twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡದಲ್ಲಿ ಮೊದಲ ಮಿನಿ ಧಾರಾವಾಹಿ

    By Rajendra
    |

    Bhale Basava mini serial
    ಕನ್ನಡ ಕಿರುತೆರೆಯ 'ಮೆಗಾ' ಧಾರಾವಾಹಿಗಳ ಮಧ್ಯೆ ಹೊಸ ಮಿಂಚೊಂದು ಮಿನುಗಲು ಶುರುವಾಗಿದೆ. ಅದೇ 'ಜೀ ಕನ್ನಡ'ದ ಹೊಚ್ಚ ಹೊಸ ಪ್ರಯೋಗ 'ಮಿನಿ ಧಾರಾವಾಹಿ'. ಇದರ ಮೊದಲ ಯತ್ನವಾಗಿ ಜೂನ್ 24 ರಂದು ರಾತ್ರಿ 8 ಗಂಟೆಗೆ ಆರಂಭವಾಗುತ್ತಿರುವ ಮಿನಿ ಧಾರಾವಾಹಿ 'ಭಲೆ ಬಸವ'.

    ಕನ್ನಡದ ನಾಲ್ಕು ಮುಖ್ಯ ಮನರಂಜನಾ ಚಾನೆಲ್ ಗಳಲ್ಲಿ, ಈಗ 40 ಕ್ಕೂ ಹೆಚ್ಚು ಮೆಗಾ ಸೀರಿಯಲ್ ಗಳು ಪ್ರಸಾರವಾಗುತ್ತಿವೆ. ಕೆಲವು ಸೀರಿಯಲ್ ಗಳು ಸಾವಿರ ಎಪಿಸೋಡ್‍ಗಳನ್ನು ಪೂರೈಸಿದರೂ, ವೀಕ್ಷಕರ ಪ್ರೀತಿ ಕಳೆದುಕೊಳ್ಳದೆ ಪ್ರಸಾರವಾಗುತ್ತಿವೆ. ಇನ್ನು ಕೆಲವು ವೀಕ್ಷಕರ ತಾಳ್ಮೆ ಪರೀಕ್ಷಿಸುವಂತಿರುತ್ತವೆ.

    'ಮುಗಿಯದ ಗೋಳಿನ ಕತೆ' ಅಂತಲೂ ಅನ್ನಿಸಿಕೊಂಡಿರುವ ಮೆಗಾ ಧಾರಾವಾಹಿಗಳ ಏಕತಾನತೆ ಮುರಿಯುವುದು 'ಜೀ ಕನ್ನಡ'ದ ಉದ್ದೇಶ.
    ಅದಕ್ಕಾಗಿ 13 ವಾರಗಳ, 65 ಎಪಿಸೋಡುಗಳ ಮಿನಿ ಧಾರಾವಾಹಿಗಳನ್ನು ಜೀ ಕನ್ನಡ ಪರಿಚಯಿಸುತ್ತಿದೆ.

    ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಈ ಮಿನಿ ಸೀರಿಯಲ್ಲು, ಕೇವಲ 65 ಎಪಿಸೋಡುಗಳಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಮುಗಿಯುತ್ತದೆ. ಬಳಿಕ ಮತ್ತೊಂದು ಹೊಸ ಕತೆ, ಹೊಸ ಕಲಾವಿದರೊಂದಿಗೆ ಹೊಸ ಮಿನಿ ಧಾರಾವಾಹಿ ಆರಂಭವಾಗುತ್ತದೆ. ಹೀಗೆ ಕನಿಷ್ಠ ನಾಲ್ಕು ಮಿನಿ ಧಾರಾವಾಹಿಗಳನ್ನು ನಿರ್ಮಿಸುವ ಉದ್ದೇಶ 'ಜೀ ಕನ್ನಡ'ದ್ದು.

    "ಈಗಾಗಲೇ ಟಿವಿ ಧಾರಾವಾಹಿಗಳನ್ನು ನಿರ್ಮಿಸುತ್ತಿರುವವರ ಜತೆಗೆ, ಸಿನಿಮಾದ ಕೆಲ ಖ್ಯಾತ ನಿರ್ದೇಶಕರು ಕೂಡ ಈ 'ಮಿನಿ ಧಾರಾವಾಹಿ' ನಿರ್ದೇಶಿಸಲಿದ್ದಾರೆ. ಕ್ಲಾಸ್ ಮತ್ತು ಮಾಸ್ ಡೈರೆಕ್ಟರ್ ಗಳು ಈ ಹೊಸ ಸಾಹಸದಲ್ಲಿ ಕೈಜೋಡಿಸುತ್ತಾರೆ. ಕನ್ನಡದ ಕತೆಗಾರರ ಕೆಲವು ಅತ್ಯುತ್ತಮ ಕತೆಗಳನ್ನು ಕಿರುತೆರೆಯಲ್ಲಿ ಪರಿಚಯಿಸುವ ಉದ್ದೇಶವೂ ಇದರ ಹಿಂದಿದೆ...

    ಹೊಸ ಮನರಂಜನೆ, ಹೊಸ ಭರವಸೆಯತ್ತ ತುಡಿಯುತ್ತಿರುವ ಜೀ ಕನ್ನಡ ಮಿನಿ ಧಾರಾವಾಹಿ ಮೂಲಕ ಮೂಲಕ ಕಿರುತೆರೆಯಲ್ಲಿ ಹೊಸದೊಂದು ಅಧ್ಯಾಯ ಶುರು ಮಾಡುತ್ತಿದೆ" ಎನ್ನುತ್ತಾರೆ ಜೀ ಟಿವಿ ಸಮೂಹದ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ. ಎಂ. ಗೌತಮ್ ಮಾಚಯ್ಯ.

    ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತರಾಗಿರುವ ಹೆಸರು ಸಿಹಿ ಕಹಿ ಚಂದ್ರು. ಅವರ ನಿರ್ದೇಶನದ 'ಪಾರ್ವತಿ ಪರಮೇಶ್ವರ' ಒಂದು ಸಾವಿರ ಸಂಚಿಕೆಗಳನ್ನು ದಾಟಿದ್ದರೆ, 'ಪಾಂಡುರಂಗ ವಿಠಲ' ಒಂದು ಸಾವಿರದ ಗಡಿಯತ್ತ ಮುನ್ನುಗ್ಗುತ್ತಿದೆ. ಇದೇ ಜೂನ್ 24 ರಂದು ರಾತ್ರಿ 8 ಗಂಟೆಗೆ ಆರಂಭವಾಗುತ್ತಿರುವ ಹೊಸ ಧಾರಾವಾಹಿ 'ಭಲೆ ಬಸವ'ದ ಮೂಲಕ ಮತ್ತೊಂದು ಹಾಸ್ಯ ಧಾರಾವಾಹಿಯನ್ನು ಸಿಹಿ ಕಹಿ ಚಂದ್ರು ಪರಿಚಯಿಸುತ್ತಿದ್ದಾರೆ.

    ಇದರ ಮುಖ್ಯ ಕತೆ ನಡೆಯುವುದು 'ಎ.ಸಿ.ಲುಂಗಿ ಕಂಪನಿ'ಯಲ್ಲಿ! ಅದಕ್ಕಾಗಿ ಒಂದು ವಿಶೇಷ ಆಫೀಸ್ ಸೆಟ್ ನಿರ್ಮಿಸಲಾಗಿದೆ. ತುಳು ರಂಗಭೂಮಿಯಲ್ಲಿ ಹೆಸರುವಾಸಿಯಾಗಿರುವ ನಟ ಶೋಭರಾಜ್ ಇಲ್ಲಿ ಮುಖ್ಯ ಬಸವನ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಸ್ಯ ಧಾರಾವಾಹಿಗಳ ಮೂಲಕ ಪರಿಚಿತರಾಗಿರುವ ಪವನ್, ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಎಂ.ಎಸ್.ನರಸಿಂಹ ಮೂರ್ತಿ ಚಿತ್ರಕತೆ-ಸಂಭಾಷಣೆ ಹೆಣೆಯುತ್ತಿದ್ದಾರೆ.

    ಲೇಡೀಸು, ಜಂಟ್ಸು, ಬೆಂಗ್ಳೂರ್ ಗರ್ಲ್ಸು, ಮುದುಕ್ರು, ಮಕ್ಳು. ಹಳ್ಳಿ ಹೈಕ್ಳು ಎಲ್ಲಾರೂ ನೋಡಿ ಆನಂದಿಸಬಹುದಾದ ಹಾಸ್ಯ ಧಾರಾವಾಹಿ 'ಭಲೆ ಬಸವ' ಇದೇ 24ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ 'ಜೀ ಕನ್ನಡ'ದಲ್ಲಿ. (ಒನ್ಇಂಡಿಯಾ ಕನ್ನಡ)

    English summary
    Zee Kannada launching a mini comedy serial 'Bhale Basava' on this 24th June. The serial starts at 8 pm from Monday to Friday. Pawan directed the serial while screenplay and dialogues by MS Narasimha Murthy.
    Monday, June 17, 2013, 12:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X