ಬಿಕಿನಿಯಲ್ಲಿ ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವಿಡಿಯೋ ಫುಲ್ ವೈರಲ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಮಾಚಾರಿ' ಧಾರಾವಾಹಿಯಲ್ಲಿ ನಟಿಸಿ ವೀಕ್ಷಕರ ಮನಗೆದ್ದವರು ಮೌನ ಗುಡ್ಡೆಮನೆ. ಸಾವಿರಕ್ಕೂ ಅಧಿಕ ಸಂಚಿಕೆಗಳಲ್ಲಿ ಈ ಧಾರಾವಾಹಿ ಪ್ರಸಾರವಾಗಿತ್ತು. ಚಾರು ಪಾತ್ರದಲ್ಲಿ ಮೌನ ನಟನೆಗೆ ವೀಕ್ಷಕರು ಫಿದಾ ಆಗಿದ್ದರು. ಆ ಬಳಿಕ 'ಕೃಷ್ಣ- ರುಕ್ಕು' ಧಾರಾವಾಹಿಗೆ ಆಯ್ಕೆ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿರುವ ಚೆಲುವೆಯ ಹೊಸ ಅವತಾರಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

4 ವರ್ಷಗಳ ಕಾಲ 'ರಾಮಾಚಾರಿ' ಧಾರಾವಾಹಿಯ ಚಾರು ಪಾತ್ರದಲ್ಲಿ ಮೌನ ಗುಡ್ಡೆಮನೆ ಗಮನ ಸೆಳೆದಿದ್ದರು. ಆರಂಭದಲ್ಲಿ ಬಹಳ ಜಂಭದ ಹುಡುಗಿ ಆಗಿರುವ ಚಾರು ಬಳಿಕ ರಾಮಾಚಾರಿ ಕೈಹಿಡಿದು ಬದಲಾಗುತ್ತಾಳೆ. ಕೊನೆ ಕೊನೆಗೆ ಕಥೆಯನ್ನು ಸಿಕ್ಕಾಪಟ್ಟೆ ಎಳೆಯಲಾಗಿತ್ತು. ಆದರೂ ರಿತ್ವಿಕ್ ಹಾಗೂ ಮೌನ ನಟನೆಗೆ ವೀಕ್ಷಕರು ಮನ ಸೋತಿದ್ದರು. ಸದ್ಯ ಬುಲೆಟ್ ಮೈಕ್ರೋ ಡ್ರಾಮಾ ಸೀರಿಸ್ ಮೂಲಕ ಮೌನ ಗುಡ್ಡೆಮನೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Mouna Guddemane gets trolled for wearing a Bikini For Love Punch Bullet Micro Drama

ಕೊರಿಯನ್ ಮೈಕ್ರೊ ವೆಬ್ ಸೀರಿಸ್‌ಗಳು ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ನಿಧಾನವಾಗಿ ಭಾರತದಲ್ಲಿ ಕೂಡ ಈ ಮೈಕ್ರೋ ಸೀರಿಸ್ ಟ್ರೆಂಡ್ ಆರಂಭವಾಗಿದೆ. ಒಂದು ನಿಮಿಷದ ಸಣ್ಣ ಸಣ್ಣ ಎಪಿಸೋಡ್‌ಗಳಾಗಿ ಈ ವೆಬ್ ಸೀರಿಸ್ ಮೂಡಿ ಬರುತ್ತದೆ. ಆಪ್‌ ಡೌನ್‌ಲೋಡ್ ಮಾಡಿಕೊಂಡು ಹಣ ಪಾವತಿಸಿ ಇದನ್ನು ವೀಕ್ಷಿಸಬಹುದು. ಜೀ-5ನಲ್ಲಿ ಈಗಾಗಲೇ ಕೆಲ ಮೈಕ್ರೊ ವೆಬ್ ಸೀರಿಸ್ ವೀಕ್ಷಣೆಗೆ ಲಭ್ಯವಿದೆ. ಅಂಥದ್ದೇ ಸಣ್ಣ ಬುಲೆಟ್ ವೆಬ್ ಸೀರಿಸ್ 'ಲವ್ ಪಂಚ್'. ಇತ್ತೀಚೆಗೆ ನಿಧನರಾದ ದಿಲೀಪ್ ರಾಜ್ ಇದಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'ಲವ್ ಪಂಚ್' ಹೆಸರಿನ ಬುಲೆಟ್ ಮೈಕ್ರೊ ಡ್ರಾಮಾ ಸೀರಿಸ್‌ನಲ್ಲಿ ಶರತ್ ಪದ್ಮನಾಭ್ ಹಾಗೂ ಮೌನ ಗುಡ್ಡೆಮನೆ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಪ್ರೀತಂ ಹಾಗೂ ನಂದಿನಿ ಎಂಬ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜಂಭದ ಹುಡುಗಿ ನಂದಿನಿಯನ್ನು ಪಳಗಿಸುವ ಖಡಕ್ ಹುಡುಗನ ಕಥೆ ಇದು. ವೆಬ್ ಸೀರಿಸ್ ಟೀಸರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಮೌನ ಗುಡ್ಡೆಮನೆ ಬಿಕಿನಿ ಧರಿಸಿ ಬಿಂದಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಆಕೆ ಸ್ವಿಮ್‌ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊ, ವೀಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಆದರೆ ಅದಕ್ಕೆಲ್ಲಕ್ಕಿಂತ ಬಹಳ ಮಾದಕವಾಗಿ ಈ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ.

ಪಡ್ಡೆ ಹುಡುಗರು 'ಲವ್ ಪಂಚ್' ಟೀಸರ್‌ ನೋಡಿ ಮೌನ ಗುಡ್ಡೆಮನೆ ಅವತಾರಕ್ಕೆ ಕಳೆದು ಹೋಗಿದ್ದಾರೆ. ಆದರೆ ಕೆಲವರು ಟೀಕಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲಾ ಬೇಕಿತ್ತಾ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾವು ಇದನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸೀರೆ ಅಂದರೆ ಮೌನ ಗುಡ್ಡೆಮನೆ ಅವರಿಗೆ ಅಚ್ಚುಮೆಚ್ಚು. ಆಗಾಗ್ಗೆ ಸೀರೆ ಉಟ್ಟು ಫೋಟೊಶೂಟ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಅದಕ್ಕೆ ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಈಗ ಹೊಸ ಅವತಾರಕ್ಕೆ ಬೇಸರಗೊಂಡಿದ್ದಾರೆ.

ಕೆಲ ನಟಿಯರು ಇದ್ದಕ್ಕಿದ್ದಂತೆ ಬಿಂದಾಸ್ ಆಗಿ ಬಿಕಿನಿ ತೊಟ್ಟು ದರ್ಶನ ಕೊಟ್ಟಾಗ ಟ್ರೋಲ್ ಆಗುವುದು ಸಹಜ. ಅದರಲ್ಲೂ ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ನಟಿಸುವವರು ದಿಢೀರನೆ ಹೀಗೆ ಕಾಣಿಸಿಕೊಂಡಾಗ ಕೆಲವರು ಹುಬ್ಬೇರಿಸುತ್ತಾರೆ. ಈ ಹಿಂದೆ ಕೂಡ ಕೆಲವರು ಇಂತಹ ಟ್ರೋಲ್ ಎದುರಿಸಿರುವಂತಾಗಿತ್ತು. 'ದೇವೋಂ ಕೆ ದೇವ್... ಮಹಾದೇವ್' ಹಿಂದಿ ಕಿರುತೆರೆ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಸೋನಾರಿಕಾ ಭಡೋರಿಯಾ ಬಿಕಿನಿ ತೊಟ್ಟು ಪೋಸ್ ಕೊಟ್ಟಾಗ ಭಾರೀ ಟ್ರೋಲ್ ಎದುರಿಸುವಂತಾಗಿತ್ತು.

Read more about: actress controversy web series
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X