ಮನೆಗೆ ಬರಲಿರುವ ಸ್ಫರ್ಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಬಿಗ್ ಬಾಸ್, ಹೊಸ ಪ್ರೋಮೋ ಇಲ್ಲಿದೆ

ಬಿಗ್ ಬಾಸ್‌ಗೆ ದಿನಗಣನೆ ಸದ್ಯ ಆರಂಭವಾಗಿದೆ. ಯಾವ ಕ್ಷಣದಲ್ಲಾದರೂ ಈ ದಿನದಿಂದ ಬಿಗ್ ಬಾಸ್ ಶುರುವಾಗಲಿದೆ ಎನ್ನುವ ಬ್ರೇಕಿಂಗ್ ನ್ಯೂಸ್‌ನ ವಾಹಿನಿಯವರು ನೀಡಬಹುದು. ಇದಕ್ಕೆ ಪೂರಕವಾಗಿ ಕೇವಲ ಕನ್ನಡದಲ್ಲಿ ಮಾತ್ರವಲ್ಲ ಹಿಂದಿ.. ತೆಲುಗು ಮತ್ತು ಮಲಯಾಳಂನಲ್ಲಿ ಬಿಗ್ ಬಾಸ್‌ ನ ಸುತ್ತ ಮುತ್ತ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಪ್ರೇಕ್ಷಕರನ್ನು ಸೆಳೆಯಲು ಕಸರತ್ತು ಈಗಿಂದನೇ ಶುರುವಾಗಿದೆ.

ನಿಜಾ.. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬಿಗ್ ಬಾಸ್ ತುಸು ಹಿಂದೆ ಇದೆ. ಯಾಕೆಂದರೆ .. ತೆಲುಗು ಮತ್ತು ಮಲಯಾಳಂನಲ್ಲಿ ಈಗಾಗಲೇ ಬಿಗ್ ಬಾಸ್ ಈ ಬಾರಿ ಹೇಗಿರಲಿದೆ ಎನ್ನುವ ಸುಳಿವು ನೀಡಲಾಗಿದೆ. ನಾಗಾರ್ಜುನ ಮತ್ತು ಮೋಹನ್ ಲಾಲ್ ಸಾರಥ್ಯದಲ್ಲಿ ಮೂಡಿ ಬರುವ ಕಾರ್ಯಕ್ರಮದ ಪ್ರೋಮೊ ಕೂಡ ಬಿಡುಗಡೆ ಮಾಡಲಾಗಿದೆ.

Mohanlal s Self-Troll to Strong Warnings Unpacking Details of Bigg Boss Malayalam 7 s New promo

ಇಷ್ಟೇ ಅಲ್ಲದೇ ಈ ಎರಡು ಭಾಷೆಗಳಲ್ಲಿ ಜನಸಾಮಾನ್ಯರಿಗೆ ದೊಡ್ಮನೆಯ ಬಾಗಿಲನ್ನು ಕೂಡ ತೆರೆಯಲಾಗಿದ್ದು ಆಸಕ್ತರಿಗೆ ಅರ್ಜಿಯನ್ನು ಸಲ್ಲಿಸುವಂತೆ ಹೇಳಲಾಗಿದೆ.ಇದರ ನಡುವೆ ಇದೀಗ ಮಲಯಾಳಂ ಬಿಗ್ ಬಾಸ್‌ನ ಮತ್ತೊಂದು ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.

ಹೌದು.. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಈ ಬಾರಿ ಕೂಡ ಮೋಹನ್ ಲಾಲ್ ಅವರ ಉಸ್ತುವಾರಿಯಲ್ಲಿ ಬಿಗ್ ಬಾಸ್‌ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ಸ್ಪಷ್ಟ ಪಡಿಸಿದ್ದರು. ಚಿಕ್ಕ ತುಣುಕು ಬಿಡುಗಡೆ ಮಾಡಿದ್ದರು. ಈಗ ಇನ್ನೊಂದು ಟೀಸರ್‌ನ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಈ 2;25 ನಿಮಿಷದ ಟೀಸರ್‌ನಲ್ಲಿ ಮೋಹನ್ ಲಾಲ್ ಸ್ಫರ್ಧಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಸಿಂಪತಿ ಕಾರ್ಡ್‌ ಆಗಲಿ.. ನಾನು ತುಂಬಾ ಒಳ್ಳೆಯವನು ಎಂಬ ಡ್ರಾಮಾ ಆಗಲಿ.. ಯಾವುದು ನಡೆಯಲ್ಲ ಎಂದು ಈ ಹೊಸ ಟೀಸರ್‌ನಲ್ಲಿ ಹೇಳಿರುವ ಮೋಹನ್ ಲಾಲ್ ಹಳೆಯ ತಂತ್ರಗಳನ್ನು ಬಳಸುವವರಿಗೆ ಈ ಬಾರಿ ಮನೆಯಲ್ಲಿ ಜಾಗ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಆಗಲೇ ಹೇಳಿದಂತೆ ಈ ಬಾರಿ ಮಲಯಾಳಂನ ಬಿಗ್ ಬಾಸ್‌ನಲ್ಲಿ ಕಾಮನ್ ಮ್ಯಾನ್‌ಗಳಿಗೆ ಪ್ರವೇಶ ಇದೆ. ಸದ್ಯ ಬಿಡುಗಡೆಯಾದ ಪ್ರೋಮೋದಲ್ಲಿ ವಿವಿಧ ಹಿನ್ನೆಲೆಗಳನ್ನು ಹೊಂದಿರುವ ವ್ಯಕ್ತಿಗಳು ಈ ಬಾರಿ ಮನೆಯನ್ನು ಪ್ರವೇಶಿಸಲಿದ್ಧಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಲಾಗಿದೆ.

mohanlals-self-troll-to-strong-warnings-unpacking-details-of-bigg-boss-malayalam-7s-new-promo

ತಮ್ಮ ಇತ್ತೀಚೆನ ಬ್ಲಾಕ್ ಬಸ್ಟರ್ 'ಥುಡರಂ' ನೆನಪಿಸುವಂತಹ ಗೆಟಪಿನಲ್ಲಿ ಈ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಮೋಹನ್ ಲಾಲ್ ತಮ್ಮ ಕಾಲನ್ನು ಇಲ್ಲಿ ತಾವೇ ಎಳೆದುಕೊಂಡಿದ್ಧಾರೆ. ಇಷ್ಟೇ ಅಲ್ಲದೇ ಈ ಬಾರಿ ಬಾಲಿಶ ಟಾಸ್ಕ್‌ಗಳನ್ನು ಸ್ಫರ್ಧಿಗಳಿಗೆ ನೀಡಿದರೆ ಪರಿಣಾಮ ಸರಿಯಿರಲ್ಲ ಎಂದು ಆಯೋಜಕರಿಗೆ ಎಚ್ಚರಿಕೆಯನ್ನು ಕೂಡ ಮೋಹನ್ ಲಾಲ್ ಈ ಪ್ರೋಮೊದಲ್ಲಿ ನೀಡಿದ್ಧಾರೆ. ಈ ಮೂಲಕ ಈ ಬಾರಿಯ ಬಿಗ್ ಬಾಸ್ ವಿಶೇಷ-ವಿಶಿಷ್ಠವಾಗಿರಲಿದೆ ಎನ್ನುವ ಸಂದೇಶವನ್ನು ಪ್ರೇಕ್ಷಕರಿಗೆ ಮೋಹನ್ ಲಾಲ್ ರವಾನೆ ಮಾಡಿದ್ದಾರೆ.

ಇನ್ನುಳಿದಂತೆ ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆದರೆ ಆಗಸ್ಟ್ 3ರಿಂದ ಮಲಯಾಳಂನ ಬಿಗ್ ಬಾಸ್‌ನ 7ನೇ ಸೀಸನ್ ಶುರುವಾಗಲಿದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಇನ್ನು ಪ್ರತಿ ಬಾರಿಯಂತೆ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಬಹುದು ಎನ್ನುವ ಕುತೂಹಲ ಕೇರಳಿಗರಲ್ಲಿದೆ. ಇದಕ್ಕೆ ಪೂರಕವಾಗಿ ಅನುಮೋಲ್, ಆದಿತ್ಯನ್ ಜಯನ್, ಮತ್ತು ರೇನು ಸುಧಿ ಹೆಸರುಗಳು ಸದ್ಯ ಚಾಲ್ತಿಯಲ್ಲಿವೆ.

ಸದ್ಯ ಬಿಡುಗಡೆ ಮಾಡಲಾದ ಈ ಹೊಸ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇರಳದಲ್ಲಿ ಸದ್ದು ಮಾಡುತ್ತಿದೆ. ಈ ಬಾರಿಯ ಬಿಗ್ ಬಾಸ್ ಹೇಗಿರಲಿದೆ..? ಹಿಂದಿನ ಬಿಗ್ ಬಾಸ್‌ಗಿಂತ ಎಷ್ಟು ವಿಭಿನ್ನವಾಗಿರಲಿದೆ ? ಎನ್ನುವ ಕುತೂಹಲ ಕೂಡ ಮನೆ ಮಾಡಿದೆ.

More from Filmibeat

English summary
What did Mohanlal say? The Bigg Boss Malayalam Season 7 promo just dropped, packed with self-trolls, stern warnings, and hints of an explosive season. Read more
Read more about: bigg boss ಟಿವಿ mohanlal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X