ಮರಾಠಿ ಭಾಷೆ ಬಗ್ಗೆ ವಿರೋಧಿ ಹೇಳಿಕೆ: 'ಕ್ಷಮೆ ಕೇಳದಿದ್ದರೆ ಬಿಗ್ ಬಾಸ್ ನಿಲ್ಲಿಸುತ್ತೇವೆ'

ಬಾಲಿವುಡ್‌ ಜನಪ್ರಿಯ ಗಾಯಕ ಕುಮಾರ್ ಸನು ಅವರ ಪುತ್ರ ಜಾನ್ ಕುಮಾರ್ ಸನು ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್‌ಎಸ್) ನಾಯಕ ಅಮೆ ಖೋಪ್ಕರ್ ಹಾಗೂ ಆಡಳಿತ ಪಕ್ಷ ಶಿವಸೇನಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ 14ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿರುವ ಜಾನ್ ಕುಮಾರ್ ಸನು ಮರಾಠಿ ಭಾಷೆಯ ವಿರುದ್ಧ ಹೇಳಿಕೆ ನೀಡಿದ್ದಾರೆ. ಮುಂದಿನ 24 ಗಂಟೆಯಲ್ಲಿ ಜಾನ್ ಕುಮಾರ್ ಸನು ಕ್ಷಮೆ ಕೇಳದಿದ್ದರೆ ಬಿಗ್ ಬಾಸ್ ಶೋ ನಿಲ್ಲಿಸಬೇಕಾಗುತ್ತದೆ ಎಂದು ಅಮೆ ಖೋಪ್ಕರ್ ಎಚ್ಚರಿಕೆ ನೀಡಿದ್ದಾರೆ.

"ಮಹಾರಾಷ್ಟ್ರದಲ್ಲಿ ಇರಬೇಕಾದರೆ ನೀವು ಮರಾಠಿ ಭಾಷೆಯನ್ನು ಗೌರವಿಸಬೇಕು" ಎಂದು ಅವರು ಜಾನ್ ಕುಮಾರ್ ಸನು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

MNS leaders demand apology from Jaan Kumar Sanu for Marathi comment

ಏನಿದು ವಿವಾದ?

ಅಂದ್ಹಾಗೆ, ಜಾನ್ ಕುಮಾರ್ ಸನು ಬಿಗ್ ಬಾಸ್ ಮನೆಯಲ್ಲಿ ''ಇತರೆ ಸ್ಪರ್ಧಿಗಳು ತನ್ನೊಂದಿಗೆ ಮಾತನಾಡಲು ಬಯಸಿದರೆ ಮರಾಠಿಯಲ್ಲಿ ಮಾತನಾಡಬೇಡಿ'' ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಈಗ ಭಾರಿ ವಿರೋಧ ವ್ಯಕ್ತವಾಗಿದೆ.

ಮರಾಠಿ ಭಾಷೆಯ ಬಗ್ಗೆ ಇಂತಹ ಅವಹೇಳನಕಾರಿ ಮತ್ತು ಅಗೌರವವನ್ನು ನಾವು ಸಹಿಸುವುದಿಲ್ಲ ಎಂದು ಎಂಎನ್‌ಎಸ್ ನಾಯಕ ಖೋಪ್ಕರ್ ಆಕ್ರೋಶಗೊಂಡಿದ್ದಾರೆ.

ಸದ್ಯ, ಮಹಾರಾಷ್ಟ್ರದ ಗೋರೆಗಾಂವ್‌ನಲ್ಲಿ 'ಬಿಗ್ ಬಾಸ್ 14' ಚಿತ್ರೀಕರಣ ನಡೆಯುತ್ತಿದೆ.

More from Filmibeat

English summary
Ruling Party Shiv Sena and MNS have alleged that young singer Jaan Kumar Sanu insulted Marathi language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X