DKD ವೇದಿಕೆಗೆ ಬಂದ್ರು ಸಿದ್ದರಾಮಯ್ಯ & ದೇವೇಗೌಡ್ರು!; ಜಡ್ಜಸ್ ನಕ್ಕು ನಕ್ಕು ಸುಸ್ತು!

By ಎಸ್ ಸುಮಂತ್

ಮಹಾನಟಿ ರಿಯಾಲಿಟಿ ಶೋ ಮುಗಿದ ಬೆನ್ನಲ್ಲೇ ಜೀ ಕನ್ನಡ ಮತ್ತೊಂದು ರಿಯಾಲಿಟಿ ಶೋಗೆ ಅಣಿಯಾಗಿದೆ. ಡಿಕೆಡಿ ಸೀಸನ್ ಶುರುವಾಗಿದೆ. ಶನಿವಾರ ಮತ್ತು ಭಾನುವಾರ ಡ್ಯಾನ್ಸ್ ಪ್ರಿಯರಿಗೆ ಡಿಕೆಡಿ ಮಸ್ತ್ ಮಜಾ ಕೊಡಲಿದೆ. ರಕ್ಷಿತಾ ಪ್ರೇಮ್, ಶಿವಣ್ಣ, ವಿಜಯ್ ರಾಘವೇಂದ್ರ, ಚಿನ್ನಿ ಮಾಸ್ಟರ್ ತೀರ್ಪುಗಾರರಾಗಿ ಬಂದಿದ್ದಾರೆ. ಎಲ್ಲರ ಡ್ಯಾನ್ಸ್ ನೋಡುತ್ತಾ, ತೀರ್ಪು ಕೊಡುವುದರ ಜೊತೆಗೆ ನಕ್ಕು ನಲಿದಿದ್ದಾರೆ.

ಜೀ ಕನ್ನಡದಲ್ಲಿ ಯಾವಾಗಲೂ ಹೊಸತನವೇ ಇರಲಿದೆ. ಯಾವುದೇ ಶೋ ಶುರು ಮಾಡಿದರೂ ಕಳೆದ‌ ಬಾರಿಗಿಂತ ಈ ಬಾರಿ ಯಾವ ಹೊಸತನವನ್ನು ಕೊಡಬಹುದು ಎಂಬುದನ್ನೇ ಥಿಂಕ್ ಮಾಡುತ್ತಾರೆ. ಮಹಾನಟಿ ಶೋ ಇಲ್ಲಿಯವರೆಗೂ ನೀಡದ ರೀತಿಯಲ್ಲಿ ನೀಡಿದ್ದಾರೆ. ಈಗ ಡಿಕೆಡಿ ಕಾರ್ಯಕ್ರಮದಲ್ಲೂ ಹೊಸ ಎಕ್ಸ್ಪಿರಿಮೆಂಟ್ ಮಾಡಿದ್ದಾರೆ.

Mimicry gopi imitates siddaramaiah and devegowda at DKD show

ಸಿದ್ದರಾಮಯ್ಯ, ಗೌಡ್ರು ಎಂಟ್ರಿ!

ಮಿಮಿಕ್ರಿ ಗೋಪಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ರಾಜಕಾರಣಿಗಳ ಮಿಮಿಕ್ರಿ ಮಾಡುತ್ತಾ ಎಲ್ಲರ ಮನಸ್ಸು ಗೆದ್ದವರು. ಏನೇ ಟೆನ್ಶನ್ ಇದ್ದರೂ ಮಿಮಿಕ್ರಿ ಗೋಪಿ ಅವರ ವಿಡಿಯೋಗಳನ್ನು ನೋಡಿದರೆ ನಕ್ಕು ನಲಿಯುವುದು ಗ್ಯಾರಂಟಿ. ಇದೀಗ ಡಿಕೆಡಿ ವೇದಿಕೆ ಬಂದಿದ್ದಾರೆ. ಡ್ಯಾನ್ಸ್ ಮಾಡೋರ ಮಧ್ಯೆ ಮಿಮಿಕ್ರಿ ಮಾಡೋರಿಗೆ ಏನ್ ಕೆಲಸ ಅಂತ ಕೇಳಿದರೆ ಈ ಬಾರಿಯ ಸೀಸನ್ ಸ್ಪೆಷಾಲಿಟಿ ಅಂತಾನೇ ಹೇಳಬಹುದು.

ಸಿದ್ದರಾಮಯ್ಯ ಬಂದಂತ ಫೀಲ್

ಈಗ ಡಿಕೆಡಿ ವೇದಿಕೆಗೆ ಜುಬ್ಬಾ ಮತ್ತು ಪಂಚೆ ಹಾಕಿಕೊಂಡು, ಹೆಗಲ ಮೇಲೊಂದು ಶಲ್ಯ ಧರಿಸಿ ಬಂದಿದ್ದಾರೆ. ಆರಂಭದಲ್ಲಿಯೇ ಸಿದ್ದರಾಮಯ್ಯ ಅವರ ರೀತಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಮಾಡುವ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ರೀತಿಯೇ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ತಂದಿರುವ ಯೋಜನೆಗಳು, ರೈತರ ಬಗ್ಗೆ, ಹಾಲಿನ ಬಗ್ಗೆಯೂ ಮಾತನಾಡಿದ್ದಾರೆ. ಆ ವಾಯ್ಸ್ ಅಚ್ಚಿಟ್ಟಿದ್ದಂತೆಯೇ ಇತ್ತು.

Mimicry gopi imitates siddaramaiah and devegowda at DKD show

ನಕ್ಕು ನಕ್ಕು ಸುಸ್ತಾದ್ರು

ಮಿಮಿಕ್ರಿ ಗೋಪಿ ಅಂದ್ರೆ ಕೇಳಬೇಕಾ? ಅವರ ಒಂದೊಂದು ಮಾತು ಮುತ್ತಿನಂತೆ. ನಕ್ಕು ನಕ್ಕು ಸುಸ್ತಾಗಬೇಕು. ಆದರೆ ಅವ್ರು ಮಾತ್ರ ನಗಲ್ಲ. ಸ್ಟೇಜ್ ಗೆ ಬರುತ್ತಿದ್ದಂತೆಯೇ ಅನುಶ್ರೀ ಅವರಿಗೇನೆ ಸ್ವಾಗತಿಸಿ ನಹಿಸಿದರು. ಇನ್ನು ಸಿದ್ದರಾಮಯ್ಯ ರೀತಿ, ದೇವೇಗೌಡರ ರೀತಿ ಮಾತನಾಡಿ ಸ್ಟೇಜ್ ಮೇಲೆ ಕುಳಿತಿದ್ದ ತೀರ್ಪುಗಾರರಿಗೆ ನಗು ತರಿಸಿದರು. 'ಬಸ್ ಭಾಗ್ಯಾ ಕೊಟ್ರಿ, ಕರೆಂಟ್ ಭಾಗ್ಯಾ ಕೊಟ್ರಿ, ಎರಡು ಸಾವಿರದ ಭಾಗ್ಯಾ ಕೊಟ್ರಿ, ಹಾಗೇ ನಮ್ಮ ಪಕ್ಕದ ಮನೆ ಭಾಗ್ಯಾನ ಕೊಟ್ಟು ಮದುವೆ ಮಾಡ್ಸಿ' ಎಂಬ ಡೈಲಾಗ್ ಬೇರೆ ಹೊಡೆದಿದ್ದಾರೆ.

ಶಿವಣ್ಣನ ಮಾತುಗಳಿಗೆ ಗೋಪಿ ಖುಷ್

ಮಿಮಿಕ್ರಿ ಗೋಪಿ ಅವರನ್ನು ಶಿವಣ್ಣ ಹಾಡಿ ಹೊಗಳಿದ್ದಾರೆ. 'ಒಂದು ಕಲೆಗೆ ಯಾವಾಗ ಬೆಲೆ ಬರುತ್ತೆ ಅಂದ್ರೆ, ಒಂದು ಏನನ್ನೇ ಇಮಿಟೇಟ್ ಮಾಡಿದ್ರು ಅಬಾಸ ಆದ್ರೆ ಕಷ್ಟ. ಆದ್ರೆ ಇವ್ರು ಅಚ್ಚುಕಟ್ಟಾಗಿ ಮಾಡುತ್ತಾರೆ. ಅದಕ್ಕೆ ಅವರ ಕಲೆಗೆ ಅಷ್ಟು ಬೆಲೆ. ಒಬ್ಬ ಒಳ್ಳೆ ಮನುಷ್ಯ. ನಾನು ನಿಜಕ್ಕೂ ನಿಮ್ಮ ಅಭಿಮಾನಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ್ರು ಸೇರಿದಂತೆ ಎಷ್ಟೋ ಜನರ ಮಿಮಿಕ್ರಿ ಮಾಡ್ತೀರಾ. ವೆಲ್ ಕಮ್ ಟು ಡಿಕೆಡಿ' ಎಂದು ಹಾಡಿ ಹೊಗಳಿದ್ದಾರೆ.

More from Filmibeat

English summary
Zee kannada DKD Written Update on July 21st episode. Here is the details about Mimicry Gopi entry;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X