Don't Miss!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Technology
ಈ ಅತ್ಯುತ್ತಮ ಸ್ಮಾರ್ಟ್ಫೋನ್ಗಳು 15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮುದ್ದುಲಕ್ಷ್ಮಿ' ಖ್ಯಾತಿಯ ಅಶ್ವಿನಿ ಹೊಸ ಅವತಾರದಲ್ಲಿ ಕಿರುತೆರೆಗೆ ಮತ್ತೆ ಎಂಟ್ರಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಮುದ್ದುಲಕ್ಷ್ಮಿ'ಯೂ ಒಂದು. ಯಶಸ್ವಿ ಸಾವಿರ ಸಂಚಿಕೆ ಪೂರೈಸಿರುವ 'ಮುದ್ದುಲಕ್ಷಿ' ಧಾರಾವಾಹಿಯಲ್ಲಿ ಈಗಾಗಲೇ ಹೊಸ ಅಧ್ಯಾಯ ಶುರುವಾಗಿದೆ. 'ಮುದ್ದುಮಣಿಗಳು' ಎಂಬ ಹೆಸರಿನಲ್ಲಿ ಮುದ್ದು ಮಣಿಗಳ ಆಗಮನವಾಗಿದ್ದು ಹೊಸ ಅಧ್ಯಾಯ ಆರಂಭವಾಗಿ ಮುನ್ನೂರು ಸಂಚಿಕೆ ಪೂರೈಸಿದೆ.
ಪ್ರತಿದಿನವೂ ವಿನೂತನ ಟ್ವಿಸ್ಟ್ ಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಸದ್ಯ ಕುತೂಹಲದ ಘಟ್ಟ ತಲುಪಿದೆ. ಮುದ್ದುಮಣಿಗಳ ಸಂಕಷ್ಟಕ್ಕೆ ಹಾಗೂ ಮರಳಿ ಬಂದಿರುವ ಕುತಂತ್ರಿ ಶಾರ್ವರಿಯನ್ನು ಮಟ್ಟ ಹಾಕಲು 'ಮುದ್ದುಲಕ್ಷ್ಮಿ' ಮರಳಿ ಬರಲಿದ್ದಾಳೆ. ಆದರೆ, ಅದು ಹೊಸ ರೂಪದಲ್ಲಿ.ಕುತಂತ್ರಿ ಶಾರ್ವರಿಗೆ ಬುದ್ಧಿ ಕಲಿಸಿ, ಮಕ್ಕಳನ್ನು ಕಾಪಾಡಲು ಬರುತ್ತಿದ್ದಾಳೆ 'ಮುದ್ದುಲಕ್ಷ್ಮಿ'. ಆ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ ಅಶ್ವಿನಿ.
'ಮನೆದೇವ್ರು',
'ಪಾರು'
ಖ್ಯಾತಿ
ವರ್ಷಿತಾ
ಮತ್ತೆ
ಕಿರುತೆರೆಗೆ
ಮರಳಲು
ರೆಡಿ!

'ಅನುರಾಗ ಸಂಗಮ' ಮೂಲಕ ನಟನೆಗೆ ಎಂಟ್ರಿ
ರಾಜ್ ಮ್ಯೂಸಿಕ್ ಚಾನೆಲ್ ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅಶ್ವಿನಿ ನಂತರ ಮುಖ ಮಾಡಿದ್ದು ನಟನೆಯತ್ತ. 'ಅನುರಾಗ ಸಂಗಮ' ಧಾರಾವಾಹಿಯಲ್ಲಿ ಛಾಯಾ ಪಾತ್ರಕ್ಕೆ ಜೀವ ತುಂಬುವ ಮೂಲಕ ನಟನೆಗೆ ಕಾಲಿಟ್ಟ ಅಶ್ವಿನಿ ಒಂದು ವರ್ಷಗಳ ಕಾಲ ಛಾಯಾ ಪಾತ್ರದ ಮೂಲಕ ಮನ ಸೆಳೆದರು.
'ಮರಳಿ
ಮನಸಾಗಿದೆ'
ಎಂದು
ಕಿರುತೆರೆಯಲ್ಲಿ
ಮೋಡಿ
ಮಾಡಿದ
ಸಹಜ
ಸುಂದರಿ
ಶಿಲ್ಪಾ
ಶೆಟ್ಟಿ

'ಕುಲವಧು' ಧಾರಾವಾಹಿಯಲ್ಲಿ ಕಳನಾಯಕಿ
'ಅನುರಾಗ ಸಂಗಮ' ಧಾರಾವಾಹಿಯ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ಖಳನಾಯಕಿ ಶಶಿಕಲಾ ನಟಿಸಿದ್ದ ಅಶ್ವಿನಿ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದರು. ತದ ನಂತರ ಪೌರಾಣಿಕ ಧಾರಾವಾಹಿ 'ಗಿರಿಜಾ ಕಲ್ಯಾಣ'ದಲ್ಲಿ ಅಭಿನಯಿಸಿದರು.

ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ 4 ವರ್ಷ ನಟನೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ನಟಿಸಿದ ಈಕೆ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದರು. 'ಮುದ್ದುಲಕ್ಷ್ಮಿ' ಧಾರಾವಾಹಿ ಮುಕ್ತಾಯವಾದಾಗ ಕೊನೆಯ ಸಂಚಿಕೆಯ ಶೂಟಿಂಗ್‌ನ ತುಣುಕನ್ನು ಅಶ್ವಿನಿ ಹಂಚಿಕೊಂಡಿದ್ದರು.

ಅಶ್ವಿನಿ ಬದುಕಿನ ಭಾಗ 'ಮುದ್ದುಲಕ್ಷ್ಮಿ'
"ಮುದ್ದುಲಕ್ಷ್ಮಿ ಧಾರಾವಾಹಿಯು ಹಾಗೂ ಲಕ್ಷ್ಮಿ ಪಾತ್ರವು ನನ್ನ ಜೀವನದ ಬಹು ದೊಡ್ಡ ಭಾಗವಾಗಿದೆ ಎನ್ನಬಹುದು. ಮುಖ್ಯವಾದ ಸಂಗತಿಯೆಂದರೆ ಈ ಪಾತ್ರವು ನನ್ನನ್ನು ತುಂಬಾ ಗಟ್ಟಿಗೊಳಿಸಿದೆ. ಜೊತೆಗೆ ಆತ್ಮವಿಶ್ವಾಸವನ್ನು ಕೂಡಾ ಇದು ಹೆಚ್ಚಿಸಿದೆ. ನಾಲ್ಕು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ ಮುದ್ದುಲಕ್ಷ್ಮಿ ಇದೀಗ ಮುಕ್ತಾಯದ ಹಂತ ತಲುಪಿದೆ. ಒಂದು ಕಥೆಯೊಂದರಲ್ಲಿ ಜೀವಿಸಿದ ಸಾರ್ಥಕತೆ ಮನಸ್ಸಿನಲ್ಲಿದೆ" ಎಂದು ಈ ಹಿಂದೆ ಹೇಳಿಕೊಂಡಿದ್ದರು ಅಶ್ವಿನಿ.

ತೆಲುಗು ಕಿರುತೆರೆಯಲ್ಲೂ ಮೋಡಿ
ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲೂ ನಟನಾ ಛಾಪನ್ನು ಪಸರಿಸಿರುವ ಪ್ರತಿಭೆ ಅಶ್ವಿನಿ. ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ "ಮಟ್ಟಿಗಾಜಲು" ವಿನಲ್ಲಿ ಚಿಟ್ಟಿಯಾಗಿ ಅಭಿನಯಿಸಿರುವ ಅಶ್ವಿನಿ ಸದ್ಯ ಕನ್ನಡ ಹಾಗೂ ತೆಲುಗು ಕಿರುತೆರೆ ಎರಡನ್ನೂ ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ.