BBK 12 ; ಕಿಚ್ಚನ ಚಪ್ಪಾಳೆ ಬೆಲೆ ಕಳ್ಕೊಂಡಿದ್ಯಾ ? ರಜತ್ ಹೇಳಿದ್ದೇನು ?
ಕರುನಾಡಿನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಕಾರಣ ಸುದೀಪ್. ಹನ್ನೆರಡು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ.
ನಿದ್ರೆಯನ್ನು ಕೂಡ ಮರೆತು ''ಬಿಗ್ ಬಾಸ್''ಗೋಸ್ಕರ ಬೆವರು ಸುರಿಸಿದ್ಧಾರೆ.ಇನ್ನು, ಸುದೀಪ್ ಅವರಿಗೆ 'ಬಿಗ್ ಬಾಸ್'' ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಬದುಕಿನ ಬಹುಮುಖ್ಯವಾದ ಭಾಗ. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದಾರೆ ಕೂಡ.

ಇಂಥಾ ಸುದೀಪ್ ಅವರ ವಿರುದ್ಧ ಸದ್ಯ ಅಸಮಾಧಾನದ ಅಲೆ ಎದ್ದಿದೆ. ಕಳೆದ ವಾರಾಂತ್ಯದ ಕಿಚ್ಚನ ಚಪ್ಪಾಳೆ ಹಲವರನ್ನು ಕೆರಳಿಸಿದೆ. ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ''ಕಿಚ್ಚನ ಚಪ್ಪಾಳೆ'' ಸಿಕ್ಕಿದ್ದರಿಂದ ಬೇಸರಗೊಂಡಿರುವ ಹಲವರು ನಿಮ್ಮ ಚಪ್ಪಾಳೆ ಈಗ ಗೌರವ ಕಳೆದುಕೊಂಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನೀವು ನೀಡಿದ ಚಪ್ಪಾಳೆ ನ್ಯಾಯಸಮ್ಮತ ಆಗಿರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಹನ್ನೊಂದರ ಸ್ಫರ್ಧಿ ಮತ್ತು ಈ ಬಾರಿ ಕೂಡ ವಿಶೇಷ ಅತಿಥಿಯಾಗಿ ಮನೆಗೆ ಹೋಗಿದ್ದ ರಜತ್ ಪ್ರತಿಕ್ರಿಯೆ ನೀಡಿದ್ಧಾರೆ. ಈ ಕುರಿತು ''ಟಿವಿ 9'' ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಜತ್ ಒಳ್ಳೆಯದು ಮಾಡಿದರೂ ಜನರು ಮಾತಾಡುತ್ತಾರೆ, ಕೆಟ್ಟದ್ದು ಮಾಡಿದರೂ ಮಾತನಾಡುತ್ತಾರೆ. ಹಾಗಾದ್ರೆ ಈ ವಾರ ಯಾರಿಗೆ ಕಿಚ್ಚ ಚಪ್ಪಾಳೆ ಕೊಡಬೇಕಿತ್ತಂತೆ..? ಎಂದು ಪ್ರಶ್ನೆ ಮಾಡಿದ್ದಾರೆ.
''ಬಿಗ್ ಬಾಸ್'' ಮನೆಯಲ್ಲಿ ಏನು ನಡೆದಿದೆಯೋ ಅದನ್ನು ಮಾತ್ರ ಅವರು ತೋರಿಸಿದ್ದಾರೆ ಎಂದಿರುವ ರಜತ್ ಯಾರಿಗೆ ಚಪ್ಪಾಳೆ ಸಲ್ಲಬೇಕು, ಯಾರಿಗೆ ಸಲ್ಲಬಾರದು ಎನ್ನುವುದನ್ನೆಲ್ಲಾ ಅಳೆದು ತೂಗಿ ಸುದೀಪ್ ಸರ್ ಚಪ್ಪಾಳೆ ಹೊಡೆದಿರುತ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು ಕನ್ನಡ ''ಬಿಗ್ ಬಾಸ್''ನಲ್ಲಿ ''ಕಿಚ್ಚನ ಚಪ್ಪಾಳೆ'' ತುಂಬಾನೇ ಮಹತ್ವದ್ದು ಎಂದು ಹೇಳಿರುವ ರಜತ್ ''ಬಿಗ್ ಬಾಸ್'' ಮನೆಯಲ್ಲಿ ಕ್ಯಾಪ್ಟನ್ ಆಗುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ದೊಡ್ಡದು ''ಕಿಚ್ಚನ ಚಪ್ಪಾಳೆ'' ಎಂದಿದ್ದಾರೆ. ಅಶ್ವಿನಿ ಗೌಡ ಅವರಿಗಾಗಲಿ, ಧ್ರುವಂತ್ ಅವರಿಗಾಗಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ ಎಂದರೆ ಅದರರ್ಥ ಅವರು ಅರ್ಹರು ಎಂದು ಕೂಡ ಹೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ಅರ್ಹರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಾಗ ಜನರು ದ್ವೇಷ ಯಾಕೆ ತೋರಿಸಬೇಕು ಎಂದು ಪ್ರಶ್ನೆ ಮಾಡಿರುವ ರಜತ್ ಎಲ್ಲದನ್ನೂ ಯೋಚನೆ ಮಾಡಿಯೇ ಸುದೀಪ್ ಸತ್ ಕೊಟ್ಟಿರುತ್ತಾರೆ ಎಂದು ಹೇಳಿದ್ದಾರೆ. ನಿಮಗೆ ಯಾರಿಗೆ ಬೇಕೋ ಅವರಿಗೇ ಕಿಚ್ಚನ ಚಪ್ಪಾಳೆ ಕೊಟ್ಟುಕೊಂಡು ಹೋಗೋಕೆ ಆಗತ್ತಾ? ಆಗಲ್ಲ ತಾನೇ? ಎಂದು ಪ್ರಶ್ನೆಯನ್ನು ಮಾಡಿರುವ ರಜತ್ ನನ್ನ ಪ್ರಕಾರ ಕಳೆದ ವಾರ ಕಿಚ್ಚನ ಚಪ್ಪಾಳೆ ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ಕೊಟ್ಟಿರುವುದು ಸರಿ ಇದೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಗಿಲ್ಲಿ ಬಗ್ಗೆ ಪ್ರಶಂಸೆಯ ಮಾತುಗಳನ್ನೂ ಕೂಡ ರಜತ್ ಆಡಿದ್ದಾರೆ.
ಸದ್ಯ ಕಿಚ್ಚನ ಚಪ್ಪಾಳೆ ವಿಚಾರ ಮತ್ತು ವಿವಾದದ ಹೊರತಾಗಿ ಮನೆಯಲ್ಲಿ ಗಿಲ್ಲಿ.. ಅಶ್ವಿನಿ ಗೌಡ.. ಕಾವ್ಯಾ.. ರಕ್ಷಿತಾ.. ಧ್ರುವಂತ್.. ಧನುಷ್ ಮತ್ತು ರಘು ಇದ್ದು ಮೀಡ್ ವೀಕ್ ಎಲಿಮಿನೇಷನ್‌ನಲ್ಲಿ ಯಾರು ಹೊರಗಡೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











