ಮೈಸೂರಿನ ಬೆಡಗಿ 'ಮುದ್ದುಲಕ್ಷ್ಮಿ' ನಟಿ 'ಅಶ್ವಿನಿ' ಬಿಂದಾಸ್ ಹುಡ್ಗಿ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸದ್ಯ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಮುದ್ದುಲಕ್ಷ್ಮಿ ಒಂದು. ಈ ಧಾರಾವಾಹಿ 1191 ಎಪಿಸೋಡ್ ಗಳು ಪ್ರಸಾರವಾದ ಮೇಲೆ ಹೊಸ ಅಧ್ಯಾಯ ಆರಂಭವಾಗಿದ್ದು, ಕಳೆದ 5 ತಿಂಗಳಿಂದ ಮೂಡಿ ಬರುತ್ತಿದೆ. ಇನ್ನು ಮುದ್ದುಲಕ್ಷ್ಮಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಶ್ವಿನಿ ಅವರ ಬಣ್ಣದ ಜರ್ನಿ ಹೇಗಿದೆ ಎನ್ನುವುದನ್ನು ಮುಂದೆ ಓದಿ.
ನಟಿ ಅಶ್ವಿನಿ ಕಿರುತೆರೆಗೆ ಎಂಟ್ರಿಕೊಟ್ಟಿದ್ದು ನಿರೂಪಕಿಯಾಗಿ. ಉದಯ ಮ್ಯೂಸಿಕ್‌ನಲ್ಲಿ ಆಂಕರ್ ಆಗಿ ಪಾದಾರ್ಪಣೆ ಮಾಡಿದ ಒಂದು ವರ್ಷಕ್ಕೂ ಹೆಚ್ಚು ಅಧಿಕ ಕಾಲ ಕಾರ್ಯ ನಿರ್ವಹಿಸಿದರು. ನಂತರ ಧಾರಾವಾಹಿಗಳಲ್ಲಿ ನಟಿಸಲು ಪ್ರಾರಂಭಿಸಿದರು. ಉದಯ ಮ್ಯೂಸಿಕ್‌ನಲ್ಲಿ ಕಾರ್ಯ ನಿರ್ವಹಿಸುವಾಗಲೇ ಸೀರಿಯಲ್ ನಲ್ಲಿ ನಟಿಸುವ ಅವಕಾಶ ಒದಗಿ ಬಂತು.
ನಿರೂಪಣೆ ಹಾಗೂ ನಟನೆ ಎರಡನ್ನೂ ಇಷ್ಟಪಡುವ ಅಶ್ವಿನಿ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡರು. ಅಶ್ವಿನಿ ಈ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅನುರಾಗ ಸಂಗಮ ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಅಶ್ವಿನಿ ನಟನೆಯನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.
ಮೈಸೂರಿನ ಬೆಡಗಿ ಅಶ್ವಿನಿ!
ಅಶ್ವಿನಿ ಮೂಲತಃ ಮೈಸೂರಿನವರು. ಡಿಗ್ರಿ ಓದಿ ಮುಗಿಸುತ್ತಿದ್ದಂತೆಯೇ ಆಂಕರ್ ಆಗಿ ಉದಯ ಮ್ಯೂಸಿಕ್ ಗೆ ಎಂಟ್ರಿಕೊಟ್ಟರು. ಕಾಲೇಜಿನಲ್ಲಿ ಓದುವಾಗ ಅಶ್ವಿನಿ ರಂಗಭೂಮಿಯಲ್ಲಿ ಭಾಗವಹಿಸುತ್ತಿದ್ದರು. ಹೀಗಾಗಿ ಅಶ್ವಿನಿ ಅವರಿಗೆ ನಟನೆಯ ಮೇಲೆ ಒಲವಿತ್ತು. ಇದು ಇವರಿಗೆ ಕ್ಯಾಮರಾ ಫೇಸ್ ಮಾಡಲು ಸಹಾಯ ಮಾಡಿತ್ತು. ಅನುರಾಗ ಸಂಗಮ ಧಾರಾವಾಹಿಯಲ್ಲಿ ಛಾಯಾ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಕುಲವಧು ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಈ ಧಾರಾವಾಹಿಯಲ್ಲಿ ಶಶಿಕಲಾ ಎಂಬ ಪಾತ್ರದಲ್ಲಿ ನಟಿಸಿದ್ದು, ನೆಗೆಟಿವ್ ರೋಲ್ ನಲ್ಲಿ. ಈ ಪಾತ್ರದ ಮೂಲಕ ಅಶ್ವಿನಿ ಅವರಿಗೆ ಒಳ್ಳೆಯ ಬ್ರೇಕ್ ತಂದುಕೊಟ್ಟಿತು.
ಗಿರಿಜಾ ಕಲ್ಯಾಣದಿಂದ ಮುದ್ದುಲಕ್ಷ್ಮಿಯಾದ ಬೆಡಗಿ!
ಕುಲವಧು ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಅಶ್ವಿನಿಗೆ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂತು. ಗಿರಿಜಾ ಕಲ್ಯಾಣ ಸೀರಿಯಲ್ ಬಳಿಕ ನಾಯಕಿಯಾಗಿ ಬಡ್ತಿ ಪಡೆದರು. ಮುದ್ದುಲಕ್ಷ್ಮಿ ಧಾರಾವಾಹಿಗೆ ಅಶ್ವಿನಿ ಆಯ್ಕೆ ಅದ್ರು. ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಅವರ ಲುಕ್ ಸಂಪೂರ್ಣವಾಗಿ ಬದಲಾಗಿತ್ತು. ಸಾಮಾನ್ಯವಾಗಿ ನಾಯಕಿ ಎಂದರೆ ಸುಂದರವಾಗಿ, ತೆಳ್ಳಗೆ, ಬೆಳ್ಳಗೆ ಹಾಲಿನ ಬಣ್ಣದಲ್ಲಿ ಇರಬೇಕು ಎಂದು ಬಯಸುತ್ತಾರೆ. ಆದರೆ ಇದರಲ್ಲಿ ಕೃಷ್ಣ ಸುಂದರಿ ರೂಪದಲ್ಲಿ ಕಾಣಿಸಿಕೊಂಡವರೇ ಅಶ್ವಿನಿ.
ಧಾರಾವಾಹಿಗಾಗಿ ಕೃಷ್ಣ ಸುಂದರಿಯಾದ ಅಶ್ವಿನಿ!
ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕಿ ಕಪ್ಪು ವರ್ಣದವಳು. ಕಪ್ಪುವರ್ಣದ ಹುಡುಗಿಯ ಮನಸ್ಥಿತಿ, ಸಮಾಜದಲ್ಲಿ ಆಕೆಯ ಬಗ್ಗೆ ತಿಳಿಸಿಕೊಡುವುದೇ ಈ ಸೀರಿಯಲ್ ಕಥೆ. ಪ್ರೇಕ್ಷಕರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಂಡರು. ಬೆಳ್ಳಗಿರುವ ಅಶ್ವಿನಿ ಅವರಿಗೆ ಕಪ್ಪು ಮೇಕಪ್ ಮಾಡಿ ಶೂಟ್ ಮಾಡಲಾಗಿತ್ತು. ಮುದ್ದುಲಕ್ಷ್ಮಿ ಧಾರಾವಾಹಿಯೇ ಅಶ್ವಿನಿ ಅವರ ಬದುಕಾಗಿತ್ತು. ಸತತ ನಾಲ್ಕು ವರ್ಷಗಳ ಕಾಲ ಈ ಧಾರಾವಾಹಿ ಪ್ರಾಸಾರವಾಗಿತ್ತು.
ಒಳ್ಳೆ ಪಾತ್ರದಲ್ಲಿ ನಟಿಸುವ ಆಸೆ!
ಇನ್ನು ಈ ಬಗ್ಗೆ ಹಲವು ಬಾರಿ ಮಾತನಾಡಿರುವ ಅಶ್ವಿನಿ, ಹೀರೋಯಿನ್ ಆಗಿ ದೊಡ್ಡ ಜನಪ್ರಿಯತೆ ಪಡೆಯುವ ಆಸೆ ಇಲ್ಲ. ನಟನೆ ಮತ್ತು ನಿರೂಪಣೆ ಅಶ್ವಿನಿ ಅವರಿಗೆ ಖುಷಿ ಕೊಡುವ ವಿಷಯಗಳಂತೆ. ಮುಂದೆ ಸಿನಿಮಾ ಅವಕಾಶಗಳು ಬಂದರೆ ಒಪ್ಪಿಕೊಳ್ಳುತ್ತಾರಂತೆ. ಆದರೆ ಅವು ಮುದ್ದುಲಕ್ಷ್ಮಿ ರೀತಿಯ ವಿಭಿನ್ನ ಪಾತ್ರಗಳು ಆಗಿರಬೇಕು ಎಂದು ಹೇಳುತ್ತಾರೆ. ಸದ್ಯ ಆಗಾಗ ಫೋಟೋ ಶೂಟ್ ಮಾಡಿಸುವ ಅಶ್ವಿನಿ ಅವರು ಫೋಟೋಗಳನ್ನು ಸಾಮಾಜಿಕಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.


Click it and Unblock the Notifications











