'ಬಿಗ್ ಬಾಸ್' ಕನ್ನಡ 7: ಕಲರ್ಸ್ ಧಾರಾವಾಹಿಗಳ ಮಹಾ ಸಂಗಮ!

Recommended Video

Bigg Boss Kannada 7 Anchor Chaitra Vasudevan enters Bigg Boss house

18 ಸ್ಪರ್ಧಿಗಳ ಆಗಮನದಿಂದ 'ಬಿಗ್ ಬಾಸ್' ಮನೆ ತುಂಬಿದೆ. ಗ್ರಾಂಡ್ ಓಪನಿಂಗ್ ಮೂಲಕ ಮನೆಯ ಸದಸ್ಯರು 'ಬಿಗ್ ಬಾಸ್' ಆಟ ಶುರು ಮಾಡಿದ್ದಾರೆ. ಆದರೆ, ಕಲರ್ಸ್ ವಾಹಿನಿಯ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮ ಒಂದು ರೀತಿಯಲ್ಲಿ ಕಲರ್ಸ್ ಕುಟುಂಬದ ಕಾರ್ಯಕ್ರಮವಾಗಿದೆ. 18 ಸ್ಪರ್ಧಿಗಳ ಪೈಕಿ 7 ಸ್ಪರ್ಧಿಗಳು ಕಲರ್ಸ್ ವಾಹಿನಿಗೆ ಸಂಬಂಧ ಪಟ್ಟವರಾಗಿದ್ದಾರೆ. ಅಲ್ಲದೆ, ಹೆಚ್ಚು ಸೀರಿಯಲ್ ಕಲಾವಿದರೇ ಈ ಬಾರಿ ತುಂಬಿಕೊಂಡಿದ್ದಾರೆ. ಹೀಗಾಗಿ, ಬಿಗ್ ಬಾಸ್ ನಲ್ಲಿ ಧಾರಾವಾಹಿಗಳು ಮಹಾ ಸಂಗಮದಂತೆ ಕಾಣುತ್ತಿದೆ.

ಧಾರಾವಾಹಿ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಅದರ ನಂತರ ಸಿನಿಮಾ, ರಂಗಭೂಮಿ ಕ್ಷೇತ್ರವನ್ನು ಗಣನೆಗೆ ತೆಗೆದುಕೊಂಡಿದ್ದಾರೆ. 'ಬಿಗ್ ಬಾಸ್' ಕಲರ್ಸ್ ವಾಹಿನಿಯಲ್ಲಿ ನಡೆಯುವ ಕಾರ್ಯಕ್ರಮ ಎನ್ನುವ ಕಾರಣಕ್ಕೋ ಏನೋ ಅದೇ ವಾಹಿನಿಗೆ ಸಂಬಂಧಪಟ್ಟವರೇ 'ಬಿಗ್ ಬಾಸ್'ನಲ್ಲಿ ಜಾಗ ಪಡೆದಿದ್ದಾರೆ.

7 ಸ್ಪರ್ಧಿಗಳು ಕಲರ್ಸ್ ವಾಹಿನಿಯವರು

7 ಸ್ಪರ್ಧಿಗಳು ಕಲರ್ಸ್ ವಾಹಿನಿಯವರು

'ಬಿಗ್ ಬಾಸ್'ಗೆ ಈ ಬಾರಿ 18 ಸ್ಪರ್ಧಿಗಳು ಹೋಗಿದ್ದಾರೆ. ಈ ಪೈಕಿ 7 ಸ್ಪರ್ಧಿಗಳು ಕಲರ್ಸ್ ವಾಹಿನಿಗೆ ಸಂಬಂಧಪಟ್ಟವರಾಗಿದ್ದಾರೆ. ಕಲರ್ಸ್ ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳು, ರಿಯಾಲಿಟಿ ಶೋಗಳ ಕಲಾವಿದರಿಗೆ 'ಬಿಗ್ ಬಾಸ್'ನಲ್ಲಿ ಅವಕಾಶ ನೀಡಲಾಗಿದೆ. ಹಾಸ್ಯ ನಟ ಕುರಿ ಪ್ರತಾಪ್, ಡ್ಯಾನ್ಸರ್ ಕಿಶನ್, ನಟಿ ಪ್ರಿಯಾಂಕಾ, ಸುಜಾತ, ಚಂದನಾ, ಭೂಮಿ ಶೆಟ್ಟಿ, ನಿರೂಪಕಿ ಚ್ರೈತ್ರ, ಶೈನ್ ಶೆಟ್ಟಿ ಎಲ್ಲರೂ ಕಲರ್ಸ್ ವಾಹಿನಿ ಮೂಲಕ ಗುರುತಿಸಿಕೊಂಡವರು.

ಧಾರಾವಾಹಿಗಳ ಮಹಾ ಸಂಗಮವಾದ 'ಬಿಗ್ ಬಾಸ್'

ಧಾರಾವಾಹಿಗಳ ಮಹಾ ಸಂಗಮವಾದ 'ಬಿಗ್ ಬಾಸ್'

ನಟಿ ಪ್ರಿಯಾಂಕಾ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ, ಸುಜಾತ 'ರಾಧಾ ರಾಮಣ' ಧಾರಾವಾಹಿಯಲ್ಲಿ, 'ಚುಕ್ಕಿ' ಧಾರಾವಾಹಿಯಲ್ಲಿ ಚಂದನ, 'ಕಿನ್ನರಿ' ಧಾರಾವಾಹಿಯಲ್ಲಿ ಭೂಮಿ ಶೆಟ್ಟಿ, 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಶೈನ್ ಶೆಟ್ಟಿ ನಟಿಸಿದ್ದಾರೆ. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಹಾಗೂ ತಕಧಿಮಿತಾ ಕಾರ್ಯಕ್ರಮದಲ್ಲಿ ಡ್ಯಾನ್ಸರ್ ಕಿಶನ್ ಕಾಣಿಸಿಕೊಂಡಿದ್ದರು. ನಿರೂಪಕಿ ಚ್ರೈತ್ರ 'ಕಲರ್ಸ್ ಮೂವಿಸ್' ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದರು.

ಧಾರಾವಾಹಿ ನಂತರ ಸಿನಿಮಾ, ರಂಗಭೂಮಿ ಕಡೆ ಗಮನ

ಧಾರಾವಾಹಿ ನಂತರ ಸಿನಿಮಾ, ರಂಗಭೂಮಿ ಕಡೆ ಗಮನ

ಕಲರ್ಸ್ ವಾಹಿನಿಯ ಧಾರಾವಾಹಿ ಕಲಾವಿದರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಆ ನಂತರ ಕೆಲವು ಸಿನಿಮಾ ಹಾಗೂ ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಹಿರಿಯ ನಟ ಜೈ ಜಗದೀಶ್, ದುನಿಯಾ ರಶ್ಮಿ ಹಾಗೂ ಹರೀಶ್ ರಾಜ್ ಸಿನಿಮಾ ಕ್ಷೇತ್ರದಿಂದ ಬಂದಿದ್ದಾರೆ. ರಾಜು ರಾಳಿಕೋಟೆ, ವಾಸುಕಿ ವೈಭವ್, ಚ್ರೈತ್ರಾ ಕೊಟ್ಟೂರು, ಚಂದನ್ ರಂಗಭೂಮಿ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಕ್ರೀಡಾ ವಿಭಾಗಕ್ಕೆ ಅವಕಾಶ ನೀಡಿಲ್ಲ

ಕ್ರೀಡಾ ವಿಭಾಗಕ್ಕೆ ಅವಕಾಶ ನೀಡಿಲ್ಲ

ಉಳಿದಂತೆ, ಪತ್ರಿಕೋದ್ಯಮ ವಿಭಾಗದಿಂದ ರವಿ ಬೆಳಗೆರೆ ಹೋಗಿದ್ದಾರೆ. ಹಾವೇರಿ ಜಿಲ್ಲೆಯ, ಅಕ್ಕಿ ಮಠದ ಗುರುಲಿಂಗ ಸ್ವಾಮಿಜಿ ಕೂಡ 'ಬಿಗ್ ಬಾಸ್' ಆಟ ಆಡುತ್ತಿದ್ದಾರೆ. ಆದರೆ, ಈ ಬಾರಿ ಕ್ರೀಡಾ ವಿಭಾಗದಿಂದ ಯಾರಿಗೂ 'ಬಿಗ್ ಬಾಸ್' ಟಿಕೆಟ್ ಸಿಕ್ಕಿಲ್ಲ. ಈ ಹಿಂದೆ ಸೀಸನ್ ಮೂರರಲ್ಲಿ ಅಯ್ಯಪ್ಪ, ಸೀಸನ್ ನಾಲ್ಕರಲ್ಲಿ ದೊಡ್ಡ ಗಣೇಶ್ ಹಾಗೂ ಆರರಲ್ಲಿ ರಕ್ಷಿತಾ ರೈ ಈ ಅವಕಾಶ ಪಡೆದಿದ್ದರು.

More from Filmibeat

English summary
Bigg Boss Kannada Season 7 : Most of the Bigg Boss Kannada Season 7 contestants are Colors Kannada serial actors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X