ಸಂಯುಕ್ತ ಜೀವಮಾನದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ತು ಲವ್ ಲೆಟರ್.!

Recommended Video

MTV Splitsvilla Season 11 : ಸಂಯುಕ್ತ ಹೆಗಡೆಗೆ ಮೊದಲ ಬಾರಿಗೆ ಸಿಕ್ತು ಲವ್ ಲೆಟರ್ | FILMIBEAT KANNADA

ಎಂಟಿವಿಯ ಡೇಟಿಂಗ್ ರಿಯಾಲಿಟಿ ಶೋ 'ಸ್ಪ್ಲಿಟ್ಸ್ ವಿಲ್ಲಾ-11'ನಲ್ಲಿ ಕನ್ನಡ ನಟಿ ಸಂಯುಕ್ತ ಹೆಗ್ಡೆ ಸ್ಪರ್ಧಿಯಾಗಿ ಭಾಗವಹಿಸಿರುವುದು ನಿಮಗೆಲ್ಲ ಗೊತ್ತೇ ಇದೆ. 'ಸ್ಪ್ಲಿಟ್ಸ್ ವಿಲ್ಲಾ-11'ನಲ್ಲಿ ಸಂಯುಕ್ತ ಹೆಗ್ಡೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಂತೆಯೇ, ವಿಲ್ಲಾ ಅಕ್ಷರಶಃ ಸ್ಪ್ಲಿಟ್ ಆಗಿದೆ.

ಮೊದಲ ಡೇಟಿಂಗ್ ನಲ್ಲಿ ಸ್ವಿಮ್ ಸೂಟ್ ಧರಿಸಿದ ಸಂಯುಕ್ತ ಹೆಗ್ಡೆ ಸ್ಪರ್ಧಿ ಸಿಂಬಾ ಕಣ್ಣು ಕುಕ್ಕಿದರು. ಇದರ ಪರಿಣಾಮ ಅದಾಗಲೇ ಕನೆಕ್ಟ್ ಆಗಿದ್ದ ಸಿಂಬಾ-ಮೈರಾ ನಡುವೆ ಬಿರುಕು ಮೂಡಿತು.

ಒಂದು ಜೋಡಿ ಒಡೆದ ಸಂಯುಕ್ತ ಹೆಗ್ಡೆ ಕಣ್ಣು ಇದೀಗ ಶಗುನ್ ಮೇಲೆ ಬಿದ್ದಿದೆ. ಶಗುನ್ ಹಾಗೂ ಆರುಷಿ ಹಾಂಡಾ ಆಗಲೇ ಐಡಿಯಲ್ ಮ್ಯಾಚ್ ಆಗಿ ಕಾರ್ಯಕ್ರಮದಲ್ಲಿ ಸೇಫ್ ಆಗಿದ್ದಾರೆ. ಹೀಗಿದ್ದರೂ, ಸಂಯುಕ್ತ ಹೆಗ್ಡೆ ಮಾಡಿದ ಮೋಡಿಗೆ ಶಗುನ್ ಕ್ಲೀನ್ ಬೌಲ್ಡ್ ಆದ್ದರಿಂದ ಆರುಷಿ ಹಾಂಡಾ ಯದ್ವಾತದ್ವಾ ಸಿಡಿಮಿಡಿಗೊಂಡಿದ್ದಾರೆ. ಮುಂದೆ ಓದಿರಿ...

ಮುಖಕ್ಕೆ ಸಗಣಿ ಎರಚುವ ಟಾಸ್ಕ್

ಮುಖಕ್ಕೆ ಸಗಣಿ ಎರಚುವ ಟಾಸ್ಕ್

ರಣ್ ವಿಜಯ್ ಹಾಗೂ ಸನ್ನಿ ಲಿಯೋನ್ ನಿರೂಪಣೆಯಲ್ಲಿ ಸಾಗಿದ ಬೇವಾಚ್ ಸೆಷನ್ ನಲ್ಲಿ ಶಗುನ್, ಸಂಯುಕ್ತ ಹೆಗ್ಡೆ, ಮೈರಾ, ರೋಷಿಣಿ ಹಾಗೂ ಶ್ರುತಿ ಮುಖಕ್ಕೆ ವಿವಿಧ ಕಾರಣಗಳನ್ನು ನೀಡಿ ಇತರೆ ಸ್ಪರ್ಧಿಗಳು ಅತಿ ಹೆಚ್ಚು ಬಾರಿ ಸಗಣೆ ಎರಚಿದರು. ಹೀಗಾಗಿ ಟೆಸ್ಟ್ ಯುವರ್ ಬಾಂಡ್ ಚಾಲೆಂಜ್ ಗೆ ಇವರೆಲ್ಲ ಅರ್ಹತೆ ಪಡೆದರು.

ಶಗುನ್ ಕೈಯಲ್ಲಿ ಅಧಿಕಾರ

ಶಗುನ್ ಕೈಯಲ್ಲಿ ಅಧಿಕಾರ

ಟೆಸ್ಟ್ ಯುವರ್ ಬಾಂಡ್ ಚಾಲೆಂಜ್ ನಲ್ಲಿ ಸಂಯುಕ್ತ ಹೆಗ್ಡೆ ಹಾಗೂ ಶ್ರುತಿ ಪೈಕಿ ಒಬ್ಬರಿಗೆ ಮಾತ್ರ ಪರ್ಫಾರ್ಮ್ ಮಾಡುವ ಅವಕಾಶ ಇತ್ತು. ಇಬ್ಬರ ಪೈಕಿ ಒಬ್ಬರಿಗೆ ಅವಕಾಶ ಕೊಡುವ ಜವಾಬ್ದಾರಿ ಶಗುನ್ ಮೇಲಿತ್ತು. ಹೀಗಾಗಿ, ಶಗುನ್ ಮನವೊಲಿಸಲು ಶ್ರುತಿ ಹಾಗೂ ಸಂಯುಕ್ತ ಡೇಟ್ ಗೆ ತೆರಳಿದರು.

ಡೇಟ್ ವೇಳೆ ಸಂಯುಕ್ತಗೆ ಲವ್ ಲೆಟರ್ ಕೊಟ್ಟ ಶಗುನ್

ಡೇಟ್ ವೇಳೆ ಸಂಯುಕ್ತಗೆ ಲವ್ ಲೆಟರ್ ಕೊಟ್ಟ ಶಗುನ್

ಸಂಯುಕ್ತ ಹೆಗ್ಡೆ ಮೇಲೆ ಶಗುನ್ ಗೆ ಮನಸ್ಸಾಗಿದೆ. ಹೀಗಾಗಿ, ಡೇಟಿಂಗ್ ವೇಳೆ ಸಂಯುಕ್ತ ಹೆಗ್ಡೆಗೆ ಲವ್ ಲೆಟರ್ ಕೊಟ್ಟು ತಮ್ಮ ಪ್ರೀತಿಯನ್ನ ಶಗುನ್ ವ್ಯಕ್ತಪಡಿಸಿದರು. ಅಲ್ಲದೇ, ಸಂಯುಕ್ತ ಜೊತೆಗೆ ಟಾಸ್ಕ್ ನಲ್ಲಿ ಭಾಗವಹಿಸಲು ಶಗುನ್ ಗ್ರೀನ್ ಸಿಗ್ನಲ್ ಕೊಟ್ಟರು. ಇತ್ತ ಜೀವಮಾನದಲ್ಲಿ ಮೊಟ್ಟ ಮೊದಲ ಬಾರಿಗೆ ಲವ್ ಲೆಟರ್ ಸಿಕ್ಕ ಕಾರಣ, ಸಂತಸ ಪಟ್ಟ ಸಂಯುಕ್ತ, ಶಗುನ್ ಪ್ರೀತಿಗೆ ಸಮ್ಮತಿ ಸೂಚಿಸಿದರು.

ಕೆರಳಿದ ಆರುಷಿ ಹಾಂಡಾ

ಕೆರಳಿದ ಆರುಷಿ ಹಾಂಡಾ

ಶಗುನ್ ಹಾಗೂ ಆರುಷಿ ಹಾಂಡಾ ಐಡಿಯಲ್ ಮ್ಯಾಚ್ ಆಗಿದ್ದಾಗಿದೆ. ಹೀಗಿದ್ದರೂ, ಅದನ್ನ ತೊರೆದು ಸಂಯುಕ್ತ ಹೆಗ್ಡೆ ಜೊತೆಗೆ ಹೋಗಲು ಮುಂದಾಗಿರುವ ಶಗುನ್ ವಿರುದ್ಧ ಆರುಷಿ ಹಾಂಡಾ ಕೆರಳಿದರು. ಇಬ್ಬರ ಮಧ್ಯೆ ಯುದ್ದವೇ ನಡೆಯಿತು.

ಟೆಸ್ಟ್ ಯುವರ್ ಬಾಂಡ್ ಚಾಲೆಂಜ್ ನಲ್ಲಿ ಸೋತ ಸಂಯುಕ್ತ.!

ಟೆಸ್ಟ್ ಯುವರ್ ಬಾಂಡ್ ಚಾಲೆಂಜ್ ನಲ್ಲಿ ಸೋತ ಸಂಯುಕ್ತ.!

ಜಗಳ, ಗಲಾಟೆ ನಡೆದರೂ ಶಗುನ್-ಸಂಯುಕ್ತ ಟೆಸ್ಟ್ ಯುವರ್ ಬಾಂಡ್ ಚಾಲೆಂಜ್ ನಲ್ಲಿ ಜೋಡಿಯಾಗಿ ಭಾಗವಹಿಸಿದರು. ಆದ್ರೆ, ಚಾಲೆಂಜ್ ನಲ್ಲಿ ಶಗುನ್-ಸಂಯುಕ್ತ ಸೋಲು ಅನುಭವಿಸಿದರು. ಸದ್ಯಕ್ಕೆ ಸಂಯುಕ್ತ ಹೆಗ್ಡೆ ಡೇಂಜರ್ ಝೋನ್ ನಲ್ಲಿದ್ದಾರೆ. ಮುಂದೇನಾಗುತ್ತೋ, ನೋಡಬೇಕು.

More from Filmibeat

English summary
MTV Splitsvilla 11: Kannada Actress Samyuktha Hegde gets love letter from Shagun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X