Muddulakshmi : ದೃಷ್ಟಿ ಬಯಸಿದ್ದು, ಅಮ್ಮಮ್ಮ ತೋರಿಸಿದ್ದು ಶಿವುನನ್ನೇ: ಮುಂದೇನಾಯ್ತು?

By ಎಸ್‌ ಸುಮಂತ್

ಕಳೆದ ಕೆಲವು ದಿನಗಳಿಂದ ಮುದ್ದು ಲಕ್ಷ್ಮೀಯ ಮುದ್ದುಮಣಿಗಳು ಧಾರಾವಾಹಿ ನೋಡುತ್ತಿದ್ದವರಿಗೆ ಹೊಟ್ಟೆಯಲ್ಲಿ ಕೆಂಡ ಹಾಕಿದ್ದಂತೆ ಆಗುತ್ತಿತ್ತು. ಯಾಕಂದ್ರೆ ಒಂದಾಗಬೇಕಿದ್ದ ಜೋಡಿ ಯಾವುದೋ ಕಾರಣಕ್ಕೆ ದೂರ ದೂರ ಆಗ್ತಾ ಇತ್ತು.

ಶಿವು ಮತ್ತು ದೃಷ್ಟಿ ಪ್ರೀತಿ ಶ್ರವಣ್ ಹಾಗೂ ಭೂಮಿಗೆ ಗೊತ್ತಿತ್ತು. ಸಾಧ್ಯವಾದಷ್ಟು ಸಹಾಯವನ್ನು ಮಾಡ್ತಾ ಇದ್ರು. ಆದರೆ ಮನೆಯವರೆಲ್ಲಾ ಶ್ರವಣ್ಗೆ ದೃಷ್ಟಿಯನ್ನು ಕೊಡೋದು ಅಂತ ನಿರ್ಧರಿಸಿ ಮದುವೆಯ ತಯಾರಿ ನಡೆಸುತ್ತಿದ್ದರು. ಒಂದು ವಾರದಿಂದ ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ಅಂತ ಅದ್ದೂರಿಯಾಗಿ ನಡೆಯುತ್ತಿತ್ತು. ನೋಡುಗರಿಗೆ ಅಯ್ಯೋ ಇನ್ನೇನು ಪ್ರೇಮಿಗಳು ದೂರ ಆಗಿ ಬಿಡ್ತಾರೋ ಅನ್ನೋ ಸಂಕಟ ಕಾಡುತ್ತಿತ್ತು.

ಶಿವುಗೆ ಕಡೆಗೂ ಒಲಿದು ಬಂದ ದೃಷ್ಟಿ

ಭೂಮಿ ಮತ್ತು ಶ್ರವಣ್ ಕಷ್ಟಪಟ್ಟು ದೃಷ್ಟಿ ಮತ್ತು ಶಿವುನನ್ನು ಒಂದು ಮಾಡೋದಕ್ಕೆ ಟ್ರೈ ಮಾಡಿದ್ರು. ಆದರೆ, ಏನೇನೋ ಆಗಿ ಕಡೆಗೆ ದೃಷ್ಟಿ ಶಿವುನಿಂದ ದೂರ ಆಗೋದಕ್ಕೆ ಡಿಸೈಡ್ ಮಾಡಿದ್ದಳು. ಪಾಲಿಗೆ ಬಂದಿದ್ದು ಪಂಚಾಮೃತ, ಶ್ರವಂತ್‌ನನ್ನೇ ಮದುವೆ ಆಗ್ತೀನಿ ಅಂತ ಕೂತಿದ್ದಳು. ಕಡೆಗೆ ಆಸೆ ಅಂತ ಶ್ರವಣ್ ಕೈನಲ್ಲಿ ಬಳೆ ಕೂಡ ತೊಡಿಸಿಕೊಂಡಿದ್ದಳು. ಆದರೆ, ಭೂಮಿಗೆ ಈ ಇಬ್ಬರು ದೂರ ಆಗೋದು ಇಷ್ಟವೇ ಇರಲಿಲ್ಲ. ಅವರಿಬ್ಬರೂ ಮಾಡಿದ ಕೆಲಸಕ್ಕೆ ಕಡೆಗೂ ನಿಜವಾದ ಪ್ರೀತಿ ಒಂದಾಗುತ್ತಿದೆ. ಅಂದಿನಿಂದ ಮಾಡಿದ ಪ್ರಯತ್ನಕ್ಕೆ ಫಲ ಸಿಗುತ್ತಿದೆ.

Muddulakshmi Muddumani Marriage Written Update March 24th

ಭೂಮಿಯಿಂದ ದೃಷ್ಟಿಗೆ ಸಿಕ್ತು ನಿಜವಾದ ಪ್ರೀತಿ

ಎಲ್ಲಾ ಶಾಸ್ತ್ರ ಮುಗಿದಿತ್ತು. ಇನ್ನೇನಿದ್ರು ದೃಷ್ಟಿ ಮತ್ತು ಶ್ರವಂತ್ ಹಸೆಮಣೆ ಏರಬೇಕಾಗಿತ್ತು. ಅತ್ತ ಭೂಮಿ ಶ್ರವಂತ್‌ನನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ದೃಷ್ಟಿ ಅಂತು ಧೈರ್ಯ ಮಾಡಲ್ಲ ಅಂತ ಗೊತ್ತಾಗಿ, ಭೂಮಿಯೇ ಧೈರ್ಯವಾಗಿ ಶ್ರವಂತ್ ಬಳಿ ತಾಳಿ ಕಟ್ಟಿಸಿಕೊಂಡಿದ್ದಾಳೆ.

ಈ ಘಟನೆ ಶ್ರವಂತ್ ಅಮ್ಮನಿಗೆ ಕೋಪ ತರಿಸಿದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಸೊಸೆ ಅಂತ ಒಪ್ಪಿಕೊಳ್ಳಲ್ಲ ಅಂತ ಹಠ ಮಾಡುತ್ತಿದ್ದಾಳೆ. ಈ ಮಧ್ಯೆ ದೃಷ್ಟಿ ಅಜ್ಜಿಯ ಮಾತನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದಾಳೆ.

ಮೊಮ್ಮಗಳು ಬಯಸಿದ್ದನ್ನೇ ಕೊಟ್ಟರಲ್ಲ ಅಮ್ಮಮ್ಮಾ..!

ದೃಷ್ಟಿಗೆ ಶಿವು ಮೇಲೆ ಪ್ರೀತಿ ಕಡಿಮೆಯಾಗಿಲ್ಲ. ಹಾಗಂತ ಅದನ್ನು ಒಪ್ಪಿಕೊಳ್ಳುವುದಕ್ಕೂ ಹೋಗಿಲ್ಲ. ಆದರೆ ಮದುವೆ ಮುರಿದು ಬಿದ್ದಿದ್ದು, ದೃಷ್ಟಿ ಅಜ್ಜಿಗೆ ಆಘಾತ ತಂದಿದೆ. ಮೊಮ್ಮಗಳನ್ನು ಕರೆದು ನಿನ್ನ ಜೀವನ ಹಿಂಗಾಯ್ತಲ್ಲ ಅಂತ ಕೊರಗುತ್ತಿದ್ದಾರೆ. ನೀನು ಯಾರನ್ನೋ ಪ್ರೀತಿಸುತ್ತಿದ್ದೆ ಅಂದ್ಯಲ್ಲ ಯಾರವನು ಎಂದಾಗ ದೃಷ್ಟಿ ಬಾಯಿಬಿಡಲ್ಲ. ಅದು ಮುಗಿದ ಅಧ್ಯಾಯ ಅಂತಾಳೆ. ಶಿವು ಕೂಡ ಆಗ ಅಜ್ಜಿ ಮುಂದೆಯೇ ಇರ್ತಾನೆ. ಶಿವುನನ್ನು ನೋಡಿದ ಅಜ್ಜಿಗೆ ಇವನೇ ಪರ್ಫೆಕ್ಟ್ ಜೋಡಿ ಅನ್ಸುತ್ತೆ. ಆಗ ನಾನು ತೋರಿಸಿದ ಹುಡುಗನನ್ನು ಮದುವೆಯಾಗ್ತೀಯಾ ಅಂತ ಕೇಳ್ತಾರೆ.

ದೃಷ್ಟಿಗೆ ಗೊಂದಲ, ಶಿವುಗೆ ಆತಂಕ. ಬೇರೆ ಯಾರನ್ನು ಹೇಳ್ತಾರೋ ಅಂತ. ಆದರೆ, ಅಜ್ಜಿ ಅದೇ ಶಿವುನನ್ನು ತೋರಿಸಿ, ಇವನೇ ನಿನ್ನನ್ನು ತುಂಬಾ ಕೇರ್ ಫೂಲ್ ಆಗಿ ನೋಡಿಕೊಳ್ಳೋದಕ್ಕೆ ಸಾಧ್ಯ. ಶಿವುನಾ ಮದುವೆಯಾಗ್ತೀಯಾ ಅಂತಾರೆ. ಅತ್ತ ಶಿವುನನ್ನು ವಿಚಾರಿಸ್ತಾರೆ. ನಿಂಗೆ ಒಪ್ಪಿಗೇನಾ ಅಂತ. ಇಬ್ಬರ ಮುಖದಲ್ಲೂ ಸಂತೋಷ ಅರಳಿ ನಿಲ್ಲುತ್ತೆ. ಮತ್ತೆ ಆ ಪ್ರೀತಿ ಒಂದಾಗುತ್ತಿದೆ. ಅದೇ ಕಲ್ಯಾಣ ಮಂಟಪದಲ್ಲಿ, ಬಯಸಿದ ಜೋಡಿ ಹೊಸ ಜೀವನಕ್ಕೆ ಕಾಲಿಡುತ್ತಿದೆ. ಪ್ರೇಕ್ಷಕರು ಹಾರೈಸೋದಕ್ಕೆ ರೆಡಿಯಾಗಿದ್ದಾರೆ.

More from Filmibeat

English summary
Muddulakshmi muddumani marriage Written Update march 24th. Here is the details about
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X