ಕ ಬಹುಮಾನ.?

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ನಾಲ್ಕನೇ ಆವೃತ್ತಿಯ ಜಯಶಾಲಿಯಾದ ಮೆಬೀನಾ ಮೈಕೆಲ್ ಗೆ ಬರೋಬ್ಬರಿ 7 ಲಕ್ಷ ಬಹುಮಾನ ದೊರೆಯಿತು. ಜೊತೆಗೆ ಆಕರ್ಷಕ ಟ್ರೋಫಿ ಕೂಡ ನೀಡಲಾಯಿತು.

ಎರಡನೇ ಸ್ಥಾನ ಪಡೆದ ಪೊನ್ನಮ್ಮ

ಎರಡನೇ ಸ್ಥಾನ ಪಡೆದ ಪೊನ್ನಮ್ಮ

ಮೆಬೀನಾ ಮೈಕೆಲ್ ಗೆ ತೀವ್ರ ಪೈಪೋಟಿ ನೀಡಿದ್ದ ಶಹಾನ್ ಪೊನ್ನಮ್ಮ ಅವರು ನಾಲ್ಕನೇ ಆವೃತ್ತಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡರು.

ಪೊನ್ನಮ್ಮಗೆ ಸಿಕ್ಕ ನಗದು ಎಷ್ಟು.?

ಪೊನ್ನಮ್ಮಗೆ ಸಿಕ್ಕ ನಗದು ಎಷ್ಟು.?

ಎರಡನೇ ಸ್ಥಾನ ಪಡೆದ ಶಹಾನ್ ಪೊನ್ನಮ್ಮಗೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ತಂಡದಿಂದ 3 ಲಕ್ಷ ಬಹುಮಾನ ಸಿಕ್ಕಿದೆ. ಇದನ್ನು ಖುಷಿಯಿಂದ ಸ್ವೀಕರಿಸಿದ ಪೊನ್ನಮ್ಮ ''ನಾನು ಎರಡನೇ ಸ್ಥಾನವನ್ನ ಮೊದಲೇ ನಿರೀಕ್ಷಿಸಿದ್ದೆ'' ಎಂದು ಸಂತಸ ವ್ಯಕ್ತಪಡಿಸಿದರು.

ನಂತರದ ಸ್ಥಾನದಲ್ಲಿ ಇಬ್ಬರು

ನಂತರದ ಸ್ಥಾನದಲ್ಲಿ ಇಬ್ಬರು

ಇನ್ನು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ನಾಲ್ಕನೇ ಆವೃತ್ತಿಯಲ್ಲಿ ಫಿನಾಲೆ ವಿನ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಘ್ನ ಟಾಪ್ ಮೂರರಲ್ಲಿ ಕಾಣಿಸಿಲ್ಲ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ಪ್ರಿಯಾಂಕಾ ಮತ್ತು ಅಭಿಘ್ನ ಇಬ್ಬರಿಗೂ ತಲಾ 50 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.

More from Filmibeat

English summary
Membina michael Wins star suvarna Channel's popular show Pyate hudgir halli life season 4 reality show and she get big amount with trophy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X