'ಬಿಗ್ ಬಾಸ್' ಮನೆಯಿಂದ ಹೊರ ಬಂದ ಮಿಮಿಕ್ರಿ ಆರ್ಟಿಸ್ಟ್
''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.
ಹೀಗಾಗಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಹೀಗೆ ಮನೆಯಿಂದ ಈ ವಾರ ಕಲಾಭವನ್ ಸರಿಗಾ ಅವರನ್ನು ಹೊರಗಡೆ ಕಳುಹಿಸಲಾಗಿದೆ.

ಹೌದು, ಸಲ್ಮಾನ್ ಖಾನ್ ಸಾರಥ್ಯದಲ್ಲಿ ಹಿಂದಿಯಲ್ಲಿ ಇಂದಿನಿಂದ (ಆಗಸ್ಟ್ 24 ) ''ಬಿಗ್ ಬಾಸ್'' ಶುರುವಾಗಲಿದೆ. ಆದರೆ.. ಮಲಯಾಳಂನಲ್ಲಿ ಈಗಾಗಲೇ ''ಬಿಗ್ ಬಾಸ್'' ಶುರುವಾಗಿದೆ. ಮುನ್ಷಿ ರಂಜೀತ್ ಮತ್ತು ಆರ್‌ಜೆ ಬಿನ್ಸಿ ಅವರನ್ನು ಈಗಾಗಲೇ ಹೊರಗಡೆ ಕಳುಹಿಸಲಾಗಿದೆ.
ಈ ವಾರ ''ಕಲಾಭವನ್ ಸರಿಗಾ'' ಅವರನ್ನು ಹೊರಗಡೆ ಕಳುಹಿಸಲಾಗಿದೆ. ಇನ್ನೂ ಈ ವಾರ ಕಲಾಭವನ್ ಸರಿಗಾ ಅವರ ಜೊತೆ ಅನುಮೋಲ್.. ಶಾನವಾಸ್ ಶಾನು.. ಅಕ್ಬರ್.. ಶೈತ್ಯ ಸಂತೋಷ್.. ಒನಲ್ ಸಾಬು..ಸಾರಿಕಾ ಇದ್ದರು. ಆದರೆ.. ಕಲಾಭವನ್ ಸರಿಗಾ ಅವರಿಗೆ ಪ್ರೇಕ್ಷಕರ ಪ್ರೀತಿ ಸಿಗಲಿಲ್ಲ. ಪ್ರೇಕ್ಷಕರು ಮತ ಹಾಕಲಿಲ್ಲ. ಈ ಹಿನ್ನೆಲೆ.. ಕಲಾಭವನ್ ಸರಿಗಾ ಅವರನ್ನು ಮನೆಯ ಹೊರಗಡೆ ಕಳುಹಿಸಲಾಗಿದೆ.
ಇನ್ನು ಮನೆಯಿಂದ ಹೊರಗಡೆ ಬಂದ ನಂತರ ಮೋಹನ್ ಲಾಲ್ ಎದುರು ಮನೆಯ ಅನುಭವ ಹಂಚಿಕೊಂಡ ಕಲಾಭವನ್ ಸರಿಗಾ, ಎಲ್ಲೋ ಒಂದು ಕಡೆ ಮನೆಯಲ್ಲಿ ಎಡವಿದೆ ಎಂದು ಅನ್ಸುತ್ತೆ ಎಂದು ಹೇಳಿದ್ದಾರೆ. ಇನ್ನೂ ಬಿಗ್ ಬಾಸ್ ಬರುವ ಮುನ್ನ ನಾನು ಹೆಚ್ಚೆಂದರೆ 10-20% ಜನರಿಗೆ ಮಾತ್ರ ಗೊತ್ತಿದೆ. ಆದರೆ ಈಗ ಅನೇಕರಿಗೆ ನನ್ನ ಪರಿಚಯ ಆಗಿದೆ ಎಂದು ಹೇಳಿರುವ ಕಲಾಭವನ್ ಸರಿಗಾ ಹೇಗೆ ವರ್ತಿಸಬೇಕು.. ಹೇಗೆ ವರ್ತಿಸಬಾರದು ಎನ್ನುವುದನ್ನು ಕೂಡ ''ಬಿಗ್ ಬಾಸ್'' ನನಗೆ ಕಲಿಸಿದೆ ಎಂದು ಹೇಳಿದ್ದಾರೆ.
ಸದ್ಯ ಮನೆಯಲ್ಲಿ ಸಲಿಂಗಿ ಜೋಡಿ ಅಧಿಲಾ ಮತ್ತು ನೂರಾ ಜೊತೆ ರೇಣು ಸುಧಿ.. ಅನುಮೋಲ್.. ಶೈತ್ಯ ಸಂತೋಷ್.. ಗಿಜೆಲೆ ಥಕ್ರಾಲ್.. ಆರ್ಯನ್ ಕಥುರಿಯಾ..ಸಾರಿಕಾ.. ನೆವಿನ್..ಕಾಮನ್ ಮ್ಯಾನ್ ಆಗಿ ಮನೆ ಪ್ರವೇಶಿಸಿರುವ ಅನೀಶ್ ಟಿಎ.. ಅಪ್ಪಾನಿ ಶರತ್....ಅಭಿಶ್ರೀ.. ಒನಲ್ ಸಾಬು..ಬಿನ್ನಿ ಸೆಬಾಸ್ಟಿಯನ್..ಶಾನವಾಸ್ ಶಾನು..19ರ ಹರೆಯದ ರೀನಾ ಫಾತಿಮಾ ಮತ್ತು ಅಕ್ಬರ್ ಖಾನ್.. ಇದ್ದಾರೆ.

ಯಾರು ಈ ಕಲಾಭವನ್ ಸರಿಗಾ ?
ಕಲಾಭವನ್ ಸರಿಗಾ ಬೆಸಿಕಲಿ ಮಿಮಿಕ್ರಿ ಆರ್ಟಿಸ್ಟ್. ಹಲವಾರು ವೇದಿಕೆಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಇವರು ನೀಡಿದ್ದಾರೆ. ಇನ್ನು ಇವರ ಕೆಲ ಕಾಮಿಡಿ ಸ್ಕಿಟ್‌ಗಳು ಇವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟವು. ಇಲ್ಲಿಂದ ಕಿರುತೆರೆಗೆ ಬಂದ ಕಲಾಭವನ್ ಸರಿಗಾ ''ಸೆಲೆಬ್ರಿಟಿ ಕಿಚನ್ ಮ್ಯಾಜಿಕ್''ನ ಭಾಗ ಆದರು. ಇದರ ಜೊತೆ ಹಲವು ಧಾರಾವಾಹಿಗಳಲ್ಲಿ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಇನ್ನೂ ಕಲಾಭವನ್ ಸರಿಗಾ ಕೇವಲ ಮಿಮಿಕ್ರಿ ಆರ್ಟಿಸ್ಟ್ ಅಥವಾ ನಟಿ ಮಾತ್ರ ಅಲ್ಲ ಒಳ್ಳೆಯ ಗಾಯಕಿ ಕೂಡ ಹೌದು. ಹಲವು ವೇದಿಕೆಗಳಲ್ಲಿ ಜನಪದ ಹಾಡುಗಳನ್ನು ಇವರು ಹಾಡಿದ್ದಾರೆ. ''ಸಿನಿಮಾಲಾ''.. ''ವರನ್ ಡಾಕ್ಟರನು''.. ''ಭಾರ್ಯಮಾರ್ ಸೂಕ್ಷಿಕುಕಾ''.. ಮತ್ತು ''ಲೌಡ್ ಸ್ಪೀಕರ್'' ಇವರ ಜನಪ್ರಿಯತೆಯನ್ನು ಹೆಚ್ಚಿಸಿದ ಕೆಲ ಕಾರ್ಯಕ್ರಮಗಳು.
ಸದ್ಯ ''ಬಿಗ್ ಬಾಸ್'' ಮನೆಯಿಂದ ಮೂರು ಜನ ಹೊರಗಡೆ ಬಂದಿದ್ದು, ನಾಲ್ಕನೇ ವಾರಕ್ಕೆ ಮಲಯಾಳಂನ ಬಿಗ್ ಬಾಸ್ ಕಾಲಿಟ್ಟಿದೆ. ಈ ವಾರ ಮನೆಯಿಂದ ಯಾರು ಹೊರಗಡೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











