Mithana Rashi Vaishnavi: ಕನ್ನಡ, ತಮಿಳು, ಮಲಯಾಳಂ ಆಯ್ತು.. ತೆಲುಗು ಕಿರುತೆರೆಗೂ ಕಾಲಿಟ್ಟ ವೈಷ್ಣವಿ
ಹಿರಿತೆರೆಯಲ್ಲಿ ಬಹುಭಾಷ ನಟರಾಗಿ ಕಲಾವಿದರು ಮಿಂಚಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಅಂತೆಯೇ ಕಿರಿತೆರೆಯಲ್ಲೂ ಕನ್ನಡದಿಂದ ತೆಲುಗು ಭಾಷೆಗೋ ಅಥವಾ ತಮಿಳಿಗೋ ಹೋಗಿ ಒಂದೆರೆಡು ಧಾರಾವಾಹಿಗಳನ್ನು ಮಾಡಿ ಮತ್ತೆ ಕನ್ನಡಕ್ಕೆ ವಾಪಾಸ್ ಆಗುವ ಹಲವು ಉದಾಹರಣೆಗಳಿವೆ. ಆದರಿಲ್ಲಿ ಕನ್ನಡ ಕಿರುತೆರೆಯ ಈ ಚೆಂದುಳ್ಳಿ ಚೆಲುವೆ ಕನ್ನಡವಷ್ಟೇ ಅಲ್ಲದೆ ತಮಿಳು, ಮಲಯಾಲಂ ಹಾಗೆಯೇ ತೆಲುಗು ಕಿರುತೆರೆಯಲ್ಲೂ ಜೈ ಎನಿಸಿಕೊಳ್ಳುತ್ತಿರುವ ವಿಶೇಷ ಉದಾಹರಣೆ ನಮ್ಮ ಮುಂದಿದೆ.
ಹೌದು! ಕನ್ನಡ ಕಿರುತೆರೆ ಪ್ರಿಯರಿಗೆ ರಾಶಿ ಎಂದೇ ಮನೆಮಾತಾಗಿರುವ ನಟಿ ವೈಷ್ಣವಿ ಇದೀಗ ಸೌತ್ ಸೀರಿಯಲ್ ಇಂಡಸ್ಟ್ರಿ ಕ್ವೀನ್ ಎನಿಸಿಕೊಂಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇವರ ಅಭಿನಯ ಹಾಗೂ ಸಾಧನೆಗೆ ಜನ ಫಿದಾ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಥುನ ರಾಶಿ' ಧಾರಾವಾಹಿ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟವರು ನಟಿ ವೈಷ್ಣವಿ.

ಕಣ್ಣಲ್ ಪೂವ್ ಧಾರಾವಾಹಿಯಲ್ಲಿ ನಟನೆ
ಆಟೋ ಓಡಿಸುವ ಚುರುಕು ಚಾಲಾಕಿ ಹುಡುಗಿ ಗೆಟಪ್‌ನಲ್ಲಿ ಮೊದಲಿಗೆ ಬಂದ ಈಕೆ ನಂತರ ನಿಧಾನವಾಗಿ ಪ್ರೇಕ್ಷಕರ ಪ್ರೀತಿಯ ರಾಶಿಯಾದಳು. ನಂತರ ಇದೇ ಧಾರಾವಾಹಿ ತಮಿಳಿಗೆ ರಿಮೇಕ್ ಆದಾಗಲೂ ಈಕೆಯೇ ರಾಶಿ ಪಾತ್ರವನ್ನು ಮಾಡಿದರು. ಅದಾದ ಮೇಲೆ ಮಲಯಾಳಂ ಕಿರುತೆರೆಯತ್ತ ಮುಖ ಮಾಡಿರುವ ವೈಷ್ಣವಿ 'ಕಣ್ಣಲ್ ಪೂವು' ಎಂಬ ಧಾರಾವಾಹಿಯಲ್ಲಿ ನಾಯಕಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಥೇಟ್ ಮಲಯಾಳಿ ಕುಟ್ಟಿಯಂತೆ ಕಾಣುವ ಕನ್ನಡದ ಈ ಸುಂದರಿ , ಮಲಯಾಳಿ ಜನರ ಫೇವರೇಟ್ ನಟಿಯಾಗಿದ್ದಾರೆ.
ತೆಲುಗು ಕಿರುತೆರೆಗೆ ಪಾದಾರ್ಪಣೆ
ಇಷ್ಟೆಲ್ಲದರ ಜೊತೆಗೆ ಈಗ ತೆಲುಗು ಸೀರಿಯಲ್‌ಗೆ ಕಾಲಿಟ್ಟಿರುವ ಈ ನಟಿ ಹೊಚ್ಚ ಹೊಸ ಧಾರಾವಾಹಿಯೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಇನ್ನೂ ಈ ಧಾರಾವಾಹಿಯ ಪ್ರೋಮೊ ಬಿಡುಗಡೆಯಾಗಬೇಕಿದೆ. ಒಟ್ಟಿನಲ್ಲಿ ಬಹಳ ಕಡಿಮೆ ಸಮಯದಲ್ಲಿ ಸೌತ್ ಸೀರಿಯಲ್ ಇಂಡಸ್ಟ್ರಿಯ ಮನೆ ಮಾತಾಗಿರುವ ಈ ನಟಿ ಕನ್ನಡ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ.

ಬಾಲ್ಯದಿಂದಲೂ ಇತ್ತು ನಟಿಯಾಗುವ ಕನಸು
ವೈಷ್ಣವಿಗೆ ಸಣ್ಣ ವಯಸ್ಸಿನಿಂದಲೂ ಅಭಿನಯದತ್ತ ವಿಶೇಷ ಒಲವು ಹೊಂದಿದ್ದ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ವೈಷ್ಣವಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು 'ಶಾಲಿನಿ ಐಪಿಎಸ್' ಸಿನಿಮಾದಲ್ಲಿ. ಮುಂದೆ ಕುಲದೀಪ್ ಅವರ 'ಧೂಮ' ಎಂಬ ಕಿರುಚಿತ್ರದಲ್ಲಿ ನಟಿಸಿದ ಈಕೆ ವಿನೋದ್ ವಿ. ಧೋಂಡಾಳೆ ನಿರ್ದೇಶನದ 'ಶಾಂತಂ ಪಾಪಂ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ನಂತರ 'ಮಿಥುನ ರಾಶಿ'ಯ ರಾಶಿ ಆಗಿ ಬದಲಾಗಿ ವೀಕ್ಷಕರ ಮನ ಸೆಳೆದ ವೈಷ್ಣವಿ ಸದ್ಯ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











