ಮುದ್ದುಮಣಿಗಳು: ಅಹಲ್ಯಾ ಕುತಂತ್ರ ಭೂಮಿಗೆ ಗೊತ್ತಾಯ್ತಾ? ಅಕ್ಕ ತಂಗಿಯರು ಒಂದಾಗುವ ಸೂಚನೆ ಸಿಗ್ತಿದೆ!

By ಎಸ್ ಸುಮಂತ್

ಮುದ್ದುಮಣಿಗಳನ್ನು ಬೇರೆ ಮಾಡುವುದಕ್ಕೆ ಅಹಲ್ಯಾ ಟೊಂಕ ಕಟ್ಟಿ ನಿಂತಿದ್ದಾಳೆ. ಅದಕ್ಕೆ ಫಲವು ಸಿಕ್ಕಿತ್ತು. ಒಂದೇ ಮನೆಯಲ್ಲು ಎರಡು ಬಾಗಿಲು ಮಾಡಿದ್ದಾಳೆ. ಎರಡೆರಡು ಕಡೆ ಅಡುಗೆ, ನಡೆದಾಡುವ ದಾರಿಯೂ ಎರಡು ಕಡೆ, ಆ ಬಾರ್ಡರ್ ನಿಂದು ಈ ಬಾರ್ಡರ್ ನಂದು. ನಾನು ಆ ಕಡೆ ಬರಲ್ಲ, ನೀವೂ ಈ ಕಡೆ ಬರಬೇಡಿ ಎಂದು ಅಕ್ಕ ತಂಗಿಯರೇ ಆದೇಶ ಹೊರಡಿಸಿಕೊಂಡಿದ್ದಾರೆ. ಇದು ಸಹಲ್ಯಾ ದೇವಿಯ ಪ್ರಭಾವವೇ ಸರಿ. ಆದರೆ ನಿಜವಾದ ಪ್ರೀತಿ ಎಂದಾದರೊಂದು ದಿನ ಒಂದಾಗಲೇ ಬೇಕು ಅಲ್ಲವಾ. ಆ ದಿನ ಹತ್ತಿರ ಬರುತ್ತಿದೆ. ಭೂಮಿ ಮನಸ್ಸಲ್ಲಿ ದೃಷ್ಟಿಯ ಬಗೆಗಿನ ಪ್ರೀತಿ ಸೆಳೆಯುತ್ತಿದೆ.

ಮುದ್ದುಲಕ್ಷ್ಮೀಯ ಮುದ್ದುಮಣಿಗಳು ಈಗ ಅಗಲಿದ ಮಣಿಗಳಾಗಿದ್ದಾರೆ. ದೃಷ್ಟಿಗೆ ಇವಳೇ ನನ್ನ ತಂಗಿ ಎಂಬುದು ಗೊತ್ತು. ಆದರೆ ಭೂಮಿಗೆ ಅದನ್ನು ನಂಬುವುದಕ್ಕೆ ಆಗುತ್ತಿಲ್ಲ. ಈ ಎಲ್ಲಾ ಸಮಸ್ಯೆ ನಡುವೆ ಅಹಲ್ಯಾ ಹೇಳಿದಂತೆ ಕುಣಿಯುತ್ತಿದ್ದಾಳೆ ಭೂಮಿ. ಆದರೆ ಶಿವು ಮಾಡುತ್ತಿರುವ ಫ್ಲ್ಯಾನ್ ವರ್ಕೌಟ್ ಆಗುತ್ತಿದೆ. ದೃಷ್ಟಿ ಅಂದುಕೊಂಡಂತೆ ನಡೆದರೆ ಅಕ್ಕ ತಂಗಿಯ ಸಮಾಗಮವಾಗಲಿದೆ.

ಎರಡಲ್ಲ ಈಗ ಒಂದೇ ತುಳಸಿ ಕಟ್ಟೆ

ಎರಡಲ್ಲ ಈಗ ಒಂದೇ ತುಳಸಿ ಕಟ್ಟೆ

ಅಹಲ್ಯಾಳ ಕುತಂತ್ರ ಎಷ್ಟರ ಮಟ್ಟಿಗೆ ಫಲಿಸಿದೆ ಎಂದರೆ ಮನೆಯಲ್ಲಿ ಎರಡು ಸಂಸಾರ ಆಗಿದೆ. ಎಲ್ಲವೂ ಎರಡೆರಡೇ. ಅಡುಗೆ ಎರಡು, ಬಾಗಿಲು ಎರಡು. ಇದಷ್ಟೇ ಅಲ್ಲ ಪೂಜೆಯೂ ಬೇರೆ ಬೇರೆಯಾಗಿತ್ತು. ಅದು ತುಳಸಿ ಕಟ್ಟೆಯೂ ಎರಡು ಬಂದಿತ್ತು. ಆದರೆ ಭೂಮಿ ಈಗ ಆ ಎರಡು ತುಳಸಿಕಟ್ಟೆಯನ್ನು ಒಂದು ಮಾಡಿದ್ದಾಳೆ. ಒಂದನ್ನು ಸೈಡಿಗೆ ತೆಗೆದಿಟ್ಟು ಮತ್ತೊಂದನ್ನು ಪೂಜೆ ಮಾಡಿದ್ದಾಳೆ.

ಭೂಮಿ ಮನಸ್ಸು ಬದಲಾಗುತ್ತಿದ್ಯಾ?

ಭೂಮಿ ಮನಸ್ಸು ಬದಲಾಗುತ್ತಿದ್ಯಾ?

ಭೂಮಿಗೆ ಕಾಫಿ ಎಂದರೆ ತುಂಬಾ ಇಷ್ಟ. ಭೂಮಿಯಲ್ಲಿ ದೃಷ್ಟಿ ಮೇಲಿನ ಕೋಪ ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತಿದೆ. ಇದು ಅಹಲ್ಯಾಳಿಗೆ ಸಹಿಸಲು ಆಗುತ್ತಿಲ್ಲ. ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ನೋಡುತ್ತಿದ್ದಾಳೆ. ಆದರೆ ದೃಷ್ಟಿ ಕೊಟ್ಟ ಸಪ್ರೈಸ್ ಭೂಮಿಗೆ ಸಖತ್ ಇಷ್ಟವಾಗಿದೆ. ಗುಲಾಬಿ ಹೂವಿನ ಎಲೆಗಳಿಂದ ಗುಡ್ ಮಾರ್ನಿಂಗ್ ಭೂಮಿ ಎಂದು ಪ್ರೀತಿಯಿಂದ ಬರೆದು, ಕಾಫಿಯನ್ನು ಇಟ್ಟಿದ್ದಾಳೆ. ಅದನ್ನು ನೋಡಿ ಫುಲ್ ಖುಷಿಯಾದ ಭೂಮಿ, ಕಾಫಿ ತೆಗೆದುಕೊಂಡು ಹೋಗಿದ್ದಾಳೆ. ಅತ್ತ ಶ್ರವಣ್ ಕೇಳಿದರು ಕೊಡದೆ ಸತಾಯಿಸಿದ್ದಾಳೆ.

ಪೋಷಕರ ಬಗ್ಗೆ ಮಾತನಾಡಿದ್ದಕ್ಕೆ ಕೋಪ

ಪೋಷಕರ ಬಗ್ಗೆ ಮಾತನಾಡಿದ್ದಕ್ಕೆ ಕೋಪ

ಭೂಮಿಗೆ ಜಿರಳೆ ಎಂದರೆ ಇನ್ನಿಲ್ಲದ ಭಯ. ಮನೆಯಲ್ಲಿ ಜಿರಲೆ ಕಂಡು ದಂಗಾಗಿದ್ದಾಳೆ. ಕಣ್ಣು ಮುಚ್ಚಿಕೊಂಡು ಅದನ್ನು ಓಡಿಸಿ ಅದನ್ನು ಓಡಿಸಿ ಎಂದು ಗಂಡನ ಬಳಿ ಹೇಳುತ್ತಿದ್ದಾಗ, ಆ ರೊಮ್ಯಾಂಟಿಕ್ ಜಾಗಕ್ಕೆ ಶಿವು ಹಾಗೂ ದೃಷ್ಟಿ ಬಂದಿದ್ದಾರೆ. ಜೊತೆಗೆ ಅಹಲ್ಯಾ ಕೂಡ ಬಂದಿದ್ದಾಳೆ. ದೃಷ್ಟಿಯ ಜಾಗಕ್ಕೆ ಭೂಮಿ ಹೋಗಿದ್ದಕ್ಕೆ ಅಹಲ್ಯಾ ಹಾಗೂ ದೃಷ್ಟಿಯ ನಡುವೆ ಜಗಳ ನಡೆದಿದೆ. ಆಗ ಅಹಲ್ಯ ಹದ್ದು ಮೀರಿ ಮಾತನಾಡಿದ್ದು,ಭೂಮಿ ಅದನ್ನು ವಿರೋಧಿಸಿದ್ದಾಳೆ. ಕಡೆಗೂ ಆ ಮಾತನ್ನು ವಾಪಾಸ್ ತೆಗೆಸುವ ತನಕ ಬಿಟ್ಟಿಲ್ಲ. ಅಹಲ್ಯಾ ನಾನು ಮಾತು ಆಡಬಾರದಿತ್ತು ಎಂದು ಕ್ಷಮೆ ಕೇಳಿದ್ದಾಳೆ.

ದೃಷ್ಟಿಗೆ ಗೊತ್ತಾಯ್ತು ಭೂಮಿ ಭಯ

ದೃಷ್ಟಿಗೆ ಗೊತ್ತಾಯ್ತು ಭೂಮಿ ಭಯ

ಭೂಮಿಯನ್ನು ಚಿಕ್ಕ ಮಗುವಿದ್ದಾಗಿನಿಂದ ತುಂಬಾ ಪ್ರೀತಿಸಿದವಳು ದೃಷ್ಟಿ. ಅವಳಿಗೆ ಏನು ಕಂಡರೆ ಭಯ ಎಂಬುದು ಗೊತ್ತು. ಭೂಮಿ ಭಯ ಪಟ್ಟುಕೊಳ್ಳುತ್ತಿದ್ದಾಗ, ಏನು ಜಿರಳೆ ನೋಡಿ ಭಯ ಪಟ್ಟ ಎಂದು ತುಂಬಾ ಸಾಫ್ಟ್ ಆಗಿ ಕೇಳಿದ್ದಾಳೆ. ಆಗ ಭೂಮಿಗೆ ಸ್ವಲ್ಪ ಯೋಚನೆಯಾಗಿದೆ. ಚಿಕ್ಕವಳಿದ್ದಾಗಿನಿಂದ ನನ್ನನ್ನ ತುಂಬಾ ಪ್ರೀತಿಸುತ್ತಿದ್ದವಳು. ನನಗೆ ಕೆಟ್ಟದ್ದು ಮಾಡಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡಿದ್ದಾಳೆ.

More from Filmibeat

English summary
Muddumanigalu Serial September 22nd Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X