'ಬಿಗ್ ಬಾಸ್' ಸ್ಪರ್ಧಿಯಾಗಬೇಕು ಅಂದ್ರೆ ಎರಡು ಮದುವೆ ಆಗಿರ್ಬೇಕ್.!

Recommended Video

Bigg Boss Kannada 7 : 4 Bigg Boss Kannada 7 contestants have married twice | FILMIBEAT KANNADA

''ಬಿಗ್ ಬಾಸ್' ಮನೆಯೊಳಗೆ ಹೋಗಬೇಕು.. 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಬೇಕು ಅಂದ್ರೆ ಎರಡು ಮದುವೆ ಆಗಿರ್ಬೇಕ್'' - ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿರುವ ಟ್ರೋಲ್ ಇದು.!

ಇದು ಕಾಕತಾಳೀಯವೋ.. ಅಥವಾ ಪ್ಲಾನ್ ಮಾಡಿ ಎರಡು ಮದುವೆ ಆಗಿರುವವರನ್ನ ಒಂದು ಕಡೆ 'ಬಿಗ್ ಬಾಸ್' ಗುಡ್ಡೆ ಹಾಕಿದ್ರೋ ಗೊತ್ತಿಲ್ಲ. ಒಟ್ನಲ್ಲಿ, 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿರುವ ಕೆಲವರಿಗೆ ಈಗಾಗಲೇ ಎರಡು ಮದುವೆ ಆಗಿರೋದಂತೂ ಸತ್ಯ.

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸೌಂಡ್ ಮಾಡಿದವರು ರವಿ ಬೆಳಗೆರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ರವಿ ಬೆಳಗೆರೆ ರವರಿಗೆ ಇಬ್ಬರು ಹೆಂಡಿರು. ರವಿ ಬೆಳಗೆರೆಗೆ ಮಾತ್ರ ಅಲ್ಲ.. ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಇರುವ ಇನ್ನೂ ಮೂವರಿಗೆ ಎರಡೆರಡು ಮದುವೆ ಆಗಿದೆ. ಮುಂದೆ ಓದಿರಿ...

ಇಬ್ಬರು ಹೆಂಡಿರ ಮುದ್ದಿನ ಗಂಡ

ಇಬ್ಬರು ಹೆಂಡಿರ ಮುದ್ದಿನ ಗಂಡ

ಹಾಸ್ಯ ಕಲಾವಿದ ರಾಜು ತಾಳಿಕೋಟೆ ಅವರ ಎರಡು ಮದುವೆಯ ಕಥೆ ಬಟಾಬಯಲಾಗಿದ್ದು 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದ ಲಾಂಚ್ ದಿನ. ರಾಜು ತಾಳಿಕೋಟೆ ತಾಳಿ ಕಟ್ಟಿದ ಇಬ್ಬರು 'ಪ್ರೇಮ' ಪತ್ನಿಯರು, ಮಕ್ಕಳು, ಮೊಮ್ಮಕ್ಕಳನ್ನ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರೇ ಪರಿಚಯ ಮಾಡಿ ಕೊಟ್ಟಿದ್ದು ನಿಮಗೆ ನೆನಪಿದೆ ತಾನೇ.?

ಜೈಜಗದೀಶ್ ಮೊದಲ ಮದುವೆ ಕಥೆ

ಜೈಜಗದೀಶ್ ಮೊದಲ ಮದುವೆ ಕಥೆ

ಹಾಗ್ನೋಡಿದ್ರೆ, ಜೈಜಗದೀಶ್ ಗೆ ಎರಡು ಮದುವೆ ಆಗಿರುವ ಗುಟ್ಟು ರಟ್ಟಾಗಿದ್ದು 'ಬಿಗ್ ಬಾಸ್' ಮನೆಯಲ್ಲೇ. 'ಬಿಗ್ ಬಾಸ್' ನೀಡಿದ್ದ ಕ್ಷಮೆ ಕೇಳುವ ಚಟುವಟಿಕೆಯಲ್ಲಿ ತಮ್ಮ ಮೊದಲ ಹೆಂಡತಿಯ ಪುತ್ರಿಗೆ ಕ್ಷಮೆ ಕೋರುವ ಮೂಲಕ ತಮ್ಮ ಜೀವನದ ದೊಡ್ಡ ರಹಸ್ಯವನ್ನು ಜೈಜಗದೀಶ್ ಬಹಿರಂಗ ಪಡಿಸಿದರು. ತಮ್ಮ ಮೊದಲ ಮದುವೆಯ ಕಥೆಯನ್ನ ಜೈಜಗದೀಶ್ ಹೊರ ಹಾಕಿದರು.

ಪೃಥ್ವಿಗೂ ಎರಡು ಮದುವೆ.!

ಪೃಥ್ವಿಗೂ ಎರಡು ಮದುವೆ.!

ಇವರೆಲ್ಲರ ಜೊತೆಗೆ ಈಗಷ್ಟೇ ವೈಲ್ಡ್ ಕಾರ್ಡ್ ಮೂಲಕ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿರುವ ಪೃಥ್ವಿಗೂ ಎರಡು ಮದುವೆ ಆಗಿದೆ. ಎರಡೂ ಮದುವೆ ಮುರಿದು ಬಿದ್ದಿದ್ದು, ಸದ್ಯಕ್ಕೆ ಪೃಥ್ವಿ ಒಂಟಿಯಾಗಿದ್ದಾರೆ. ಅಸಲಿಗೆ ಎರಡೂ ಬಾರಿಯೂ ಪೃಥ್ವಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದರಂತೆ. ಆದರೆ ಅದ್ಯಾಕೋ.. ಎರಡೂ ಮದುವೆ ಫೇಲ್ಯೂರ್ ಆಗಿದೆ. ಅಂದ್ಹಾಗೆ, 42 ವರ್ಷ ವಯಸ್ಸಿನ ಪೃಥ್ವಿಗೆ ಮಕ್ಕಳಿಲ್ಲ.

ಕಾಲೆಳೆಯುತ್ತಿರುವ ನೆಟ್ಟಿಗರು.!

ಕಾಲೆಳೆಯುತ್ತಿರುವ ನೆಟ್ಟಿಗರು.!

ತಮ್ಮ ಎರಡು ಮದುವೆಗಳ ಕಥೆಯನ್ನು ಪೃಥ್ವಿ ಹೇಳುತ್ತಿದ್ದಂತೆಯೇ, ''ಎರಡು ಮದುವೆ ಆಗಿರೋರೇ ಇಲ್ಲಿ ತುಂಬಿದ್ದಾರೆ. ಈ ಸೀಸನ್ ಏನು ಅಂತ ಅರ್ಥವೇ ಆಗುತ್ತಿಲ್ಲ'' ಎಂಬ ಕಾಮೆಂಟ್ ಸ್ಪರ್ಧಿಗಳಿಂದ ವ್ಯಕ್ತವಾಯಿತು. ಇನ್ನೂ ಎರಡು ಬಾರಿ ತಾಳಿ ಕಟ್ಟಿದವರ ಕಥೆ ನೋಡಿ.. 'ಬಿಗ್ ಬಾಸ್'ಗೆ ಹೋಗಬೇಕಂದ್ರೆ ಎರಡು ಮದುವೆ ಆಗಿರ್ಬೇಕು ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

More from Filmibeat

English summary
Most of the Bigg Boss Kannada 7 contestants have married twice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X