ಧಾರಾವಾಹಿಗಳಲ್ಲಿ ನಟಿಸೋಕಂತಲೇ ಕೆಲಸ ಬಿಟ್ಟು ಬಂದು ನಟ: ಯಾರಿವರು? ಹಿನ್ನೆಲೆಯೇನು?

By ಅನಿತಾ ಬನಾರಿ

'ಮುದ್ದು ಮಣಿಗಳು' ಧಾರಾವಾಹಿಯ ಮುಂದುವರಿದ ಭಾಗ 'ಓ ಮುದ್ದು ಮನಸೇ' ಮನಸ್ ಪಾತ್ರಧಾರಿಯಾಗಿ ಚರಿತ್ ಬಾಳಪ್ಪ ನಟಿಸುತ್ತಿದ್ದಾರೆ. ಈ ಕಿರುತೆರೆ ನಟ ಮತ್ತೆ ನಟನೆಗೆ ವಾಪಸ್ ಬರುತ್ತಿರುವುದು ಕಿರುತೆರೆ ಪ್ರಿಯರಿಗೆ ಖುಷಿ ತಂದಿದೆ.

ಹೌದು, 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ಮುಖ್ಯಪಾತ್ರಧಾರಿ ಧೃವಂತ್ ಆಗಿ ಕಾಣಿಸಿಕೊಂಡಿದ್ದ ಚರಿತ್ ಬಾಳಪ್ಪ ಕೊರೊನಾ ಕಾರಣದಿಂದ ಧಾರಾವಾಹಿಗೆ ವಿದಾಯ ಹೇಳಿದರು.

Muddulakshmi Serial actor Charith Balappa said goodbye to work for acting

ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'w/o ಕೃಷ್ಣಮೂರ್ತಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಚರಿತ್ ಬಾಳಪ್ಪ ಇದೀಗ ಮನಸ್ ಆಗಿ ಮತ್ತೆ ವೀಕ್ಷಕರನ್ನು ರಂಜಿಸಲು ಬಂದಿದ್ದಾರೆ. ಈಗಾಗಲೇ ನಟಿಸಿರುವ ಎಪಿಸೋಡ್‌ಗಳು ಪ್ರಸಾರವಾಗುತ್ತಿದ್ದು ಕಿರುತೆರೆ ವೀಕ್ಷಕರು ಅವರ ನಟನೆಗೆ ಫಿದಾ ಆಗಿದ್ದಾರೆ.

ಕೆಲಸ ಮಾಡುವುದು ಅನಿವಾರ್ಯವಾಗಿತ್ತು

ಅಂದ ಹಾಗೇ ಚರಿತ್ ಅವರಿಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಬಹಳಷ್ಟು ಆಸಕ್ತಿ ಇತ್ತು. ಅವರ ಮನೆಯಲ್ಲಿ ಯಾರೂ ನಟನಾ ಹಿನ್ನೆಲೆಯಿಂದ ಬಂದವರಲ್ಲ. ಡ್ಯಾನ್ಸ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಗ ಸ್ಟೇಜ್‌ನಲ್ಲಿ ಪರ್ಫಾರ್ಮ್ ಮಾಡುವುದು ನಟಿಸುವುದು ಇವೆಲ್ಲ ಚರಿತ್ ಅವರ ನೆಚ್ಚಿನ ಆಸಕ್ತಿಕರ ವಿಚಾರಗಳಾಗಿತ್ತು. ಆದರೆ, ಮಧ್ಯಮ ವರ್ಗದ ಕುಟುಂಬದವನಾದ ಚರಿತ್ ನಟನೆಯನ್ನೇ ವೃತ್ತಿಯಾಗಿ ಮೆಚ್ಚಿಕೊಳ್ಳುವುದು ಅವರ ತಂದೆ ತಾಯಿಗೆ ಅಷ್ಟು ಇಷ್ಟವಿರಲಿಲ್ಲ. ಹಾಗಾಗಿ ಕೆಲಸವನ್ನು ಹುಡುಕಿಕೊಂಡು ಅದರ ಜೊತೆಜೊತೆಗೆ ನಟನೆಯನ್ನು ಮಾಡುತ್ತಿದ್ದರು.

Muddulakshmi Serial actor Charith Balappa said goodbye to work for acting

ಪಾತ್ರಕ್ಕಾಗಿ ಸಾಕಷ್ಟು ತಯಾರಿ

ಕೆಲಸ ಮತ್ತು ನಟನೆ ಎರಡನ್ನು ಬ್ಯಾಲೆನ್ಸ್ ಮಾಡುವ ಈ ಸರ್ಕಸಿನಲ್ಲಿ ಈಗ ನಟನೆಯನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ ನಟ ಚರಿತ್ ಬಾಳಪ್ಪ. ಚರಿತ್'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು . ಧೃವಂತ್ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡಾ ಅವರು ಮಾಡಿಕೊಂಡಿದ್ದರು. ತೆಲುಗು ಸಿನಿಮಾ ಅರ್ಜುನ್ ರೆಡ್ಡಿ ಪಾತ್ರವನ್ನು ಹತ್ತಿರದಿಂದ ನೋಡಲು ಧಾರಾವಾಹಿ ತಂಡ ಸಲಹೆ ನೀಡಿತ್ತು.

Muddulakshmi Serial actor Charith Balappa said goodbye to work for acting

ಭವಿಷ್ಯದ ಬಗ್ಗೆ ಚಿಂತಯಿಲ್ಲ

ಸದ್ಯ ಕಿರುತೆರೆಯಲ್ಲಿ ಮನಸ್ ಆಗಿ ಮೋಡಿ ಮಾಡುತ್ತಿರುವ ಚರಿತ್ ಬಾಳಪ್ಪ ಯಾವತ್ತಿಗೂ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸಿದವರಲ್ಲ. 'ಗೋ ವಿತ್ ದ ಫ್ಲೊ' ಎಂಬ ಮಾತನ್ನು ಚೆನ್ನಾಗಿ ಫಾಲೋ ಮಾಡುವ ಅವರು ಈ ಕ್ಷಣಕ್ಕೆ ಏನು ಸಿಗುತ್ತದೆ ಅದನ್ನು ಅದ್ಭುತವಾಗಿ ಉಪಯೋಗಿಸುವ ಮಾರ್ಗಗಳನ್ನು ಕಂಡುಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ಅದೇ ಕಾರಣದಿಂದ ಅವರಿಗೆ ಭವಿಷ್ಯದ ಚಿಂತೆ ಏನು ಇಲ್ಲ.

More from Filmibeat

English summary
Muddulakshmi Serial actor Charith Balappa said goodbye to work for acting, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X