twitter
    For Quick Alerts
    ALLOW NOTIFICATIONS  
    For Daily Alerts

    ಮರಾಠಿ ಭಾಷೆ ಬಗ್ಗೆ ವಿರೋಧಿ ಹೇಳಿಕೆ: 'ಕ್ಷಮೆ ಕೇಳದಿದ್ದರೆ ಬಿಗ್ ಬಾಸ್ ನಿಲ್ಲಿಸುತ್ತೇವೆ'

    |

    ಬಾಲಿವುಡ್‌ ಜನಪ್ರಿಯ ಗಾಯಕ ಕುಮಾರ್ ಸನು ಅವರ ಪುತ್ರ ಜಾನ್ ಕುಮಾರ್ ಸನು ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್‌ಎಸ್) ನಾಯಕ ಅಮೆ ಖೋಪ್ಕರ್ ಹಾಗೂ ಆಡಳಿತ ಪಕ್ಷ ಶಿವಸೇನಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಗ್ ಬಾಸ್ 14ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿರುವ ಜಾನ್ ಕುಮಾರ್ ಸನು ಮರಾಠಿ ಭಾಷೆಯ ವಿರುದ್ಧ ಹೇಳಿಕೆ ನೀಡಿದ್ದಾರೆ. ಮುಂದಿನ 24 ಗಂಟೆಯಲ್ಲಿ ಜಾನ್ ಕುಮಾರ್ ಸನು ಕ್ಷಮೆ ಕೇಳದಿದ್ದರೆ ಬಿಗ್ ಬಾಸ್ ಶೋ ನಿಲ್ಲಿಸಬೇಕಾಗುತ್ತದೆ ಎಂದು ಅಮೆ ಖೋಪ್ಕರ್ ಎಚ್ಚರಿಕೆ ನೀಡಿದ್ದಾರೆ.

    ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಬಗ್ಗೆ ಅಪ್‌ಡೇಟ್ ಹೊರಬಿದ್ದಿದೆ!ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಬಗ್ಗೆ ಅಪ್‌ಡೇಟ್ ಹೊರಬಿದ್ದಿದೆ!

    "ಮಹಾರಾಷ್ಟ್ರದಲ್ಲಿ ಇರಬೇಕಾದರೆ ನೀವು ಮರಾಠಿ ಭಾಷೆಯನ್ನು ಗೌರವಿಸಬೇಕು" ಎಂದು ಅವರು ಜಾನ್ ಕುಮಾರ್ ಸನು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

    MNS leaders demand apology from Jaan Kumar Sanu for Marathi comment

    ಏನಿದು ವಿವಾದ?

    ಅಂದ್ಹಾಗೆ, ಜಾನ್ ಕುಮಾರ್ ಸನು ಬಿಗ್ ಬಾಸ್ ಮನೆಯಲ್ಲಿ ''ಇತರೆ ಸ್ಪರ್ಧಿಗಳು ತನ್ನೊಂದಿಗೆ ಮಾತನಾಡಲು ಬಯಸಿದರೆ ಮರಾಠಿಯಲ್ಲಿ ಮಾತನಾಡಬೇಡಿ'' ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಈಗ ಭಾರಿ ವಿರೋಧ ವ್ಯಕ್ತವಾಗಿದೆ.

    ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

    ಮರಾಠಿ ಭಾಷೆಯ ಬಗ್ಗೆ ಇಂತಹ ಅವಹೇಳನಕಾರಿ ಮತ್ತು ಅಗೌರವವನ್ನು ನಾವು ಸಹಿಸುವುದಿಲ್ಲ ಎಂದು ಎಂಎನ್‌ಎಸ್ ನಾಯಕ ಖೋಪ್ಕರ್ ಆಕ್ರೋಶಗೊಂಡಿದ್ದಾರೆ.

    ಸದ್ಯ, ಮಹಾರಾಷ್ಟ್ರದ ಗೋರೆಗಾಂವ್‌ನಲ್ಲಿ 'ಬಿಗ್ ಬಾಸ್ 14' ಚಿತ್ರೀಕರಣ ನಡೆಯುತ್ತಿದೆ.

    English summary
    Ruling Party Shiv Sena and MNS have alleged that young singer Jaan Kumar Sanu insulted Marathi language.
    Thursday, October 29, 2020, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X