ಕಪ್ಪು ಪಂಚೆ, ಕಪ್ಪು ಶರ್ಟ್ ; ಬಂದೇ ಬಿಡ್ತು 'ಬಿಗ್ ಬಾಸ್‌'ನ ಬೆಂಕಿ ಪ್ರೋಮೋ !

'ಬಿಗ್ ಬ್ರದರ್' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು 'ಬಿಗ್ ಬಾಸ್'. ಒಂದರ್ಧ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮಕ್ಕೆ ಕಳೆ ಬರುವುದು ವಾರಾಂತ್ಯದಲ್ಲಿಯೇ. ವಾರವೊಂದರ ಗಾಯಕ್ಕೆ ಮುಲಾಮು ಹಚ್ಚಿ .. ಆ ವಾರದ ರಂಪ-ರಾಮಾಯಣವನ್ನು ಮಾತಲ್ಲಿಯೇ ಗುಡಿಸುವ ಕೆಲಸವನ್ನು..

ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ತಾರೆಯರು ಕಳೆದ ಕೆಲ ವರ್ಷಗಳಿಂದ ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಆ ಪೈಕಿ..ಸಲ್ಮಾನ್ ಖಾನ್ ಮತ್ತು ಸುದೀಪ್ ಅವರ ನಿಷ್ಠೆಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಯಾಕೆಂದರೆ.. ಹೆಚ್ಚು ಕಡಿಮೆ ತಮ್ಮ ಬದುಕಿನ ಒಂದು-ಒಂದೂವರೆ ದಶಕವನ್ನು ಈ ಕಾರ್ಯಕ್ರಮಕ್ಕೆ ಇವರು ಇಬ್ಬರು ಮುಡಿಪಾಗಿಟ್ಟಿದ್ದಾರೆ.

Mohanlal s Explosive Entry Bigg Boss Malayalam 7 Teaser Unleashes Unprecedented Power

ಇವರನ್ನು ಹೊರತು ಪಡಿಸಿದರೆ.. ನಾಗಾರ್ಜುನ ಮತ್ತು ಮೋಹನ್ ಲಾಲ್ ಕೂಡ ಬಿಗ್ ಬಾಸ್‌ನ ಪ್ರಮುಖ ಭಾಗವಾಗಿದ್ಧಾರೆ. ಕಳೆದ ಆರು ವರ್ಷಗಳಿಂದ ಇವರು ಇಬ್ಬರು ಬಿಗ್ ಬಾಸ್‌ನ ಸಾರಥ್ಯ ವಹಿಸಿಕೊಂಡು ಬಂದಿದ್ದಾರೆ. ಆದರೆ.. ಈ ವರ್ಷ ತೆಲುಗು ಮತ್ತು ಮಲಯಾಳಂನಲ್ಲಿ ನಿರೂಪಕರು ಬದಲಾಗಲಿದ್ದಾರೆ
ಎನ್ನುವಂತಹ ವಾತಾವರಣ ಇತ್ತು.

ಕನ್ನಡದಲ್ಲಿ ಸುದೀಪ್ ತೆಲುಗಿನಲ್ಲಿ ನಾಗಾರ್ಜುನ ಮತ್ತು ಮಲಯಾಳಂನಲ್ಲಿ ಮೋಹನ್ ಲಾಲ್ ಈ ಕಾರ್ಯಕ್ರಮದಿಂದ ಕೈ ತೊಳೆದುಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಸುದೀಪ್ ಖುದ್ದು ಈ ಮಾತನ್ನು ಹೇಳಿದ್ದರು ಕೂಡ. ಆದರೆ .. ಆ ನಂತರ ಮನಸು ಬದಲಿಸಿದರು. ಮುನಿಸು ಮರೆತು ಮರಳಿ ಮನೆಗೆ ಬಂದರು.

ನಾಗಾರ್ಜುನ ಕೂಡ ಬಿಗ್ ಬಾಸ್‌ನ ದೂರ ಮಾಡಲಿಲ್ಲ. ಈ ವರ್ಷ ಕೂಡ ಬಿಗ್ ಬಾಸ್ ಹೋಸ್ಟ್ ಆಗಿ ಮುಂದುವರೆಯಲು ನಿರ್ಧರಿಸಿದರು. ಈಗಾಗಲೇ ಇವರ ನೇತೃತ್ವದಲ್ಲಿ ಮೂಡಿ ಬರಲಿರುವ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದೆ. ತೆಲುಗು ಬಿಗ್ ಬಾಸ್ ಕುರಿತು ಕೆಲ ವಿಚಾರಗಳು ಸದ್ದು ಮಾಡುತ್ತಿವೆ.

ಹೀಗಿರುವಾಗ ಸುದೀಪ್ ಮತ್ತು ನಾಗಾರ್ಜುನ ಅವರಂತೆಯೇ ಮೋಹನ್ ಲಾಲ್ ಕೂಡ ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಹೌದು, ತೆಲುಗು ಬೆನ್ನಲ್ಲಿಯೇ ಬಿಗ್ ಬಾಸ್ ಕಲರವ ಮಲಯಾಳಂನಲ್ಲಿ ಕೂಡ ಶುರುವಾಗಿದೆ. ಇದರ ಮೊದಲ ಹಂತ ಎನ್ನುವಂತೆ ಈ ಬಾರಿ ಬಿಗ್ ಬಾಸ್‌ನ ಅಂದರೆ ಸೀಸನ್‌ 7ರ ಪ್ರೋಮೋ ಬಿಡುಡಗೆಯಾಗಿದೆ. ಬಿಡುಗಡೆಯಾದ ಈ ಪ್ರೋಮೋದಲ್ಲಿ ಕಪ್ಪು ಪಂಚೆ ಮತ್ತು ಕಪ್ಪು ಶರ್ಟ್‌ ಧರಿಸಿ ಮೋಹನ್ ಲಾಲ್ ಧಗಧಗಿಸಿದ್ದಾರೆ. ಕೊನೆಯಲ್ಲಿ 'ಬಾ' ಎನ್ನುವ ಸವಾಲನ್ನು ಕೂಡ ಹಾಕಿದ್ದಾರೆ.

Mohanlal s Explosive Entry Bigg Boss Malayalam 7 Teaser Unleashes Unprecedented Power

ಬಿಡುಗಡೆಯಾದ ಈ ಪ್ರೋಮೋ ಸದ್ಯ ಸಖತ್ ಸದ್ದು ಮಾಡುತ್ತಿದೆ. ಮಲಯಾಳಂ ಕಿರುತೆರೆ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ಈ ಬಾರಿಯ ಬಿಗ್ ಬಾಸ್ ತುಂಬಾನೇ ವಿಭಿನ್ನವಾಗಿರಲಿದೆ ಎನ್ನುವ ಸುಳಿವನ್ನು ಕೂಡ ಈ ಪ್ರೋಮೋ ನೀಡಿದೆ.

ಇನ್ನುಳಿದಂತೆ ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಶೀಘ್ರದಲ್ಲಿಯೇ ಮತ್ತೊಂದು ಟೀಸರ್ ಬಿಡುಗಡೆಯನ್ನು ತಂಡ ಮಾಡಲಿದ್ದು ಆಗ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ. ಇನ್ನು, ಚೆನ್ನೈನಲ್ಲಿ ಮಲಯಾಳಂ ಬಿಗ್‌ ಬಾಸ್‌ನ ಸ್ಫರ್ಧಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಲಾಗುತ್ತಿದ್ದು ಸೆಟ್ ಕೆಲಸಗಳು ಸದ್ಯ ನಡೆಯುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಮಾಡಿದೆ.

ಇನ್ನು ಪ್ರತಿ ಬಾರಿಯಂತೆ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಬಹುದು ಎನ್ನುವ ಕುತೂಹಲ ಕೇರಳಿಗರಲ್ಲಿದೆ. ಇದಕ್ಕೆ ಪೂರಕವಾಗಿ ಅನುಮೋಲ್, ಆದಿತ್ಯನ್ ಜಯನ್, ಮತ್ತು ರೇನು ಸುಧಿ ಹೆಸರುಗಳು ಸದ್ಯ ಚಾಲ್ತಿಯಲ್ಲಿವೆ. ಕಾರ್ಯಕ್ರಮ ಆಗಸ್ಟ್ ಮೊದಲ ವಾರದಲ್ಲಿ ಶುರುವಾಗುವ ಸಾಧ್ಯತೆ ಇದೆ.

More from Filmibeat

English summary
Don't miss the thrilling first look! Mohanlal's explosive entry in the Bigg Boss Malayalam 7 teaser promises an unprecedented season ahead. See it now
Read more about: bigg boss ಟಿವಿ mohan lal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X