For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮುಂದಿನ ಆವೃತ್ತಿಯಿಂದ ಮೋಹನ್ ಲಾಲ್ ಔಟ್?

  |

  ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿದ ಕಾರಣ ಮಲಯಾಳಂ ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಚೆನ್ನೈನಲ್ಲಿ ಮಲಯಾಳಂ ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿತ್ತು. ತಮಿಳುನಾಡು ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿದ ಕಾರಣ ಶೋ ರದ್ದುಗೊಳಿಸಿ ಬಿಗ್ ಬಾಸ್‌ ಮನೆ ಸೀಲ್‌ಡೌನ್ ಮಾಡಲಾಗಿದೆ.

  ಇದೀಗ, ಬಿಗ್ ಬಾಸ್ ವೀಕ್ಷಕರಿಗೆ ಮತ್ತೊಂದು ನಿರಾಸೆ ಸುದ್ದಿ ಎದುರಾಗಿದೆ. ನಿರೂಪಕ ಮೋಹನ್ ಲಾಲ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ನಾಲ್ಕನೇ ಆವೃತ್ತಿಯಿಂದ ಮೋಹನ್ ಲಾಲ್ ನಿರೂಪಕರಾಗಿ ಮುಂದುವರಿವುದಿಲ್ಲ. ಲಾಲ್ ಬದಲಾಗಿ ಬೇರೆ ನಿರೂಪಕರನ್ನು ಹುಡುಕುವ ತಯಾರಿ ನಡೆದಿದೆ ಎಂಬ ವಿಚಾರ ಚರ್ಚೆಯಲ್ಲಿದೆ. ಮುಂದೆ ಓದಿ...

  ಮುಂದಿನ ಆವೃತ್ತಿಯಿಂದ ಲಾಲ್ ಔಟ್?

  ಮುಂದಿನ ಆವೃತ್ತಿಯಿಂದ ಲಾಲ್ ಔಟ್?

  ಮಲಯಾಳಂ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಪ್ರಕಾರ, ನಾಲ್ಕನೇ ಆವೃತ್ತಿಯ ಬಿಗ್ ಬಾಸ್‌ನಿಂದ ನಟ-ನಿರೂಪಕ ಮೋಹನ್ ಲಾಲ್ ಹಿಂದೆ ಸರಿಯುತ್ತಿದ್ದಾರೆ. ಬ್ಯುಸಿ ಶೆಡ್ಯೂಲ್ ಕಾರಣದಿಂದ ಮುಂದಿನ ಆವೃತ್ತಿ ನಡೆಸಿಕೊಡಲು ಸಾಧ್ಯವಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವರದಿಯಾಗಿದೆ.

  ಲಾಕ್ ಡೌನ್ ನಿಯಮ ಉಲ್ಲಂಘನೆ: ಮಲಯಾಳಂ 'ಬಿಗ್ ಬಾಸ್' ಸೆಟ್ ಸೀಲ್ಲಾಕ್ ಡೌನ್ ನಿಯಮ ಉಲ್ಲಂಘನೆ: ಮಲಯಾಳಂ 'ಬಿಗ್ ಬಾಸ್' ಸೆಟ್ ಸೀಲ್

  ಟಿಆರ್‌ಪಿ ತಂದುಕೊಡ್ತಿದ್ದ ವೀಕೆಂಡ್ ಎಪಿಸೋಡ್

  ಟಿಆರ್‌ಪಿ ತಂದುಕೊಡ್ತಿದ್ದ ವೀಕೆಂಡ್ ಎಪಿಸೋಡ್

  ಮಲಯಾಳಂ ಕಿರುತೆರೆ ಇಂಡಸ್ಟ್ರಿಯಲ್ಲಿ ಬಿಗ್ ಬಾಸ್ ಶೋಗೆ ವಾರಾಂತ್ಯದ ಎಪಿಸೋಡ್‌ಗೆ ಹೆಚ್ಚಿನ ಟಿ ಆರ್ ಪಿ ಸಿಗ್ತಿತ್ತು. ಅದಕ್ಕೆ ಕಾರಣ ಮೋಹನ್ ಲಾಲ್ ನಿರೂಪಣೆ, ಅವರು ಕಾರ್ಯಕ್ರಮ ತೆಗೆದುಕೊಂಡು ಹೋಗುತ್ತಿದ್ದ ರೀತಿ. ಜನರು ಸಹ ವಾರಾಂತ್ಯದ ಸಂಚಿಕೆಗಳನ್ನು ಬಿಡದ ವೀಕ್ಷಣೆ ಮಾಡುತ್ತಿದ್ದರು. ಆದ್ರೀಗ, ವಾರಾಂತ್ಯದಲ್ಲಿ ಲಾಲ್ ಇರಲ್ಲ ಎಂಬ ಸುದ್ದಿಯಿಂದ ವೀಕ್ಷಕರು ನಿರಾಸೆಗೆ ಒಳಗಾಗಿದ್ದಾರೆ.

  ಹೊಸ ನಿರೂಪಕರ ಹುಡುಕಾಟದಲ್ಲಿ ಬಿಗ್ ಬಾಸ್

  ಹೊಸ ನಿರೂಪಕರ ಹುಡುಕಾಟದಲ್ಲಿ ಬಿಗ್ ಬಾಸ್

  ಒಂದು ವೇಳೆ ಮೋಹನ್ ಲಾಲ್ ಬಿಗ್ ಬಾಸ್ ನಿರೂಪಣೆ ಮಾಡಿಲ್ಲ ಅಂದ್ರೆ ಮತ್ಯಾರು ಆ ಜವಾಬ್ದಾರಿ ನಿರ್ವಹಿಸಬಲ್ಲರು ಎಂಬ ಕುತೂಹಲ ಸಹಜವಾಗಿದೆ. ಸದಸ್ಯ ಮಾಹಿತಿ ಪ್ರಕಾರ, ಹಿರಿಯ ನಟ ಸುರೇಶ್ ಗೋಪಿ ಹಾಗೂ ಮುಖೇಶ್ ಅವರನ್ನು ಬಿಗ್ ಬಾಸ್ ಹೋಸ್ಟ್ ಮಾಡಲು ಸಂಪರ್ಕಿಸಲಾಗಿದೆ ಎಂಬ ವಿಚಾರವೂ ಚಾಲ್ತಿಯಲ್ಲಿದೆ.

  ಬಿಗ್ ಬಾಸ್ 5ನೇ ಆವೃತ್ತಿಗೆ ಕಮಲ್ ಹಾಸನ್ ಸಂಭಾವನೆ ಏರಿಕೆ?ಬಿಗ್ ಬಾಸ್ 5ನೇ ಆವೃತ್ತಿಗೆ ಕಮಲ್ ಹಾಸನ್ ಸಂಭಾವನೆ ಏರಿಕೆ?

  ಸ್ಪಷ್ಟನೆ ನೀಡಬೇಕಿದೆ ಬಿಗ್ ಬಾಸ್ ಆಯೋಜಕರು

  ಸ್ಪಷ್ಟನೆ ನೀಡಬೇಕಿದೆ ಬಿಗ್ ಬಾಸ್ ಆಯೋಜಕರು

  ಸದ್ಯಕ್ಕೆ ಈ ಸುದ್ದಿ ಖಚಿತವಾಗಿಲ್ಲ. ಈ ಬೆಳವಣಿಗೆ ಬಗ್ಗೆ ಬಿಗ್ ಬಾಸ್ ಆಯೋಜಕರೇ ಸ್ಪಷ್ಟನೆ ನೀಡಬೇಕಿದೆ. ಬಿಗ್ ಬಾಸ್ ಮೂರನೇ ಆವೃತ್ತಿ ಅರ್ಧಕ್ಕೆ ಸ್ಥಗಿತವಾಗಿರುವುದರಿಂದ ಮೊದಲೇ ಚಿಂತೆಯಲ್ಲಿರುವ ಆಯೋಜಕರು ಈ ಬಗ್ಗೆ ಏನ್ ಹೇಳ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  English summary
  Malayalam Superstar Mohanlal set to quit bigg boss from next session said source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X