Don't Miss!
- Technology
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- News
Mann Ki Baat; ಕಲಬುರಗಿಯ ಸಿರಿಧಾನ್ಯ ಉತ್ಪಾದನೆ ಶ್ಲಾಘಿಸಿದ ಮೋದಿ
- Sports
ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Muddumanigali Serial: ಮಕ್ಕಳನ್ನು ಕಾಪಾಡುವುದಕ್ಕೆ ಎದ್ದು ಬಂದ ʻಮುದ್ದುಲಕ್ಷ್ಮೀʼ.. ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್!
ಎಲ್ಲವೂ ಸರಿಯಿದ್ದ ಮುದ್ದುಮಣಿಗಳ ಲೈಫ್‌ನಲ್ಲಿ ಈಗ ಬಿರುಗಾಳಿ ಎದ್ದಿದೆ. ಅಮ್ಮನನ್ನು ಕಳೆದುಕೊಂಡ ಮೇಲೆ ಅಕ್ಕ ತಂಗಿ ಯಾರು ಎಂಬುದು ಗೊತ್ತಿಲ್ಲದೆ ಬದುಕುತ್ತಿದ್ದರು. ಅಕ್ಕ ತಂಗಿ ನಾವೇ ಎಂದು ಗೊತ್ತಾದಾಗ ಅಹಲ್ಯಾ ಶತ್ರುವಾಗಿ ಕಂಡಳು. ಇಬ್ಬರನ್ನು ದೂರ ಮಾಡಲು ಯತ್ನಿಸಿದಳು. ಆದರೆ ದೃಷ್ಟಿಯ ಒಳ್ಳೆಯತನದಿಂದ ಅಕ್ಕ ತಂಗಿಯರು ಒಂದಾದರು.
ಹಾಗಂತ ಸಮಸ್ಯೆ ಏನು ಕಡಿಮೆಯಾಗಲಿಲ್ಲ. ಅಕ್ಕ ತಂಗಿಯರು ಒಂದಾಗುವ ಹೊತ್ತಿಗೆ ಅಣ್ಣ ತಮ್ಮ ದೂರವಾಗುವುದಕ್ಕೆ ಬಂತು. ಅದನ್ನು ದೃಷ್ಟಿ ಸರಿ ಮಾಡಬೇಕು ಎನ್ನುವಷ್ಟರಲ್ಲಿಯೇ ಮುದ್ದು ಲಕ್ಷ್ಮೀಯ ಶತ್ರು ಶಾರ್ವರಿಯ ಎಂಟ್ರಿಯಾಗಿ, ಮುದ್ದುಮಣಿಗಳ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾಳೆ.
Bhoomige
Banda
Bagavatha:
ಶೀಘ್ರದಲ್ಲೇ
ಹೊಸ
ಧಾರಾವಾಹಿ
ʻಭೂಮಿಗೆ
ಬಂದ
ಭಗವಂತ'!

ಮುದ್ದುಲಕ್ಷ್ಮೀಯಿಂದ 'ಮುದ್ದುಮಣಿ'ಗಳ ಜರ್ನಿ
ಒಂದು ಧಾರಾವಾಹಿ ಶುರುವಾದಾಗ ಕಥೆಯ ಬಗ್ಗೆ ಕುತೂಹಲವಿರುತ್ತೆ. ಆರಂಭದ ದಿನಗಳಲ್ಲಿ ಕೊಟ್ಟ ಕುತೂಹಲವನ್ನೇ ನೀಡಿದರೆ ಪ್ರೇಕ್ಷಕರು ಉಳಿದುಕೊಳ್ಳುತ್ತಾರೆ. ಇಲ್ಲವಾದಲ್ಲಿ ಕೈಯಲ್ಲಿರುವ ರಿಮೋಟ್‌ನಿಂದ ಚಾನೆಲ್ ಚೇಂಜ್ ಆಗಬಹುದು. ಆದ್ರೆ ಮುದ್ದುಲಕ್ಷ್ಮೀ ಧಾರಾವಾಹಿ ನೋಡುಗರಿಗೆಲ್ಲ ಗೊತ್ತಿತ್ತು. ಅದಕ್ಕೆ ಎಲ್ಲೂ ಬೋರ್ ಹೊಡೆಸದೆ ಸತತ ಐದು ವರ್ಷಗಳ ಕಾಲ ಧಾರಾವಾಹಿಯನ್ನು ಸಕ್ಸಸ್ ರೀತಿಯಲ್ಲಿಯೇ ತಂದಿದ್ದಾರೆ. 2018ರಲ್ಲಿ ಆರಂಭವಾದ 'ಮುದ್ದುಲಕ್ಷ್ಮೀ' ಧಾರಾವಾಹಿ ಸದ್ಯ 'ಮುದ್ದುಮಣಿ'ಗಳಾಗಿ ಇನ್ನು ಪ್ರಸಾರವಾಗುತ್ತಲೇ ಇದೆ. ಅದು ಒಂದಷ್ಟು ಟ್ವಿಸ್ಟ್ ಗಳೊಂದಿಗೆ.

ಅಪಾಯದಲ್ಲಿದ್ದಾರೆ ಮಕ್ಕಳು
ಭೂಮಿ ಮತ್ತು ದೃಷ್ಟಿ ಜೀವನಕ್ಕೆ ಹಳೆಯ ಶತ್ರು ಶಾರ್ವರಿ ಅದ್ಯಾವಾಗ ಎಂಟ್ರಿಯಾದಳೋ ಅಂದಿನಿಂದ ಗ್ರಹಚಾರ ಶುರುವಾಗಿದೆ. ಮುದ್ದುಲಕ್ಷ್ಮೀಯ ಮಕ್ಕಳನ್ನು ಟಾರ್ಗೆಟ್ ಮಾಡಿದ್ದಾಳೆ. ಈಗಾಗಲೇ ಅಣ್ಣ ತಮ್ಮಂದಿರನ್ನು ಅಗಲಿಸಿರುವ ಶಾರ್ವರಿ, ಶ್ರವಣ್ ಜೀವಕ್ಕೆ ಕುತ್ತು ತಂದಿದ್ದಾಳೆ. ಶ್ರವಣ್ ಆಸ್ಪತ್ರೆ ಸೇರಿದ್ರೆ ಆ ಕೊಲೆಯ ಆರೋಪ ಶಿವು ಮೇಲೆ ಬಂದಿದೆ. ಈಗ ಶಿವು ಜೈಲು ಸೇರಿದ್ದಾನೆ. ಶಾರ್ವರಿ ಆಸ್ಪತ್ರೆಗೆ ಬಂದು, ಭೂಮಿಗೆ ಧಮ್ಕಿ ಹಾಕಿದ್ದಾಳೆ. ಭೂಮಿಗೂ ಶಾರ್ವರಿಗೆ ಏನು ಮಾಡಬೇಕು ಎಂಬುದು ಅರ್ಥವಾಗದೆ ಕಂಗಾಲಾಗಿದ್ದಾಳೆ. ಶಿವು ಜೈಲಿಗೆ ಹೋಗುತ್ತಿದ್ದರೆ ತಡೆಯುವುದಕ್ಕೂ ಆಗದೆ ದೃಷ್ಟಿಯೂ ಕಂಗಾಲಾಗಿದ್ದಾಳೆ.

ಅಪ್ಪನ ಬದಲಿಗೆ ಬಂದಿದ್ದು ಯಾರು..?
ಮುದ್ದುಮಣಿಗಳು ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಟ್ವಿಸ್ಟ್ ಕಾಣುತ್ತಿದೆ. ಅಕ್ಕ ತಂಗಿಯರು ಒಂದಾಗಬೇಕೆಂದು ಪ್ರಯತ್ನ ಪಡುತ್ತಿದ್ದರೆ ಮಧ್ಯದಲ್ಲಿ ಜಗಳ ಹತ್ತಿಸುವವರೇ ಹೆಚ್ಚಾಗಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ದೃಷ್ಟಿ ದೇವರ ಮುಂದೆ ಮೊರೆ ಇಟ್ಟಿದ್ದಾಳೆ. ಮುದ್ದುಮಣಿಗಳ ಹೊಸ ಪ್ರೋಮೋ ಬಿಟ್ಟಾಗ ಮಕ್ಕಳ ಕಷ್ಟಕ್ಕೆ ಸ್ಪಂದಿಸುವುದಕ್ಕೆ ತಂದೆ ವಾಪಾಸ್ಸಾಗುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಕಥೆಯಲ್ಲೂ ಟ್ವಿಸ್ಟ್ ಸಿಕ್ಕಿದೆ. ಅಪ್ಪನ ಬದಲಿಗೆ ಬರುತ್ತಿರುವುದು ಗಟ್ಟಿಗಿತ್ತಿ ಮುದ್ದುಲಕ್ಷ್ಮೀ.

'ಮುದ್ದುಲಕ್ಷ್ಮೀ'ಗೆ ಹೆದರುತ್ತಾಳಾ ಶಾರ್ವರಿ?
ಶಾರ್ವರಿಯ ಕಾಟದಿಂದ ಮುದ್ದುಮಣಿಗಳು ಸುಸ್ತಾಗಿ ಹೋಗಿದ್ದಾರೆ. ಎದುರು ನಿಂತು ಸವಾಲು ಹಾಕಿದರು ಶಾರ್ವರಿ ಕುತಂತ್ರದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದಕ್ಕೆ ಮಕ್ಕಳ ಒಳಿತಿಗಾಗಿ ಮುದ್ದುಲಕ್ಷ್ಮೀಯೇ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಮುದ್ದು ಲಕ್ಷ್ಮೀಯ ಎಂಟ್ರಿಯಿಂದ ಶಾರ್ವರಿ ನಡುಗುವುದು ಗ್ಯಾರಂಟಿ. ಮುದ್ದುಲಕ್ಷ್ಮೀಯ ಅಪಘಾತಕ್ಕೂ ಶಾರ್ವರಿಯ ಪಾತ್ರ ಇದೆ. ಅಪಘಾತದಿಂದ ಮುದ್ದುಲಕ್ಷ್ಮೀ ಸತ್ತೆ ಹೋಗಿದ್ದಾಳೆ ಎಂದುಕೊಂಡಿದ್ದೆವು. ಆದ್ರೆ ಕೆಲ ವರ್ಷಗಳ ಬಳಿಕ ಮುದ್ದುಲಕ್ಷ್ಮೀ ಬದುಕಿ ಬರುತ್ತಿರುವುದು ಅತ್ಯಾಶ್ಚರ್ಯವಾಗುತ್ತಿದೆ. ಅಷ್ಟೇ ಅಲ್ಲ ತಂದೆಯೂ ವಾಪಾಸು ಆಗುವ ಸೂಚನೆ ಸಿಕ್ಕಿದೆ. ಇನ್ನೇನಿದ್ದರು ಶತ್ರುಗಳ ಸಂಹಾರ ಮಾಡಿ, ಸುಖ ಸಂಸಾರ ನಡೆಸುವುದು ಮುದ್ದುಲಕ್ಷ್ಮೀ ಕುಟುಂಬದ ಧ್ಯೇಯವಾಗಿದೆ. ಅದಕ್ಕೂ ಮುನ್ನ ಹುಟ್ಟಿಕೊಂಡಿರುವ, ಹುಟ್ಟಿಕೊಳ್ಳುತ್ತಿರುವ ಶತ್ರುಗಳ ಸಂಹಾರ ಮಾಡಬೇಕಿದೆ.