For Quick Alerts
  ALLOW NOTIFICATIONS  
  For Daily Alerts

  ಅಂಧಕಾರದ ಪರಮಾವಧಿ ದಾಟಿ ಅಕ್ಕನ ಕಡೆಗೆ ಹೊರಟ ಭೂಮಿ : ಮತ್ತೆ ಕುತಂತ್ರ ಮಾಡ್ತಾಳಾ ಅಹಲ್ಯಾ?

  By ಎಸ್ ಸುಮಂತ್
  |

  ಮಕ್ಕಳನ್ನು ಅಮ್ಮಮ್ಮನ ಬಳಿ ಬಿಟ್ಟು ಸತ್ತು ಸ್ವರ್ಗ ಸೇರಿರುವ ಮುದ್ದುಲಕ್ಷ್ಮೀಗೆ ಈಗ ಸಮಾಧಾನವಾದಂತೆ ಆಗುತ್ತದೆ. ಯಾಕೆಂದರೆ ಮುದ್ದುಲಕ್ಷ್ಮೀ ಬಯಸಿದಂತೆ ಮುದ್ದುಮಣಿಗಳು ಒಂದಾಗುತ್ತಿದ್ದಾರೆ. ಅತ್ತೆ ಅಹಲ್ಯಾ ಕುತಂತ್ರದಿಂದ ಮುದ್ದುಮಣಿಗಳು ಹೋಗಿ ಮುದ್ದು ಮಣಿ ಆಗಿ ಹೋಗಿತ್ತು. ಈಗ ಮತ್ತೆ ಸಂತಸದ ಸಮಯ ಹತ್ತಿರ ಬಂದಿದೆ. ಭೂಮಿಗೆ ತನ್ನ ತಪ್ಪಿನ ಅರಿವಾಗಿದೆ. ಅಕ್ಕನ ಪ್ರೀತಿಯನ್ನು ಬಯಸುತ್ತಿದ್ದಾಳೆ.

  ಅಹಲ್ಯಾಳ ನಕಲಿ ಪ್ರೀತಿಗೆ ಭೂಮಿ ಸಂಪೂರ್ಣ ಮರುಳಾಗಿದ್ದಳು. ದೃಷ್ಟಿ ಏನೇ ಮಾಡಿದರು ಅದು ತಪ್ಪು, ನಾಟಕ ಎಂದೇ ಬಯಸುತ್ತಿದ್ದಳು. ಭೂಮಿಯ ವೀಕ್ನೆಸ್ ಅನ್ನು ಅಹಲ್ಯಾ ಸಖತ್ತಾಗಿಯೇ ಬಂಡವಾಳ ಮಾಡಿಕೊಂಡಿದ್ದಳು. ತಕ್ಕಂತೆ ಅಕ್ಕ ತಂಗಿಯರ ನಡುವಿನ ಪ್ರೀತಿಯನ್ನು ದೂರ ಮಾಡಿದ್ದಳು. ದೃಷ್ಟಿ ಮತ್ತು ಶಿವು ಪ್ರಯತ್ನದ ಫಲ ಈಗ ಫಲಿಸುವ ಕಾಲ ಸನಿಹವಾಗಿದೆ.

  Comedy Khiladigalu season 4: ರಾಜಮೌಳಿ ಸಿನಿಮಾಗೆ ಕುದುರೆ ಕಳುಹಿಸುವುದೇ ಈ ಗಿಲ್ಲು ನಟರಾಜ !Comedy Khiladigalu season 4: ರಾಜಮೌಳಿ ಸಿನಿಮಾಗೆ ಕುದುರೆ ಕಳುಹಿಸುವುದೇ ಈ ಗಿಲ್ಲು ನಟರಾಜ !

   ಭೂಮಿಗೆ ಸತ್ಯದ ಅರಿವಾಯಿತಾ ?

  ಭೂಮಿಗೆ ಸತ್ಯದ ಅರಿವಾಯಿತಾ ?

  ದೃಷ್ಟಿ ಸಂಪೂರ್ಣವಾಗಿ ಬದಲಾಗಿದ್ದಳು. ಅಹಲ್ಯಾಳ ಮಾತು ಎಷ್ಟರಮಟ್ಟಿಗೆ ಭೂಮಿಯನ್ನು ಆವರಿಸಿತ್ತು ಎಂದರೆ ದೃಷ್ಟಿ ಏನೇ ಮಾಡಿದರು, ಏನೇ ಹೇಳಿದರೂ ಅದೆಲ್ಲವೂ ತಪ್ಪು, ನಕಲಿ ಎಂದೇ ಭಾವಿಸುತ್ತಿದ್ದಳು. ಅಹಲ್ಯಾ ಅವಳ ಮೈಂಡ್ ವಾಶ್ ಮಾಡಿದ್ದು ಅಷ್ಟರಮಟ್ಟಿಗೆ ಪ್ರಭಾವ ಬೀರಿದೆ. ಆದರೆ ಇತ್ತೀಚೆಗೆ ದೃಷ್ಟಿ ತೋರಿಸಿದ ಪ್ರೀತಿ ಭೂಮಿಯ ಮನಸ್ಸನ್ನು ಬದಲಾಯಿಸುವಂತೆ ಮಾಡಿದೆ. ಅಹಲ್ಯಾ ಹೂಡಿದ್ದ ತಂತ್ರದಿಂದ ಮನೆಯೊಂದು ಎರಡು ಭಾಗವಾಗಿ ಜೀವನ ನಡೆಸುವಂತೆ ಆಗಿತ್ತು.

   ಅಹಲ್ಯಾ ಬಯಸಿದ್ದು ಸುಲಭವಾಗಿ ಸಿಗುತ್ತಾ?

  ಅಹಲ್ಯಾ ಬಯಸಿದ್ದು ಸುಲಭವಾಗಿ ಸಿಗುತ್ತಾ?

  ಅಹಲ್ಯಾ, ಭೂಮಿಯನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದದ್ದೇ ಆಸ್ತಿಗಾಗಿ. ನಿನ್ನ ಸಂಸಾರ ಚೆನ್ನಾಗಿರಬೇಕು. ನೀನು ಶರತ್ ಚೆನ್ನಾಗಿರಬೇಕು ಅಂತೆಲ್ಲಾ ಭೂಮಿಯ ಪರವಾಗಿ ಮಾತನಾಡಿ, ಭೂಮಿಯ ಆಸ್ತಿಯನ್ನು ನುಂಗಲು ಮಾಸ್ಟರ್ ಫ್ಲ್ಯಾನ್ ಮಾಡಿದ್ದಳು. ಅಹಲ್ಯಾ ಎಷ್ಟು ಖತರ್ನಾಕ್ ಎಂಬುದು ದೃಷ್ಟಿಗೆ ಹಾಗೂ ಶಿವುಗೆ ಚೆನ್ನಾಗಿಯೇ ಗೊತ್ತು. ಅದಕ್ಕೆ ಆಕೆಯಿಂದ ದೂರಾನೇ ಇದ್ದಾರೆ. ಈಗ ಭೂಮಿಯು ಬದಲಾಗುತ್ತಿದ್ದಾಳೆ. ಹೀಗಾಗಿ ಅವಳಿಂದ ಆಸ್ತಿ ಹೊಡೆಯುವುದು ಅಷ್ಟು ಸುಲಭವಲ್ಲ. ದೃಷ್ಟಿ ಮತ್ತು ಶಿವುನನ್ನು ದಾಟಿಕೊಂಡು ಹೋಗಬೇಕಾಗುತ್ತದೆ.

  Comedy Khiladigalu Season 4: ರಾಘವೇಂದ್ರ ಆಚಾರ್ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕ ವೇದಿಕೆ!Comedy Khiladigalu Season 4: ರಾಘವೇಂದ್ರ ಆಚಾರ್ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕ ವೇದಿಕೆ!

   ದೃಷ್ಟಿಯನ್ನು ನೋಡಲು ಕಾತುರ

  ದೃಷ್ಟಿಯನ್ನು ನೋಡಲು ಕಾತುರ

  ಭೂಮಿಗೆ ಯಾವಾಗ ಸತ್ಯದ ಅರಿವಾಯಿತೋ ಆಗಿನಿಂದ ತನ್ನ ಅಕ್ಕನನ್ನು ನೋಡಲು ಕಾತುರಳಾಗಿದ್ದಾಳೆ. ಶರತ್ ಹತ್ತಿರ ಭೂಮಿಯನ್ನು ಈಗಲೇ ನೋಡಬೇಕು ಎನ್ನುತ್ತಿದ್ದಾಳೆ. ಮನೆಯಲ್ಲಿ ಆ ಕಡೆಯವರು ಈ ಕಡೆ ಬಾರದಂತೆ, ಈ ಕಡೆಯವರು ಆ ಕಡೆ ಬಾರದಂತೆ ನಡುವೆ ಟೇಪ್ ಹಾಕಲಾಗಿದೆ. ಅದನ್ನು ತನ್ನ ದುರಹಂಕಾರದ ಪರಮಾವಧಿ ಎಂದು ತನ್ನನ್ನು ತಾನೇ ಶಪಿಸುತ್ತಿದ್ದಾಳೆ. ಶರತ್, ಭೂಮಿಗೆ ಸಮಾಧಾನ ಮಾಡಿ, ದೇವರಿಗೊಂದು ಥ್ಯಾಂಕ್ಸ್ ಹೇಳಿದ್ದಾನೆ. ಕಡೆಗೂ ಅಕ್ಕ ತಂಗಿಯರು ಒಂದಾಗುತ್ತಿದ್ದಾರಲ್ಲ. ಹೀಗೆ ಇರಲಿ ದೇವರೇ ಎನ್ನುತ್ತಿದ್ದಾನೆ.

   ಅಹಲ್ಯಾ ಕೂಡ ಬದಲಾಗುತ್ತಾಳಾ?

  ಅಹಲ್ಯಾ ಕೂಡ ಬದಲಾಗುತ್ತಾಳಾ?

  ಅಹಲ್ಯಾ, ಭೂಮಿಯ ಮೇಲೆ ಕಣ್ಣಿಟ್ಟಿದ್ದಿದ್ದು ಹಣ, ಆಸ್ತಿಗಾಗಿ. ಕಂಪನಿ ತುಂಬಾ ನಷ್ಟದಲ್ಲಿದೆ ಅಂತ ಮಾವ ಸಾಯುವ ಮಾತನಾಡಿದ್ದಾರೆ. ಇದಕ್ಕೆ ಅಹಲ್ಯಾ ನಿರ್ಲಕ್ಷ್ಯದಿಂದ ಮಾತನಾಡಿದ್ದಾಳೆ. ಕಂಪನಿಯನ್ನೇ ಮಾರಿದರಾಯಿತು ಎಂದಿದ್ದಾಳೆ. ಇದನ್ನು ಕೇಳಿದದ ದೃಷ್ಟಿ, ಆಸ್ಪತ್ರೆಯಿಂದ ಬರುವ ಶೇರ್‌ನಲ್ಲಿ ಸಾಲ ತೀರಿಸೋಣಾ ಎಂದಿದ್ದಾಳೆ. ಒಂದಲ್ಲ ಎರಡಲ್ಲ 20 ಕೋಟಿ ರೂ. ಎಂದಾಗ ಒಂದು ಕ್ಷಣ ಎಲ್ಲ ದಂಗಾಗಿದ್ದಾರೆ. ಆ ಬಳಿಕ ಸಮಾಧಾನದಿಂದ ಶಿವು, ದೃಷ್ಟಿ, ಶರತ್ ಮೂವರು ಸಾಲ ತೀರಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದನ್ನು ನೆನೆದು ಅಹಲ್ಯಾ ಬದಲಾಗುತ್ತಾಳಾ ಅಥವಾ ಮತ್ತೆ ದ್ವೇಷ ಸಾಧಿಸಲು ಹೊರಟು ಫೇಲ್ ಆಗುತ್ತಾಳಾ ನೋಡಬೇಕಿದೆ.

  ತನ್ನ ಮನೆಗೆ ವಾಪಸ್ ಬಂದ ಆರ್ಯನಿಗೆ ಎಲ್ಲಾ ನೆನಪಾಗುತ್ತಾ..?ತನ್ನ ಮನೆಗೆ ವಾಪಸ್ ಬಂದ ಆರ್ಯನಿಗೆ ಎಲ್ಲಾ ನೆನಪಾಗುತ್ತಾ..?

  English summary
  Muddumanigalu Serial September 26th Episode Written Update. Here is the details.
  Monday, September 26, 2022, 20:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X