ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿಯರಿವರು
ಕನ್ನಡ ಕಿರುತೆರೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರ ಸಂಖ್ಯೆಯೇ ಹೆಚ್ಚಿದೆ. ಕೋವಿಡ್ ಸಂದರ್ಭದಲ್ಲಂತೂ ಟಿಕ್ ಟಾಕ್ ಶಾರ್ಟ್ಸ್, ಇನ್ ಸ್ಟಾಗ್ರಾಂ ರೀಲ್ಸ್‌ಗಳ ಮೂಲಕವೇ ಮೋಡಿ ಮಾಡಿದ್ದವರು ಬಳಿಕ ಕಿರುತೆರೆಗೆ ಬಂದಿದ್ದರು.
ನಟಿ ಸೋನು ಗೌಡ, ಪ್ರತಿಮಾ, ಮಧುಶ್ರೀ ಭಟ್, ಮೋಕ್ಷಿತಾ ಪೈ ಹೀಗೆ ಸಾಕಷ್ಟು ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಲಕ್ ಅನ್ನು ಬದಲಾಯಿಸಿಕೊಂಡಿದ್ದರು. ಅಲ್ಲಿಂದ ಮುಂದೆ ಬಳಿಕ ಕಿರುತೆರೆ ಧಾರಾವಾಹಿ ಅವಕಾಶ ಪಡೆದಿದ್ದರು.

ರೀಲ್ಸ್ ಮೂಲಕ ತಮಗೂ ನಟಿಸಲು ಬರುತ್ತದೆ. ತಮ್ಮಲ್ಲೂ ಟ್ಯಾಲೆಂಟ್ ಇದೆ ಎಂದು ತೋರಿಸಿದ ಚೆಲುವೆಯರು ನೇರವಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ರೀಲ್ಸ್ ಮಾಡೋಕೆ ಕ್ಯಾಮರಾ ಎದುರಿಸಲು ಕಲಿತವರು ಮುಂದೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ.
ರೀಲ್ಸ್ ನೋಡಿ ಈಕೆಯನ್ನು ಹೊಸ ಧಾರಾವಾಹಿಗೆ ನಾಯಕಿಯನ್ನಾಗಿ ಯಾಕೆ ತೆಗೆದುಕೊಳ್ಳಬಾರದು ಎಂದು ಡೈರೆಕ್ಟರ್ಸ್ ತೀರ್ಮಾನಿಸಿ, ಕೆಲ ನಟಿಯರ ವೃತ್ತಿ ಬದುಕಿಗೆ ನಾಂದಿ ಹಾಡಿದ್ದಾರೆ.
ಪಾರುಗೆ ಫೇಸ್ ಬುಕ್ ಸೌಭಾಗ್ಯ
ನಟಿ ಮೋಕ್ಷಿತಾ ಪೈ ಅವರು ತಮ್ಮ ಪಾಡಿಗೆ ತಾವು ಮಕ್ಕಳಿಗೆ ಟ್ಯೂಷನ್ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಆದರೆ, ಅವರ ಫೋಟೋವನ್ನು ಫೇಸ್ ಬುಕ್‌ನಲ್ಲಿ ನೋಡಿದವರು 'ಪಾರು' ಧಾರಾವಾಹಿಗೆ ಸೂಪರ್ ಹೀರೋಯಿನ್ ಎಂದು ಹೇಳಿ ಆಯ್ಕೆ ಮಾಡಿಯೇ ಬಿಟ್ಟರು. ಈ ಮೂಲಕ 'ಪಾರು' ಧಾರಾವಾಹಿಯಲ್ಲಿ ನಟಿಸಿ ಸೂಪರ್ ಹಿಟ್ ಆದ ಮೋಕ್ಷಿತಾ ಪೈ ಅವರು ಬಿಗ್ ಬಾಸ್‌ನಲ್ಲೂ ಭಾಗವಹಿಸಿ ಕೆಲ ದಿನಗಳ ಕಾಲ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. 'ಪಾರು' ಧಾರಾವಾಹಿ ಮೂಲಕ ಕರ್ನಾಟಕದ ಮನೆಮತಾದ ಮೋಕ್ಷಿತಾ ಪೈ ಅವರು ತಮಿಳು, ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಸೋಶಿಯಲ್ ಮೀಡಿಯಾ ಅದೃಷ್ಟ
ನಟಿ ಮೇಘಾ ಶೆಟ್ಟಿ ಅವರು ಬೆಂಗಳೂರಿನಲ್ಲಿ ಎಂಬಿಎ ವಿಧ್ಯಾಭ್ಯಾಸ ಮಾಡಿದ್ದಾರೆ. ಇವರ ಫೋಟೋವನ್ನು ನೋಡಿದವರು ನೇರವಾಗಿ ಜೊತೆ ಜೊತೆಯಲಿ ಸೆಟ್‌ಗೆ ಕರೆ ತಂದರು. ಬಳಿಕ ನಟಿ ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್', ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಚಿತ್ರದಲ್ಲಿ ನಟಿಸಿದ್ದು, ಈಗಲೂ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಭವ್ಯ ಗೌಡ ಅವರು 'ಗೀತಾ' ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ. ಭವ್ಯ ಅವರು ಟಿಕ್ ಟಾಕ್‌ನಲ್ಲಿ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಭವ್ಯಾ ಅವರು ಬಿಗ್ ಬಾಸ್ ಶೋನಲ್ಲೂ ಕಮಾಲ್ ಮಾಡಿದ್ದಾರೆ.
ರೀಲ್ಸ್‌ನಿಂದ ಜೀವನ ಬದಲಾಯಿತು
ಇನ್ನು ಟಿಕ್ ಟಾಕ್‌ನಲ್ಲಿ ಕಂಡ ಪ್ರಿಯಾ ಜೆ ಆಚಾರ್ ಅವರು ನೇರವಾಗಿ 'ಗಟ್ಟಿಮೇಳ' ಧಾರಾವಾಹಿಗೆ ಆಯ್ಕೆಯಾದರು. ಈ ಧಾರಾವಾಹಿಯಲ್ಲಿ ಅಧಿತಿ ಪಾತ್ರದಲ್ಲಿ ನಟಿಸಿ ನಂತರ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು 'ಯಜಮಾನ' ಧಾರಾವಾಹಿಯ ಮಧುಶ್ರೀ ಭಟ್ ಕೂಡ ರೀಲ್ಸ್ ಮೂಲಕವೇ ಆಯ್ಕೆಯಾಗಿದ್ದರು.
ಪ್ರತಿಮಾ ಬಣ್ಣದ ಲೋಕ
'ಮುದ್ದು ಸೊಸೆ' ಧಾರಾವಾಹಿಯ ನಟಿ ಪ್ರತಿಮಾ ಅವರು ಕೂಡ ತಮ್ಮ ರೀಲ್ಸ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು. ಸೋಶಿಯಲ್ ಮೀಡಿಯಾ ಮೂಲಕ ಡೈರೆಕ್ಟರ್ಸ್ ಕಣ್ಣಿಗೆ ಬಿದ್ದ ಈ ನಟಿಯರು ನಾಯಕಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಕೆಲವರಿಗೆ ವರದಾನವಾಗಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಅದೇ ಆಡಿಷನ್ ವೇದಿಕೆಯಂತಾಗಿದೆ. ಕೆಲವರ ಅದೃಷ್ಟವನ್ನೇ ಬದಲಿಸಿಬಿಟ್ಟಿದೆ.


Click it and Unblock the Notifications











