For Quick Alerts
  ALLOW NOTIFICATIONS  
  For Daily Alerts

  ಮುದ್ದುಮಣಿಗಳು: ಅಹಲ್ಯಾ ಬದಲಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ, ಮುಂದೇನು?

  By ಎಸ್ ಸುಮಂತ್
  |

  ತನ್ನ ತಾಯಿ ಮುದ್ದುಲಕ್ಷ್ಮೀ ಸಾವಿಗೆ ತನ್ನ ಅಕ್ಕ ದೃಷ್ಟಿಯೇ ಕಾರಣ ಎಂದು ಭೂಮಿ ನಂಬಿದ್ದಳು. ಎಷ್ಟೋ ವರ್ಷ ಈ ಇಬ್ಬರು ಸ್ವಂತ ಅಕ್ಕ ತಂಗಿಯರು ಎಂಬುದನ್ನು ಅರಿಯದೆಯೇ ಬದುಕಿದ್ದರು. ವಿಷಯ ತಿಳಿದ ಮೇಲೆ ದ್ವೇಷ, ಮುನಿಸೇ ಹೆಚ್ಚಾಗಿತ್ತು. ಹಾಗೋ ಹೀಗೋ ಎಲ್ಲಾ ಕತ್ತಲೆಯೂ ಸರಿದು ಈಗ ಅಕ್ಕ ತಂಗಿಯರು ಒಂದಾಗಿದ್ದಾರೆ.

  ಮುದ್ದು ಲಕ್ಷ್ಮೀ ಸಾವಿಗೆ ದೃಷ್ಟಿ ಕಾರಣವಲ್ಲ ಎಂಬುದನ್ನು ಅಂದಿನ ಘಟನೆಯಲ್ಲಿ ಬದುಕುಳಿದವರೇ ಬಂದು ತಿಳಿಸಿದ್ದಾರೆ. ಅದಾದ ಮೇಲೆ ಭೂಮಿ ಎಲ್ಲವನ್ನೂ ಮರೆತಿದ್ದಾಳೆ.

  ಮಾಲಿನಿ ಮನಸ್ಸಲ್ಲಿ ಅಖಿಲ್.. ರಾಹುಲ್ ಮನಸ್ಸಲ್ಲಿ ಹೂವಿ.. ಏನಾಗುತ್ತೆ ಚಕ್ರವರ್ತಿ ಸಂಸಾರ..!ಮಾಲಿನಿ ಮನಸ್ಸಲ್ಲಿ ಅಖಿಲ್.. ರಾಹುಲ್ ಮನಸ್ಸಲ್ಲಿ ಹೂವಿ.. ಏನಾಗುತ್ತೆ ಚಕ್ರವರ್ತಿ ಸಂಸಾರ..!

  ಆದರೆ, ಇಲ್ಲಿ ಮತ್ತೆ ಮತ್ತೆ ಶತೃತ್ವ ಮೂಡುವಂತೆ ಮಾಡುತ್ತಿರುವುದು ಅಹಲ್ಯಾ ದೇವಿ. ಇಬ್ಬರು ಅಕ್ಕ ತಂಗಿಯರು ಒಂದಾಗದಂತೆ ಉಳಿ ಹಿಂಡುತ್ತಲೇ ಬಂದಿದ್ದಾಳೆ. ಇದೆಲ್ಲವನ್ನು ಮೀರಿದಂತೆ ಶರಣ್ ಹಾಗೂ ಶಿವು ಬ್ಯಾಲೆನ್ಸ್ ಮಾಡುತ್ತಾ, ಅಕ್ಕ ತಂಗಿಯರನ್ನು ಒಂದು ಮಾಡಿದ್ದಾರೆ. ಆದರೂ ಅಹಲ್ಯಾ ಇದೇ ನೆಪದಲ್ಲಿ ದೃಷ್ಟಿಯ ಜೀವ ತೆಗೆಯಲು ಹೊರಟಿದ್ದಾಳೆ.

  ಅಕ್ಕ-ತಂಗಿಯ ಬಾಂಧವ್ಯಕ್ಕೆ ಕೊನೆ ಎಲ್ಲಿ?

  ಅಕ್ಕ-ತಂಗಿಯ ಬಾಂಧವ್ಯಕ್ಕೆ ಕೊನೆ ಎಲ್ಲಿ?

  ದೃಷ್ಟಿಗೆ ಭೂಮಿ ಎಂದರೆ ಪಂಚಪ್ರಾಣ. ಆದರೆ, ಅಹಲ್ಯಾ ನಡುವೆ ಎಲ್ಲವನ್ನು ದೂರ ಮಾಡಿದ್ದಳು. ಭೂಮಿ ತಲೆಯಲ್ಲಿ ನಿನ್ನ ತಾಯಿ ಸಾವಿಗೆ ಇವಳೇ ಕಾರಣ ಅಂತ ಹೇಳಿ ಅಕ್ಕನ ಮೇಲೆ ದ್ವೇಷ ಹುಟ್ಟುವಂತೆ ಮಾಡಿದ್ದಳು. ಆದರೆ ಸತ್ಯ ಯಾವಾಗ ಗೊತ್ತಾಯಿತೋ ಭೂಮಿ ಬದಲಾದಳು. ದೃಷ್ಟಿ ತೋರುತ್ತಿದ್ದ ಪ್ರೀತಿಗೆ ಭೂಮಿ ಕೂಡ ಆಗಾಗ ಬದಲಾಗುವ ಯೋಚನೆ ಮಾಡಿದ್ದಳು. ತನ್ನ ತಾಯಿಯ ಒಡವೆ, ಸೀರೆಯನ್ನೆಲ್ಲಾ ಹಾಕಿಕೊಂಡು ಥೇಟ್ ಮುದ್ದುಲಕ್ಷ್ಮೀಯಂತೆ ಕಂಡೊಡನೆ ಎಲ್ಲಾ ನೋವನ್ನು ಮರೆತು ಬಿಟ್ಟಳು. ಅದರಲ್ಲೂ ತಾಯಿಯ ಸಾವಿಗೆ ದೃಷ್ಟಿ ಕಾರಣವಲ್ಲ ಎಂದು ಗೊತ್ತಾದ ಮೇಲಂತೂ ಅಕ್ಕನನ್ನು ಮನಸ್ಸಾರೆ ಒಪ್ಪಿದ್ದಾಳೆ.

  ಆಸ್ತಿಗಾಗಿ ಕಾಲು ಕರೆದು ಅಹಲ್ಯಾ ಜಗಳ

  ಆಸ್ತಿಗಾಗಿ ಕಾಲು ಕರೆದು ಅಹಲ್ಯಾ ಜಗಳ

  ಅಕ್ಕ ತಂಗಿಯರು ಯಾವತ್ತೂ ಒಂದಾಗಬಾರದು ಎಂದು ಅಹಲ್ಯಾ ಮಾಡಿದ ಫ್ಲ್ಯಾನ್ ಫ್ಲಾಪ್ ಆಗಿದೆ. ಭೂಮಿಯನ್ನು ತುಂಬಾ ಪ್ರೀತಿಸುವುದಾಗಿ ಮಾಡಿದ ನಾಟಕದಿಂದ ಏನು ಪ್ರಯೋಜನವಾಗಿಲ್ಲ. ಭೂಮಿ ಆಸ್ತಿಯನ್ನು ಹೇಗಾದರೂ ಮಾಡಿ ದೋಚಲೇ ಬೇಕೆಂದು ಪ್ಲ್ಯಾನ್ ಮಾಡಿದ್ದ ಅಹಲ್ಯಾಗೆ ಈಗ ಬಾಲ ಸುಟ್ಟ ಬೆಕ್ಕಿನ ಸ್ಥಿತಿಯಾಗಿದೆ. ಇದರಿಂದ ಕೋಪಗೊಳ್ಳುತ್ತಿರುವ ಅಹಲ್ಯಾ ಮಾತಿಗೆ ಮುಂಚೆ ದೃಷ್ಟಿಯ ಜೊತೆಗೆ ಜಗಳಕ್ಕೆ ಹೋಗುತ್ತಿದ್ದಾಳೆ.

  ಭೂಮಿಯೇ ಮನೆ ಮಂದಿಗೆ ದೇವಿ

  ಭೂಮಿಯೇ ಮನೆ ಮಂದಿಗೆ ದೇವಿ

  ಇನ್ನು ಮನೆಯಲ್ಲಿ ನಾಟಕದ ಕಂಪನಿ ಶುರುವಾಗಿದೆ. ಮನೆ ಮಂದಿಗೆಲ್ಲಾ ಒಪ್ಪುವಂತ ಪಾತ್ರ ಕೊಟ್ಟು ಶಿವು ನಾಟಕ ಶುರು ಮಾಡಿದ್ದಾನೆ. ಭೂಮಿ ದೇವಿಯಾದರೆ ದೃಷ್ಟಿ ಅವಳ ಮುಂದೆ ಬೇಡಿಕೊಳ್ಳುವ ಭಕ್ತೆ. ಇನ್ನು ಅಹಲ್ಯಾಗೆ ತಕ್ಕನಾದ ಪಾತ್ರವನ್ನೇ ಕೊಟ್ಟಿದ್ದಾನೆ ರಾಕ್ಷಸಿ. ಶರಣ್ ಅಮ್ಮನ ಪಕ್ಕ ಕುಳಿತಿದ್ದಾಗ, ಆ ರಾಕ್ಷಸಿ ಪಕ್ಕ ಯಾಕೆ ಕುಳಿತಿದ್ದೀಯಾ. ಈ ಕಡೆ ಬಾ ಎಂದು ಒಂದಷ್ಟು ಉರಿಸಿದ್ದಾನೆ.

  ದೃಷ್ಟಿ ಬೆನ್ನಿಗೆ ಹೊಡೆದ ಅಹಲ್ಯಾ

  ದೃಷ್ಟಿ ಬೆನ್ನಿಗೆ ಹೊಡೆದ ಅಹಲ್ಯಾ

  ಇನ್ನು ನಾಟಕ ಮಾಡುವಾಗ ಎಲ್ಲರೂ ಪ್ರಾಕ್ಟೀಸ್ ಮಾಡುತ್ತಿದ್ದರು. ಎಲ್ಲರ ಪಾತ್ರಗಳ ಪ್ರಾಕ್ಟೀಸ್ ಕೊನೆಯ ಹಂತದಲ್ಲಿ ರಾಕ್ಷಸಿಯ ಪ್ರಾಕ್ಟೀಸ್ ಬಂತು. ಅಹಲ್ಯಾ, ದೃಷ್ಟಿಗೆ ಕತ್ತಿಯಿಂದ ಚುಚ್ಚುವುದು. ಆ ವೇಳೆ ಕತ್ತಿ ಇರಲಿಲ್ಲ. ಕ್ರಿಕೆಟ್ ಆಡುವ ಬ್ಯಾಟ್ ಅನ್ನೇ ತೆಗೆದುಕೊಂಡು ನಿಧಾನವಾಗಿ ಮುಟ್ಟಿಸಲು ಶಿವು ಹೇಳಿಕೊಟ್ಟಿದ್ದ. ಆದರೆ ಅಹಲ್ಯಾಗೆ ಮೊದಲೆ ದೃಷ್ಟಿ ಕಂಡರೆ ಕೆಂಡದಂತಹ ಕೋಪ, ಬಿಡುತ್ತಾಳಾ. ಬ್ಯಾಟ್‌ನಲ್ಲಿಯೇ ಜೋರಾಗಿ ಹೊಡೆದಿದ್ದಾಳೆ. ಅಹಲ್ಯಾ ಕೊಟ್ಟ ಏಟಿಗೆ ದೃಷ್ಟಿ ಸ್ವಲ್ಪ ದೂರ ಹೋಗಿ ಬಿದ್ದಿದ್ದಾಳೆ. ಭೂಮಿ ಇದನ್ನು ನೋಡಿ ಶಾಕ್ ಆಗಿದ್ದಾಳೆ. ಅತ್ತೆಯ ವಿರುದ್ಧ ತಿರುಗಿ ಬೀಳುತ್ತಾಳಾ ಅಂತ ಕಿರುತೆರೆ ವೀಕ್ಷಕರು ಎದುರು ನೋಡುತ್ತಿದ್ದಾರೆ.

  ಬೆಟ್ಟದ ಹೂ: ವಾವ್.. ಹೂವಿಯ ಒಂದೇ ಮಾತಿಗೆ ಮಂದ್ರಾ ಧ್ವನಿ ಅಡಗಿ ಹೋಯ್ತು..! ಬೆಟ್ಟದ ಹೂ: ವಾವ್.. ಹೂವಿಯ ಒಂದೇ ಮಾತಿಗೆ ಮಂದ್ರಾ ಧ್ವನಿ ಅಡಗಿ ಹೋಯ್ತು..!

  English summary
  Muddumanigalu Serial October 6th Episode Written Update. Here is the details.
  Thursday, October 6, 2022, 19:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X