ತೆಲುಗು 'ಬಿಗ್ ಬಾಸ್' ಮನೆಯಲ್ಲಿರುವ ಕನ್ನಡ ನಟಿ ಸಂಜನಾಗೆ ಮಹಾ ಮೋಸ, ನಡುರಾತ್ರಿ ಮನೆಯಿಂದ ಹೊರಕ್ಕೆ
''ಬಿಗ್ ಬಾಸ್'' ಮನೆ ಒಳಗೆ ಯಾರೆಲ್ಲಾ ಹೊಗ್ತಾರೆ ಎನ್ನುವ ಕುತೂಹಲ ಕಾರ್ಯಕ್ರಮ ಆರಂಭವಾಗುವ ಮುನ್ನ ಹಲವರಲ್ಲಿ ಹೇಗೆ ಇರುತ್ತೋ, ಅದೇ ರೀತಿ ಕಾರ್ಯಕ್ರಮ ಶುರುವಾದ ನಂತರ ಮನೆಯಿಂದ ಹೊರ ಬರುವುದು ಯಾರು..? ಎನ್ನುವ ಪ್ರಶ್ನೆ ಹಲವರಿಗೆ ಕಾಡಲು ಶುರು ಆಗುತ್ತೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಪ್ರೇಕ್ಷಕರನ್ನು ಸೆಳೆಯಲು ''ಬಿಗ್ ಬಾಸ್'' ನಲ್ಲಿ ನಾನಾ ಕಸರತ್ತುಗಳಾಗುತ್ತವೆ.
ಆ ಪೈಕಿ ಕೆಲ ಒಮ್ಮೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಕೆಲ ಒಮ್ಮೆ ಪ್ಲ್ಯಾನ್ ತಲೆ ಕೆಳಗಾಗಿ ಟಿಆರ್‌ಪಿ ನೆಲ ಕಚ್ಚುತ್ತೆ. ಆ ಭಾಷೆ .. ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಪ್ರತಿ ವರ್ಷ ಈ ಸರ್ಕಸ್ ನಡೆದೇ ನಡೆಯುತ್ತೆ. ಈ ಬಾರಿಯ ''ಬಿಗ್ ಬಾಸ್'' ಕೂಡ ಇದರಿಂದ ಹೊರತಾಗಿಲ್ಲ. ತೆಲುಗು ''ಬಿಗ್ ಬಾಸ್'' ಇದಕ್ಕೆ ಸದ್ಯದ ಉದಾಹರಣೆ.

ಹೌದು, ಅಸಲಿಗೆ ಸಾಕಷ್ಟು ಕಸರತ್ತು ಮಾಡಿದ್ದರು ಕೂಡ ಕಳೆದ ವರ್ಷ ತೆಲುಗಿನ ''ಬಿಗ್ ಬಾಸ್'' ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಈ ಹಿನ್ನೆಲೆ ಈ ಬಾರಿ ಮನೆಯಲ್ಲಿ ತಾರೆಯರ ಜೊತೆ ಜನಸಾಮಾನ್ಯರನ್ನು ಕೂಡ ಕಳುಹಿಸಲಾಗಿದೆ.
ಹಾಗಂಥ ಫಲಿತಾಂಶ ಭಿನ್ನವೇನು ಬಂದಿಲ್ಲ. ಬದಲಿಗೆ ಕಳೆದ ಬಾರಿಗಿಂತ ಈ ಬಾರಿ ಸೆಪ್ಟೆಂಬರ್ 7ರಂದು ನಡೆದ ಗ್ರ್ಯಾಂಡ್ ಲಾಂಚ್ ಸಂಚಿಕೆಗೆ ಅತೀ ಕಡಿಮೆ ಟಿಆರ್‌ಪಿ ಸಿಕ್ಕಿದೆ. ಈ ಹಿನ್ನೆಲೆ ''ಬಿಗ್ ಬಾಸ್'' ಶುರುವಾದ ಈ 20 ದಿನದಲ್ಲಿಯೇ ಮನೆಯಲ್ಲಿ ಬೆಂಕಿ ಕಿಡಿಯನ್ನು ಹೊತ್ತಿಸಲಾಗಿದೆ. ಪ್ರೇಕ್ಷಕರನ್ನು ಸೆಳೆಯುವ ತಂತ್ರದ ಭಾಗವೆಂಬಂತೆ ಸಂಜನಾ ಗಲ್ರಾನಿ ಅವರನ್ನು ಮನೆಯಿಂದ ಹೊರ ಕಳುಹಿಸಲಾಗಿದೆ.
ಹೌದು, ಸಾಮಾನ್ಯವಾಗಿ ಕಾರ್ಯಕ್ರಮ ಮುಗಿಯುತ್ತಾ ಬಂದ ಸಮಯದಲ್ಲಿ ಮಿಡ್ ವೀಕ್ ಎಲಿಮನೇಷನ್ ಮಾಡುವುದು ಸಂಪ್ರದಾಯ. ಆದರೆ.. ಈ ಬಾರಿ ಆರಂಭದಲ್ಲಿಯೇ ಮನೆಯಾಚೆ ವಾರದ ಮಧ್ಯದಲ್ಲಿ ಕಳುಹಿಸುವ ಕೆಲಸವನ್ನು ''ಬಿಗ್ ಬಾಸ್'' ಮಾಡುತ್ತಿದೆ. ಗಾಢವಾದ ನಿದ್ರೆಯಲ್ಲಿ ಮುಳುಗಿದ್ದ ಸ್ಫರ್ಧಿಗಳಿಗೆ ಮಿಡ್ ವೀಕ್ ಎಲಿಮನೇಷನ್ ಶಾಕ್ ನೀಡಿದೆ.
ಆರಂಭದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ದಿವ್ಯಾ ನಿಖಿತ ಅವರನ್ನು ಕಳುಹಿಸಿದ ''ಬಿಗ್ ಬಾಸ್'' ಆ ನಂತರ ಕೆಂಪು ಬೀಜ ಯಾರ ಯಾರ ಕೈಯಲ್ಲಿದೆ ಅವರು ಒಬ್ಬರನ್ನು ಮನೆಯಿಂದ ಹೊರಗಡೆ ಕಳುಹಿಸಬಹುದು ಎನ್ನುವ ಆದೇಶವನ್ನು ನೀಡಿದೆ. ಈ ಹಿನ್ನೆಲೆ ರೆಡ್ ಸೀಡ್ಸ್ ಹೊಂದಿದ್ದ ಐದು ಜನ ಸಂಜನಾ ಅವರ ಹೆಸರನ್ನೇಳಿ ಅವರನ್ನು ಹೊರಗಡೆ ಕಳುಹಿಸಿದ್ಧಾರೆ.

ಯಾಕೆಂದರೆ.. ಸಂಜನಾ ''ಬಿಗ್ ಬಾಸ್'' ಮನೆಯ ಅನುಭವಿ ಸದಸ್ಯೆ. ಈಗಾಗಲೇ ಕನ್ನಡ ''ಬಿಗ್ ಬಾಸ್''ನಲ್ಲಿ ಭಾಗಿಯಾದ ಅನುಭವ ಇವರ ಬೆನ್ನಿಗಿದೆ. ಇದು ಅಲ್ಲದೇ ತೆಲುಗು ''ಬಿಗ್ ಬಾಸ್''ನ ಮೊದಲ ವಾರದಲ್ಲಿಯೇ ಕ್ಯಾಪ್ಟನ್ ಆದವರು ಸಂಜನಾ. ಮನೆಯ ನಾಯಕತ್ವ ವಹಿಸಿಕೊಂಡ ನಂತರ ಮನೆಯ ಉಳಿದ ಹಲವು ಸ್ಫರ್ಧಿಗಳ ಕೆಂಗಣ್ಣಿಗೆ ಸಂಜನಾ ಗುರಿಯಾಗಿದ್ದರು. ಆ ಕೋಪ-ತಾಪ ಈಗ ಸಂಜನಾ ಅವರನ್ನು ಮನೆಯಾಚೆ ಕಳುಹಿಸಿದೆ.
ಹಾಗಂಥ ಮನೆಯಿಂದ ಸಂಜನಾ ಹೊರ ಬಂದಿದ್ದಾರೆ ಅಂತಾನೂ ಇಲ್ಲ. ಯಾಕೆಂದರೆ ಇಲ್ಲೊಂದು ಟ್ವಿಸ್ಟ್ ಇಟ್ಟಿರುವ ''ಬಿಗ್ ಬಾಸ್'' ಸದ್ಯ ಸಂಜನಾ ಅವರನ್ನು ಸೀಕ್ರೆಟ್ ರೂಂಗೆ ಕಳುಹಿಸಲಾಗಿದೆ. ರೂಮ್‌ನಲ್ಲಿ ಕುಳಿತುಕೊಂಡು ಸಂಜನಾ ಮನೆಯ ವಾತಾವರಣವನ್ನು ನೋಡುತ್ತಿದ್ಧಾರೆ. ಮತ್ತೊಂದು ಕಡೆ ಇಂದು ನಾಗಾರ್ಜುನ ಹಲವು ಸ್ಫರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೇನಾಗುತ್ತೆ..? ಸಿಕ್ರೇಟ್ ರೂಮ್‌ನಲ್ಲಿರುವ ಸಂಜನಾ ಈ ''ಬಿಗ್ಬಾಸ್'' ಮನೆಯಲ್ಲಿ ಎಷ್ಟು ದಿನ ಉಳಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications