ಜೀ ಕನ್ನಡದಲ್ಲಿ 2 ಹೊಚ್ಚ ಹೊಸ ಸೀಯಲ್: ಕಥೆ ಹೇಗಿರಲಿದೆ?
ಹೊಸ ಹೊಸ ಧಾರಾವಾಹಿಗಳು ಶುರುವಾಗುವುದು ಹೊಸತೇನಲ್ಲ. ಈಗ ಜೀ ಕನ್ನಡ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಶುರುವಾಗಲಿವೆ. ಹಳೆಯ ಸೀರಿಯಲ್ ಪುಟಗಳು ಮುಚ್ಚಿತ್ತಿವೆ. ಹಾಗಾಗಿ ಹೊಸ ಸೀರಿಯಲ್‌ಗಳು ಬರ್ತಿವೆ.
ನಾಗಿಣಿ 2, ಧಾರಾವಾಹಿಯ ಮುಕ್ತಾಯದ ಹಂತ ತಲುಪಿದ್ದು, ಇದರ ಬದಲು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು ಪ್ರಾರಂಭಿಸಬಹುದು ಎನ್ನಲಾಗಿದೆ. ಈಗಾಗಲೇ ವಾಹಿನಿಯಲ್ಲಿ ಇದರ ಪ್ರೋಮೋವನ್ನು ಕೂಡ ಪ್ರಸಾರ ಮಾಡಲಾಗಿದೆ. ಆದರೆ, ಯಾವಾಗ ಶುರುವಾಗುತ್ತೆ.? ಯಾವ ಸಮಯಕ್ಕೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ಇನ್ನು ಜೀ ಕನ್ನಡ ವಾಹಿನಿಯಲ್ಲಿ ಡಬ್ಬಿಂಗ್ ಧಾರಾವಾಹಿಗಳು ಕೂಡ ಮೂಡಿ ಬರುತ್ತಿವೆ. ತ್ರಿನಯನಿ, ನಂ.1 ಸೊಸೆ, ಕೃಷ್ಣ ಸುಂದರಿ ಸೇರಿದಂತೆ ಹಲವು ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿವೆ. ಇದೀಗ ಮತ್ತೊಂದು ಧಾರಾವಾಹಿ ಡಬ್ ಆಗಲು ಸಜ್ಜಾಗಿದೆ.

ಜೀ ಕನ್ನಡದಲ್ಲಿ ಹೊಸ ಧಾರಾವಾಹಿ!
ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳ ಆಗಮನವಾಗುತ್ತಿರುತ್ತೆ. ಅದರಲ್ಲೂ ಇಡೀ ಕುಟುಂಬ ಕುಳಿತು ನೋಡುವಂತ, ಕೌಟುಂಬಿಕ ಕಥೆಗೆ ಹೆಚ್ಚು ಆದ್ಯತೆ. ಸದ್ಯ ಮಧ್ಯಾಹ್ನದಿಂದ ಆರಂಭವಾಗಿ ರಾತ್ರಿ 10 ಗಂಟೆಯವರೆಗೂ ಅಚ್ಚು ಮೆಚ್ಚಿನ ಧಾರಾವಾಹಿಗಳನ್ನೆ ನೀಡುತ್ತಿದೆ. ಯಾವುದು ಕೂಡ ಟಿಆರ್ ಪಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಹೀಗಿರುವಾಗ ಹೊಸ ಎರಡು ಧಾರಾವಾಹಿ ಸೇರ್ಪಡೆಯಾಗುತ್ತಿದೆ. ಈ ಎರಡು ಧಾರಾವಾಹಿಗಳು ಯಾವುವು.? ಯಾವ ಸಮಯದಲ್ಲಿ ಮೂಡಿ ಬರುತ್ತದೆ ಎಂದು ಮುಂದೆ ಓದಿ...

ಕನ್ನಡದಲ್ಲಿ ಡಬ್ಬಿಂಗ್ ಧಾರಾವಾಹಿಗಳು!
ಕೋವಿಡ್‌ನಿಂದಾಗಿ ಡಬ್ಬಿಂಗ್ ಧಾರಾವಾಹಿಗಳು ಕನ್ನಡಕ್ಕೆ ಎಂಟ್ರಿ ಕೊಟ್ಟವು. ಈ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರೇಕ್ಷಕರು ಕೂಡ ಒಪ್ಪಿದ್ದಾರೆ. ಪರಭಾಷೆ ಗೊತ್ತಿಲ್ಲ ಎಂಬ ಕಾರಣಕ್ಕೆ ಒಳ್ಳೆಯ ಧಾರಾವಾಹಿಗಳನ್ನು ನೋಡಲಾಗುತ್ತಿರಲಿಲ್ಲ. ಅದೇ ಧಾರಾವಾಹಿಗಳು ಡಬ್ ಆಗಿ ಕನ್ನಡಕ್ಕೆ ಬಂದಾಗ ಪ್ರೇಕ್ಷಕರು ಧಾರಾವಾಹಿಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಕನ್ನಡದಲ್ಲಿ ಈಗ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚೆಚ್ಚು ಬರಲು ಶುರುವಾಗಿವೆ. ಈ ಸಾಲಿಗೆ ಮತ್ತೊಂದು ಸೀರಿಯಲ್ ಸೇರಿಕೊಳ್ಳುತ್ತಿದೆ.

'ಶ್ರೀರಸ್ತು ಶುಭಮಸ್ತು' ಆರಂಭ!
ಈ ಹಿಂದೆ ಕೂಡ ಜೀ ಕನ್ನಡದಲ್ಲಿಯೇ ಶ್ರೀರಸ್ತು ಶುಭಮಸ್ತು ಎಂಬ ಟೈಟಲ್‌ನಲ್ಲಿ ಧಾರಾವಾಹಿಯೊಂದು ಎಲ್ಲರನ್ನು ರಂಜಿಸಿತ್ತು. ಅದು ಆರು ಅತ್ತೆಯಂದಿರ ಮುದ್ದಿನ ಸೊಸೆಯ ಕಥೆಯಾಗಿತ್ತು. ಇದೀಗ ಅದೇ ಹೆಸರಿನಲ್ಲಿ ಜೀ ಕನ್ನಡದಲ್ಲಿ ಹೊಸ ಕಥೆ ಆರಂಭವಾಗಲಿದೆ. ಈ ಬಾರಿ ಮೂಡಿ ಬರುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಕಥೆಯೇ ವಿಭಿನ್ನವಾಗಿದೆ. ಇದರಲ್ಲಿ ಸುಧಾರಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅವರ ಬದುಕಿನ ರೀತಿಯ ಬಗ್ಗೆ ಹಾಗೂ ಅತ್ತೆಯನ್ನು ಬದಲಾಯಿಸಲು ಸೊಸೆ ಬರುತ್ತಾಳೆ. ಇದೇ ಧಾರಾವಾಹಿಯ ಕಥೆ. ಇಲ್ಲಿ ಅತ್ತೆಯ ಪಾತ್ರಧಾರಿ ಸುಧಾರಾಣಿ ಅವರ ಪಾತ್ರವೇ ಪ್ರಮುಖ. ಅತ್ತೆ, ಸೊಸೆ ಜಗಳ ಬಿಟ್ಟು. ಪ್ರೀತಿ ಬಾಂಧವ್ಯವನ್ನು ಸಾರಲು ಬರ್ತಿರುವ ಸೀರಿಯಲ್ ಇದು.
'ಮನೆಮಗಳು' ಕಥೆಯೇನು..?
ಈಗ ಜೀ ಕನ್ನಡದಲ್ಲಿ ಈಗ ಮನೆಮಗಳು ಎಂಬ ಧಾರಾವಾಹಿಯೊಂದು ಪ್ರಸಾರವಾಗಲಿದೆ. ಆದರೆ ಈ ಧಾರಾವಾಹಿ ಈಗಾಗಲೇ ತೆಲುಗಿನಲ್ಲಿ ಮೂಡಿ ಬರುತ್ತಿರುವ ಇಂಟಿಗುಟ್ಟು ಎಂಬ ಸೀರಿಯಲ್‌ನ ಡಬ್ಬಿಂಗ್. ಹೌದು ಇಂಟಿಗುಟ್ಟು ಎಂಬ ಧಾರಾವಾಹಿಯನ್ನು ಮನೆಮಗಳು ಎಂಬ ಹೆಸರಿನಲ್ಲಿ ಡಬ್ ಆಗಿ ಮೂಡಿ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಂ.1 ಸೊಸೆ ಡಬ್ಬಿಂಗ್ ಧಾರಾವಾಹಿ ಮುಕ್ತಾಯದ ಹಂತ ತಲುಪಿದೆ. ಬಹುಷಃ ಈ ಧಾರಾವಾಹಿಯ ಜಾಗಕ್ಕೆ ಮನೆಮಗಳು ಬರಬಹುದು ಎನ್ನಲಾಗುತ್ತಿದೆ.


Click it and Unblock the Notifications











