ನಟಿ ಮೋಕ್ಷಿತಾ ಪೈ ಮನೆಗೆ 'ಪಾರು' ಟೀಂ ಹಾಜರ್: ಏನು ವಿಶೇಷ?
ನಟಿ ಮೋಕ್ಷಿತಾ ಪೈ ಮನೆಯಲ್ಲಿ ಸತ್ಯ ನಾರಾಯಣ ಪೂಜೆಯನ್ನು ಮಾಡಿದ್ದಾರೆ. ಪೂಜೆಗೆ 'ಪಾರು' ಧಾರಾವಾಹಿಯ ಸಹ ಕಲಾವಿದರು ಕೂಡ ಆಗಮಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ 'ಪಾರು' ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾದ ನಟಿ ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ.
ಯಾವುದಾದರೂ ಉತ್ತಮ ಪ್ರವಾಸಿ ತಾಣಗಳಿಗೆ ಗೆಳೆಯರು ಹಾಗೂ ತನ್ನ ಕುಟುಂಬದ ಜೊತೆಗೆ ಪ್ರವಾಸ ಮಾಡುತ್ತಿರುತ್ತಾರೆ. ರೀಲ್ಸ್ ಕೂಡ ಮಾಡಿ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ಪಾರು ನಟಿ ಮೋಕ್ಷಿತಾ ಪೈ
ಮೋಕ್ಷಿತಾ ಪೈ ನಗು ಮೊಗದ ಚೆಲುವೆ ಎಂದರೆ ತಪ್ಪಾಗಲಾರದು. 'ಪಾರು' ಧಾರವಾಹಿ ನಟಿ ಮೋಕ್ಷಿತಾ ಪೈ ಹಲವು ಹೆಸರನ್ನು ತಂದುಕೊಟ್ಟಿತು. ಪಾರು ನಟಿ ಮೋಕ್ಷಿತಾ ಪೈ ಬಗ್ಗೆ ಏನೂ ಹೇಳಬೇಕಾಗಿಯೇ ಇಲ್ಲ. ನೋಡಲು ಮುದ್ದು ಮುದ್ದಾಗಿದ್ದು ಎಲ್ಲರ ಮನಸ್ಸಿನಲ್ಲಿ ನೆಲೆಸಿರುವ ತಾರೆ. ಅಖೀಲಾಂಡೇಶ್ವರಿ ಮುದ್ದಿನ ಸೊಸೆಯಾಗಿ ಇರುವ ಪಾರು ತ್ಯಾಗಮಯಿ ಕೂಡ ಹೌದು. ತನ್ನ ಸ್ವಂತ ಮಗುವನ್ನೇ ಬೇರೆಯವರಿಗೆ ಕೊಟ್ಟಿದ್ದಾಳೆ. ಆಕೆಗೆ ತನ್ನ ಜೀವನ ಹೇಗಿದ್ದರೂ ಪರವಾಗಿಲ್ಲ. ಆದರೆ ಬೇರೆಯವರು ಚೆನ್ನಾಗಿ ಇರಬೇಕು ಎಂಬುವುದು ಬಹುದೊಡ್ಡ ಬಯಕೆ. ಪಾರು ಈ ಗುಣದಿಂದಲೇ ಮೋಕ್ಷಿತಾ ವೀಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ.
ಮುದ್ದು ಮನಸ್ಸಿನ ನಟಿ
ಇನ್ನು ಮೋಕ್ಷಿತಾ ಪೈ ನಿಜ ಜೀವನದಲ್ಲಿ ತಮ್ಮ ಎಂದರೆ ಬಹಳ ಪ್ರೀತಿ. ತಮ್ಮನನ್ನು ಅಮ್ಮನ ಸ್ಥಾನದಲ್ಲಿ ಇದ್ದುಕೊಂಡು ನೋಡಿಕೊಳ್ಳುತ್ತಾರೆ. ತಮ್ಮನನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಇನ್ನು ಕುಟುಂಬಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಪಾರು ಧಾರಾವಾಹಿ ಹೊರತು ಪಡಿಸಿ, ಆಕೆಗೆ ಇತರೆ ಸೀರಿಯಲ್‌ಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ. ಆದರೆ ಕಥೆ, ಪಾತ್ರಗಳ ಬಗ್ಗೆ ಮೋಕ್ಷಿತಾ ಪೈ ಅವರು ಬಹಳ ಕಾಳಜಿ ವಹಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ ಧಾರಾವಾಹಿಯೊಂದರಲ್ಲಿ ನಟಿಸಿದ್ದಾರೆ.

ಸತ್ಯ ನಾರಾಯಣ ಪೂಜೆ
ಇನ್ನು ಮೋಕ್ಷಿತಾ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಸರಳವಾಗಿ ಆಚರಣೆ ಮಾಡಿದ್ದಾರೆ. ದೇವರಿಗೆ ನೈವೇದ್ಯ ಇಟ್ಟು, ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಮಾಡಿದ್ದಾರೆ. ಮೋಕ್ಷಿತಾ ಮನೆಯಲ್ಲಿ ಪೂಜೆ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳದಿ ಸೀರೆಯುಟ್ಟು ಮಧುಮಗಳಂತೆ ಸಿಂಗಾರ ಮಾಡಿಕೊಂಡಿದ್ದಾರೆ. ಸತ್ಯ ನಾರಾಯಣ ಪೂಜೆಗೆ ಪಾರು ಧಾರಾವಾಹಿಯ ಕಲಾವಿದರೂ ಕೂಡ ಆಗಮಿಸಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ
ಸಾಂಪ್ರದಾಯಿಕವಾಗಿ ಸೀರೆಯಲ್ಲಿ ಕಾಣಿಸಿಕೊಂಡ ನಟಿ, ನೋಡಲು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಟಿಯನ್ನು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಸಾಕಷ್ಟು ಬಾರಿ ಫೋಟೋ ಶೂಟ್ ಮಾಡಿಸಿಕೊಂಡು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಕೂಡ ಮೋಕ್ಷಿತಾ ಪೈ ಫೋಟೋ ನೋಡಿ ಬಹಳಷ್ಟು ಖುಷಿ ಪಡುತ್ತಾರೆ. ನಗು ಮೊಗದ ಅಪ್ಸರೆಯ ಫೋಟೋಗಳಿಗೆ ಸಾಕಷ್ಟು ಅಭಿಮಾನಿಗಳು ಲೈಕ್, ಕಾಮೆಂಟ್ ಮಾಡುತ್ತಿರುತ್ತಾರೆ. ಯಾವಾಗಲೂ ಸೀರೆಯಲ್ಲಿ ಮಿಂಚಲು ಬಯಸುವ ನಟಿ ಆಗಾಗ ಮಾಡ್ರನ್ ಉಡುಗೆಯಲ್ಲೂ ಕಾಣಿಸಿಕೊಳ್ಳುತ್ತಾರೆ.


Click it and Unblock the Notifications











