ಇದೇ ಭಾನುವಾರ ನಡೆಯಲಿದೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ; ಈ 7 ಜನರಲ್ಲಿ ಗೆಲ್ಲೋದು ಯಾರು ?
''ಬಿಗ್ ಬಾಸ್'' ಕೇವಲ ಸ್ಫರ್ಧಿಗಳಿಗೆ ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಕೂಡ ಚಿನ್ನದ ಮೊಟ್ಟೆ ಇಡುವ ಕೋಳಿ. ಬೇರೆ ಬೇರೆಯ ಭಾಷೆಗಳಲ್ಲಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸೂಪರ್ ಸ್ಟಾರ್‌ಗಳು ಕೋಟ್ಯಂತರ ರೂಪಾಯಿಯ ''ಸಂಭಾವನೆ''ಯನ್ನು ಪಡೆಯುತ್ತಾರೆ. ಈ ''ಸಂಭಾವನೆ''ಯ ಕಾರಣದಿಂದನೇ ಹಲವರು ಎಷ್ಟೇ ಕಷ್ಟ ಆದರೂ ಕೂಡ ತಮ್ಮ ''ಸಂಬಂಧ''ವನ್ನು ವರ್ಷಾನುವರ್ಷಗಳಿಂದ ಮುಂದುವರೆಸಿಕೊಂಡು ಕೂಡ ಬಂದಿದ್ದಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ಸುದೀಪ್ ಮತ್ತು ''ಬಿಗ್ ಬಾಸ್'' ಸಂಬಂಧ ಹನ್ನೆರಡು ವರ್ಷಗಳಷ್ಟು ಹಳೆಯದಾದರೆ ಕಳೆದ ಹದಿನಾರು ವರ್ಷಗಳಿಂದ ''ಬಿಗ್ ಬಾಸ್'' ಜೊತೆ ಸಲ್ಮಾನ್ ಖಾನ್ ಸಂಬಂಧ ಬೆಸೆದುಕೊಂಡಿದೆ. ಆರಂಭದ 3 ಸೀಸನ್ ಹೊರತು ಪಡಿಸಿದರೆ ಕಳೆದ 16 ವರ್ಷಗಳಿಂದ ಸಲ್ಮಾನ್ ಖಾನ್ ''ಬಿಗ್ ಬಾಸ್''ನ ಬಹುಮುಖ್ಯ ಭಾಗವಾಗಿದ್ದಾರೆ. ನಾಗಾರ್ಜುನ ಮತ್ತು ಮೋಹನ್ ಲಾಲ್ ಕಳೆದ ಏಳು ವರ್ಷಗಳಿಂದ ಈ ಸಂಬಂಧ ಮುಂದುವರೆಸಿಕೊಂಡು ಬಂದಿದ್ದಾರೆ.

ಇನ್ನೂ.. ಕನ್ನಡದಲ್ಲಿ ''ಬಿಗ್ ಬಾಸ್'' ಅಂದರೆ ಸುದೀಪ್ ಹೇಗೆ ನೆನಪಾಗ್ತಾರೋ, ಅದೇ ರೀತಿ ಮಲಯಾಳಂನಲ್ಲಿ ಮೋಹನ್ ಲಾಲ್ ನೆನಪಾಗುತ್ತಾರೆ. ಯಾಕೆಂದರೆ.. ಸುದೀಪ್ ಅವರಿಗೆ ಮಾತ್ರ ''ಬಿಗ್ ಬಾಸ್'' ಎರಡನೇ ಮನೆಯಲ್ಲ. ಮೋಹನ್‌ಲಾಲ್ ಅವರಿಗೆ ಕೂಡ ''ಬಿಗ್ ಬಾಸ್'' ಎರಡನೇ ಮನೆಯಂತೆಯೇ.ಮನೆಯ ಜೊತೆ 07 ವರ್ಷದ ಸಂಬಂಧ ಇವರದ್ದು.
ಇಂಥಾ ಮೋಹನ್ ಲಾಲ್ ಮುಂದಿನ ವರ್ಷದ ಜೂನ್-ಜುಲೈ ಅಥವಾ ಆಗಸ್ಟ್‌ವರೆಗೆ ಈ ಮನೆಯಿಂದ ದೂರವಾಗುವ ಕಾಲ ಬಂದಿದೆ. ಯಾಕೆಂದರೆ ಮಲಯಾಳಂ ''ಬಿಗ್ ಬಾಸ್''ನ ಗ್ರ್ಯಾಂಡ್ ಫಿನಾಲೆ ಈ ವಾರ ಅಂದರೆ ನವೆಂಬರ್ 9 ( ಭಾನುವಾರ ) ಸಂಜೆ 7ಕ್ಕೆ ಶುರುವಾಗಲಿದೆ.
ಹೌದು. ಈ ಬಾರಿ ಎಲ್ಲರಿಗಿಂತ ಮೊದಲು ಮಲಯಾಳಂನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಿತ್ತು. ಆಗಸ್ಟ್ 3ರಂದು ಮನೆಯ ಒಳಗಡೆ 19 ಜನರನ್ನು ಕಳುಹಿಸಲಾಗಿತ್ತು. ಆ ನಂತರ 27 ದಿನಗಳ ನಂತರ 5 ಜನ ವೈಲ್ಡ್ ಕಾರ್ಡ್ ಮೂಲಕ ಮನೆಯ ಒಳಗೆ ಹೋಗಿದ್ದರು.
ಹೀಗೆ ಹೋದವರಲ್ಲಿ ಸದ್ಯ 7 ಜನ ಉಳಿದಿದ್ದು ಈ 7 ಜನರಲ್ಲಿ ಒಬ್ಬರನ್ನು ವಿಜೇತರನ್ನಾಗಿ ಘೋಷಿಸುವ ಕಾಲ ಬಂದಿದೆ. ಮಲಯಾಳಂ ''ಬಿಗ್ ಬಾಸ್'' ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಮನೆಯಲ್ಲಿ ಉಳಿದ ಈ 7 ಜನರ ಪೈಕಿ ಇಂದು ಅಥವಾ ನಾಳೆ ಇಬ್ಬರು ಸ್ಫರ್ಧಿಗಳು ಹೊರ ಹೋಗುವ ಸಾಧ್ಯತೆ ಇದ್ದು ಫಿನಾಲೆಯಂದು 5 ಜನರ ಅದೃಷ್ಟ ಪರೀಕ್ಷೆ ನಡೆಯಲಿದೆ. ಈ ಅದೃಷ್ಟ ಪರೀಕ್ಷೆಯಲ್ಲಿ ಯಾರು ಪಾಸಾಗುತ್ತಾರೆ ಎನ್ನುವುದಕ್ಕೆ ಉತ್ತರ ಈ ಭಾನುವಾರ (ನವೆಂಬರ್ 9 )ದಂದು ಸಿಗಲಿದೆ.
ಮನೆಯಲ್ಲಿರುವ 7 ಸ್ಫರ್ಧಿಗಳು ಯಾರು ?
ಸದ್ಯ ಕೊನೆಯ ಹಂತಕ್ಕೆ ಬಂದ 7 ಜನ ಸ್ಫರ್ಧಿಗಳಲ್ಲಿ '' ಸಲಿಂಗ ವಿವಾಹವಾದ ಇಬ್ಬರು ಚೆಲುವೆಯರು, ಸೈಬರ್ ಭದ್ರತಾ ವಿಶ್ಲೇಷಕರಾಗಿ ಕೆಲಸ ಮಾಡುವ LGBTQ+ ಸಮುದಾಯದ ಪರ ಕಾನೂನು ಹೋರಾಟವನ್ನು ಕೂಡ ಮಾಡುವ ಅಧಿಲಾ ಮತ್ತು ನೂರಾ ಇದ್ದಾರೆ.
ಇವರನ್ನು ಹೊರತು ಪಡಿಸಿದರೆ ಸರಿಗಮಪ.. ಸ್ಟಾರ್ ಸಿಂಗರ್.. ಅಂತಹ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ತಮ್ಮ ಚಿನ್ನದ ಕಂಠದಿಂದ ಕೇರಳ ಜನರ ಹೃದಯ ಗೆದ್ದ ಅಕ್ಬರ್ ಖಾನ್ ಮತ್ತು ಅನುಮೋಲ್.. ಅನೀಶ್.. ಶಾನವಾಸ್.. ನೆವಿನ್.. ಇದ್ದಾರೆ.
ಬಹುತೇಕರು ಸಲಿಂಗಿ ಜೋಡಿಯಾದ ಅಧಿಲಾ ಮತ್ತು ನೂರಾ ಈ ಬಾರಿ ಬಿಗ್ ಬಾಸ್ ಗೆಲ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಿಜವಾದ ''ಬಿಗ್ ಬಾಸ್'' ವಿನ್ನರ್ ಯಾರು..? ಎನ್ನುವ ಪ್ರಶ್ನೆಗೆ ಉತ್ತರ ಇದೇ ನವೆಂಬರ್ 9ರಂದು ಸಿಗಲಿದೆ.


Click it and Unblock the Notifications











