'ಸ್ಪ್ಲಿಟ್ಸ್ ವಿಲ್ಲಾ-11'ಗೆ ಬಂದ ಸಂಯುಕ್ತ ಹೆಗ್ಡೆ ಮಾಜಿ ಪ್ರಿಯಕರ: ಕಿರಿಕ್ ಹುಡುಗಿಯ ಲವ್ ಸ್ಟೋರಿಗಳೆಷ್ಟು.?

ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ' ಹುಡುಗಿ ಸಂಯುಕ್ತ ಹೆಗ್ಡೆ 'ಕಿರಿಕ್'ಗಳಿಂದಲೇ ಸದ್ದು ಮಾಡಿದ್ದು ಹೆಚ್ಚು. 'ಬಿಗ್ ಬಾಸ್' ಮನೆಯೊಳಗೂ ಸಂಯುಕ್ತ ಹೆಗ್ಡೆ ಮಾಡಿದ್ದ ರಂಪಾಟ ನಿಮಗೆಲ್ಲ ಗೊತ್ತಿರಲೇಬೇಕು.

ಸದ್ಯ ಸಂಯುಕ್ತ ಹೆಗ್ಡೆ ಎಂಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸ್ಪ್ಲಿಟ್ಸ್ ವಿಲ್ಲಾ-11' ಡೇಟಿಂಗ್ ರಿಯಾಲಿಟಿ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟು ಸ್ಪರ್ಧಿಯಾಗಿದ್ದಾರೆ. 'ಸ್ಪ್ಲಿಟ್ಸ್ ವಿಲ್ಲಾ'ಗೆ ಸಂಯುಕ್ತ ಹೆಗ್ಡೆ ಕಾಲಿಟ್ಟ ಮೇಲೆ ಸಿಂಬಾ ಮತ್ತು ಮೈರಾ ನಡುವಿನ ಸಂಬಂಧ ಮುರಿದು ಬಿತ್ತು.

''ಸಂಯುಕ್ತಗೆ ಆಕರ್ಷಿತನಾಗಿದ್ದೇನೆ'' ಎಂದು ಮೈರಾಗೆ ಕೈಕೊಟ್ಟು ಸಂಯುಕ್ತ ಜೊತೆ ಸಿಂಬಾ ಟಾಸ್ಕ್ ಪರ್ಫಾಮ್ ಮಾಡಿದರು. ಪರಿಣಾಮ, ಮೈರಾ ಹಾಗೂ ಸಂಯುಕ್ತ ನಡುವೆ ದೊಡ್ಡ ಗಲಾಟೆಯೇ ನಡೆದು ಹೋಯ್ತು.

ಬಳಿಕ ಸಂಯುಕ್ತ ಹೆಗ್ಡೆ ಹೆಚ್ಚು ಕ್ಲೋಸ್ ಆಗಿದ್ದು ಶಗುನ್ ಜೊತೆಗೆ. ಸಂಯುಕ್ತ ಹೆಗ್ಡೆಗೆ ಕ್ಲೀನ್ ಬೌಲ್ಡ್ ಆದ ಶಗುನ್ ಲವ್ ಲೆಟರ್ ಕೂಡ ಕೊಟ್ಟು ಪ್ರಪೋಸ್ ಮಾಡಿದರು. ಹೀಗಿರುವಾಗಲೇ, ಇದೇ ಶೋನಲ್ಲಿ ಸಂಯುಕ್ತ ಹೆಗ್ಡೆಯ ಮಾಜಿ ಪ್ರಿಯಕರ ಪ್ರತ್ಯಕ್ಷವಾಗಿದ್ದಾರೆ. ಮುಂದೆ ಓದಿರಿ...

'ಸ್ಪ್ಲಿಟ್ಸ್ ವಿಲ್ಲಾ-11'ನಲ್ಲಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ

'ಸ್ಪ್ಲಿಟ್ಸ್ ವಿಲ್ಲಾ-11'ನಲ್ಲಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ

'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲಿ ಸದ್ಯ ಇಬ್ಬರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಾಗಿದೆ. ಒಬ್ಬರು ಸಂಯುಕ್ತ ಹೆಗ್ಡೆ ಮಾಜಿ ಪ್ರಿಯಕರ ಗೌರವ್ ಆಗಿದ್ದರೆ, ಇನ್ನೊಬ್ಬರು ಕಬೀರ್ ಮಾಜಿ ಪ್ರೇಯಸಿ ಮೆಹಕ್.

ಈತನೇ ಸಂಯುಕ್ತ ಮಾಜಿ ಪ್ರೇಮಿ.!

ಈತನೇ ಸಂಯುಕ್ತ ಮಾಜಿ ಪ್ರೇಮಿ.!

''ಗೌರವ್... ನನ್ನ ಮಾಜಿ ಪ್ರೇಮಿ'' ಎಂದು ಸ್ವತಃ ಸಂಯುಕ್ತ ಹೆಗ್ಡೆ 'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲೇ ಹೇಳಿಕೊಂಡಿದ್ದಾರೆ. ಅಸಲಿಗೆ ಈ ಗೌರವ್ ಯಾರಪ್ಪಾ ಅಂದ್ರೆ.. ಈತ ಕೂಡ ಎಂಟಿವಿ ರೋಡೀಸ್ ನಲ್ಲಿ ಸ್ಪರ್ಧಿಸಿದ್ದರು.

ತಗಲಾಕೊಂಡ ಸಂಯುಕ್ತ

ತಗಲಾಕೊಂಡ ಸಂಯುಕ್ತ

ಒಂದ್ಕಡೆ ಮಾಜಿ ಪ್ರಿಯಕರ ಗೌರವ್... ಇನ್ನೊಂದು ಕಡೆ ಸದ್ಯ ಲವ್ ಲೆಟರ್ ಕೊಟ್ಟಿರುವ ಶಗುನ್.... ಮಧ್ಯೆ ಸಿಂಬಾ ಬೇರೆ.! ಈ ಮೂವರನ್ನ ಸಂಯುಕ್ತ ಹೆಗ್ಡೆ ರಿಯಾಲಿಟಿ ಶೋನಲ್ಲಿ ಹೇಗೆ ಸಂಬಾಳಿಸುತ್ತಾರೋ.!

ಬಸೀರ್ ಕಥೆ ಏನಾಯ್ತು.?

ಬಸೀರ್ ಕಥೆ ಏನಾಯ್ತು.?

ಎಂಟಿವಿ ರೋಡೀಸ್ ನಲ್ಲಿ ಸಂಯುಕ್ತ ಹೆಗ್ಡೆ ಸ್ಪರ್ಧಿಯಾಗಿದ್ದಾಗ, ಬಸೀರ್ ಕೆನ್ನೆಗೆ ಮುತ್ತು ಕೊಟ್ಟಿದ್ದರು. ಸಂಯುಕ್ತ ಹಾಗೂ ಬಸೀರ್ ನಡುವೆ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಕೂಡ ಹಬ್ಬಿತ್ತು. ಇಬ್ಬರ ನಡುವೆ ಇದ್ದ ಅನುಬಂಧ ಶೋ ಮುಗಿದ ಮೇಲೆ ಏನಾಯ್ತೋ.?

ಸಂಯುಕ್ತ ಹೆಗ್ಡೆ ಲವ್ ಸ್ಟೋರಿಗಳೆಷ್ಟು.?

ಸಂಯುಕ್ತ ಹೆಗ್ಡೆ ಲವ್ ಸ್ಟೋರಿಗಳೆಷ್ಟು.?

ಸ್ಕೂಲ್ ನಲ್ಲಿ ಇರುವಾಗಲೇ ಸಂಯುಕ್ತ ಹೆಗ್ಡೆ ಒಂದು ರಿಲೇಶನ್ ಶಿಪ್ ನಲ್ಲಿ ಇದ್ದರಂತೆ. ಹಾಗಂತ ಸ್ವತಃ ಸಂಯುಕ್ತ 'ಸ್ಪ್ಲಿಟ್ಸ್ ವಿಲ್ಲಾ'ದಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಅದೇ ಡೇಟಿಂಗ್ ಶೋ ನಲ್ಲಿ ಮಾಜಿ ಮತ್ತು ಹಾಲಿ ಪ್ರಿಯಕರನ ನಡುವೆ ಸಂಯುಕ್ತ ತಗಲಾಕೊಂಡಿದ್ದಾರೆ. ಮುಂದೇನಾಗುತ್ತೋ, ನೋಡಬೇಕು.

More from Filmibeat

English summary
MTV Splitsvilla 11: Kannada Actress Samyuktha Hegde's EX Boyfriend enters the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X