For Quick Alerts
  ALLOW NOTIFICATIONS  
  For Daily Alerts

  ಹೊಸ ತಂತ್ರಜ್ಞಾನದಲ್ಲಿ ಆಕರ್ಷಿಸುತ್ತಿದೆ 'ಮೌನರಾಗ' ಪ್ರೋಮೋ

  |

  ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಇಂಕ್ ಬ್ಲಾಟ್ ಟೆಕ್ನಾಲಜಿ ಬಳಸಿ, ಧಾರವಾಹಿಯ ಪ್ರೋಮೋ ರಿಲೀಸ್ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ 'ಮೌನರಾಗ' ಧಾರವಾಹಿಗೆ ಈ ರೀತಿ ಪ್ರಮೋಷನ್ ಮಾಡಲಾಗಿದೆ.

  ಕಲಾವಿದ ವಿಕ್ರಾಂತ್ ಅವರ ಪ್ರತಿಭೆ ಈ ಪ್ರೋಮೋದಲ್ಲಿ ಅನಾವರಣವಾಗಿದೆ. ಕನ್ನಡಿಗರ ಅಚ್ಚುಮೆಚ್ಚಿನ ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿಯವರು ಬರೆದಿರುವ 'ಮೌನರಾಗ'ದ ಶೀರ್ಷಿಕೆ ಗೀತೆ ಭಾವ ತರಂಗ ಸೃಷ್ಟಿಸಿದೆ.

  ಮೌನರಾಗದ ಗೀತೆಗೆ ಅಭಿಲಾಷ್ ಮತ್ತು ಜೋಯಿಲ್ ಸಂಗೀತ ನೀಡಿದ್ದು, ಸಿರಿ ಮತ್ತು ಅನನ್ಯ ಪ್ರಕಾಶ್ ಅವರು ದನಿಯಾಗಿದ್ದಾರೆ.

  ಇನ್ನುಳಿದಂತೆ ಈ ಧಾರಾವಾಹಿ ಯಾವಾಗ ಪ್ರಸಾರವಾಗಲಿ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದ್ರೆ, ಅತಿ ಶೀಘ್ರದಲ್ಲೇ ಬರಲಿದೆ ಎಂಬ ಪ್ರೋಮೋ ಈಗಾಗಲೇ ಧಾರಾವಾಹಿ ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ.

  English summary
  Kannada serial Mouna Ragam promo released and this serial will telecast in coming days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X