ಹಿಂದಿ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪಿದ 'ಕಿರಿಕ್' ಸಂಯುಕ್ತ.!
ಸಿನಿಮಾಗಳಿಗಿಂತ ಹೆಚ್ಚಾಗಿ 'ಕಿರಿಕ್' ಹುಡುಗಿ ಸಂಯುಕ್ತಾ ರಿಯಾಲಿಟಿ ಶೋ ಮತ್ತು ಸೋಷಿಯಲ್ ಮೀಡಿಯಾ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ.
ಕಳೆದ ವರ್ಷ ಕನ್ನಡದ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕಾಲಿಟ್ಟಿದ್ದ ಸಂಯುಕ್ತ ಹೆಗಡೆ ಸಮೀರಾಚಾರ್ಯ ಮೇಲೆ ಕೈ ಎತ್ತಿ ವಿವಾದವನ್ನು ಮೈಮೇಲೆ ಎಳೆದುಕೊಂಡು 'ಬಿಗ್ ಬಾಸ್' ಮನೆಯಿಂದ ಹೊರಬಿದ್ದರು.
ಇನ್ನು ಎಂಟಿವಿ ರೋಡೀಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಸಂಯುಕ್ತ ಗೆಲುವು ಸಾಧಿಸಲಿಲ್ಲ. ಇದೀಗ ಅದೇ ಎಂಟಿವಿ ಸ್ಪ್ಲಿಟ್ಸ್ ವಿಲ್ಲಾ-11 ಕಾರ್ಯಕ್ರಮದಲ್ಲಿ ನಟಿ ಸಂಯುಕ್ತ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿರುವ ಬಗ್ಗೆ ನಿಮ್ಮ ಫಿಲ್ಮಿಬೀಟ್ ಕನ್ನಡದಲ್ಲಿ ವರದಿ ಆಗಿತ್ತು.
ಇಲ್ಲಿಯವರೆಗೂ ಸ್ಪ್ಲಿಟ್ಸ್ ವಿಲ್ಲಾ-11 ಕಾರ್ಯಕ್ರಮದ ಬಹುತೇಕ ಟಾಸ್ಕ್ ಗಳಲ್ಲಿ ಸೋಲು ಅನುಭವಿಸುತ್ತಿದ್ದ ಸಂಯುಕ್ತ ಈಗ ಏಕ್ದಂ ಪ್ರೀತಿಯ ಹುಡುಗ ಶಗುನ್ ಜೊತೆ ಗ್ರಾಂಡ್ ಫಿನಾಲೆ ಹಂತ ತಲುಪಿದ್ದಾರೆ. ಮುಂದೆ ಓದಿರಿ...

ಗ್ರ್ಯಾಂಡ್ ಫಿನಾಲೆಗೆ ಕಾಲಿಟ್ಟ ಸಂಯುಕ್ತ
ಸ್ಪ್ಲಿಟ್ಸ್ ವಿಲ್ಲಾ-11 ರಿಯಾಲಿಟಿ ಶೋಗೆ ಪದಾರ್ಪಣೆ ಮಾಡಿದ ಮೇಲೆ ಸಂಯುಕ್ತ ಹೆಗ್ಡೆ ಹೆಚ್ಚು ಕ್ಲೋಸ್ ಆಗಿದ್ದು ಶಗುನ್ ಜೊತೆ. ಈಗ ಅದೇ ಶಗುನ್ ಜೊತೆಗೆ ಸಂಯುಕ್ತ ಹೆಗ್ಡೆ ಗ್ರ್ಯಾಂಡ್ ಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ.

ಸಂಯುಕ್ತ-ಶಗುನ್ ಲವ್ ಸ್ಟೋರಿ
ಸಂಯುಕ್ತ ಹೆಗ್ದೆ ಡಾನ್ಸ್ ನೋಡಿ ಕ್ಲೀನ್ ಬೌಲ್ಡ್ ಆಗಿದ್ದ ಶಗುನ್ ಆಕೆಗಾಗಿ ಲವ್ ಲೆಟರ್ ಅನ್ನೂ ಈ ಶೋನಲ್ಲಿ ಬರೆದಿದ್ದರು. ತಮ್ಮ ಮೇಲೆ ಶಗುನ್ ಇಟ್ಟಿರುವ ಪ್ರೀತಿಗೆ ಸಂಯುಕ್ತ ಕೂಡ ಫಿದಾ ಆಗಿದ್ದರು. ಸೆಮಿ ಫಿನಾಲೆ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ಕೊಟ್ಟ ಈ ಜೋಡಿ ಗ್ರ್ಯಾಂಡ್ ಫಿನಾಲೆಯಲ್ಲಿ ಏನ್ ಮಾಡ್ತಾರೋ.?

ಮಾಜಿ ಗೆಳೆಯನ ವಿರುದ್ಧ ಸೆಣಸಲಿರುವ ಸಂಯುಕ್ತ
'ಸ್ಪ್ಲಿಟ್ಸ್ ವಿಲ್ಲಾ-11'ಗೆ ಸಂಯುಕ್ತ ಬಂದ ಮೇಲೆ ಆಕೆಯ ಎಕ್ಸ್ ಬಾಯ್ ಫ್ರೆಂಡ್ ಗೌರವ್ ಕೂಡ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟರು. ಸದ್ಯ ಗೌರವ್-ಶೃತಿ ಜೋಡಿ ಮತ್ತು ಸಂಯುಕ್ತ-ಶಗುನ್ ಜೋಡಿ ಗ್ರಾಂಡ್ ಫಿನಾಲೆ ತಲುಪಿದೆ. ಮಾಜಿ ಗೆಳೆಯನ ವಿರುದ್ಧ ಸಂಯುಕ್ತ ಗೆಲುವಿನ ನಗೆ ಬೀರುತ್ತಾರಾ.?

ಪ್ರಸಾರ ಯಾವಾಗ.?
ಸ್ಪ್ಲಿಟ್ಸ್ ವಿಲ್ಲಾ-11 ಗ್ರಾಂಡ್ ಫಿನಾಲೆ ಸಂಚಿಕೆ ಬರುವ ಭಾನುವಾರ ಸಂಜೆ 7 ಗಂಟೆಗೆ ಎಂಟಿವಿಯಲ್ಲಿ ಪ್ರಸಾರವಾಗಲಿದೆ. ರೋಡೀಸ್ ಗೆಲ್ಲದ ಸಂಯುಕ್ತ ಸ್ಪ್ಲಿಟ್ಸ್ ವಿಲ್ಲಾ-11 ಗೆಲ್ತಾರಾ ಎಂಬುದೇ ಸದ್ಯದ ಪ್ರಶ್ನೆ.


Click it and Unblock the Notifications











