Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
ಭೂಮಿ ಮತ್ತು ದೃಷ್ಟಿಯ ಸಂಸಾರ ಸರಿಯಾಗಬೇಕೆನ್ನುವಾಗಲೇ ಬಂದಿದ್ದು ಶಾರ್ವರಿ. ಅಹಲ್ಯಾಳ ಡ್ರಾಮಾಗಳಿಗೆ ಫುಲ್ ಸ್ಟಾಪ್ ಇಟ್ಟು, ಅಹಲ್ಯಾಳ ಕುತಂತ್ರಕ್ಕೆ ಸೆಡ್ಡು ಹೊಡೆದು ಭೂಮಿ - ಶ್ರವಣ್, ದೃಷ್ಟಿ - ಶಿವು ನೆಮ್ಮದಿಯಾಗಿ, ಸುಖ ಸಂತೋಷದಿಂದ ಬದುಕುವುದಕ್ಕೆ ನಿರ್ಧರಿಸಿದ್ದರು. ಆಗ ಶಾರ್ವರಿಯ ಎಂಟ್ರಿಯಾಗಿದೆ. ಬದುಕು ದುಸ್ತರವಾಗಿದೆ.
ಸದ್ಯ ಮುದ್ದುಮಣಿಗಳ ಕಷ್ಟವನ್ನು ನೋಡುವುದಕ್ಕೆ ಆಗದೆ ತಾಯಿ ಮುದ್ದುಲಕ್ಷ್ಮೀಯೇ ಮರುಜನ್ಮ ಪಡೆದು ಬಂದಿದ್ದಾಳೆ. ಆದರೆ ಮಕ್ಕಳನ್ನು ಇನ್ನು ಭೇಟಿ ಮಾಡುವುದಕ್ಕೆ ಆಗಿಲ್ಲ. ಹೀಗಿರುವಾಗ ತೀರ ಕಷ್ಟದಲ್ಲಿರುವ ದೃಷ್ಟಿಯ ಕಡೆಗೆ 'ಮುದ್ದುಲಕ್ಷ್ಮೀ'ಯ ಪಯಣ ಹೊರಟಿದೆ.

ಅವಮಾನ ವ್ಯಕ್ತಪಡಿಸಿದ ಶಾರ್ವರಿ
ದೃಷ್ಟಿ ಬದುಕಲ್ಲಿ ಸಂಕಷ್ಟಗಳು ಕಡಿಮೆಯೇ ಆಗುತ್ತಿಲ್ಲ. ಶಿವು ಜೈಲಿನಲ್ಲಿದ್ದಾನೆ. ಶ್ರವಣ್ ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಆ ಕಡೆ ಶ್ರವಣ್‌ನ ನೋಡುವುದಕ್ಕೆ ಹೋದಾಗಲೂ ಶಾರ್ವರಿಯ ಕಡೆಯವರು ಅದನ್ನು ತಡೆದು ಕಳುಹಿಸಿದ್ದಾರೆ. ಈ ಕಡೆ ಭೂಮಿ ಎಲ್ಲಿದ್ದಾಳೆ ಎಂಬುದು ಗೊತ್ತಿಲ್ಲ ದೃಷ್ಟಿ, ಕಡೆಗೂ ತಮ್ಮ ಮನೆಗೆ ಹೋಗಿದ್ದಾಳೆ. ಭೂಮಿ ಅಲ್ಲಿಯೇ ಸಿಗಬಹುದು ಎಂಬ ನಿರೀಕ್ಷೆಯಿಂದ. ಆದರೆ ಅಲ್ಲಿಯೂ ಶಾರ್ವರಿ ಎದುರಾಗಿದ್ದಾಳೆ. ಅವಳ ಕೆಟ್ಟ ಬುದ್ದಿ ಎದುರಾಗಿದೆ.

ದೃಷ್ಟಿಗೆ ಅವಮಾನ ಮಾಡಿದ ಭೂಮಿ
ತಾವಿದ್ದ ಮನೆಗೆ ಹೋದ ದೃಷ್ಟಿಗೆ ಶಾರ್ವರಿ ಎದುರಾಗಿದ್ದಾಳೆ. ನಿನ್ನನ್ನ ಮನೆಯೊಳಗೆ ಬಿಟ್ಟವರು ಯಾರು ಎಂದು ಕೇಳಿದ್ದಾಳೆ. ಇದು ನನ್ನ ಮನೆ ಎಂದು ಶಾರ್ವರಿಗೆ ಅವಾಜ್ ಹಾಕುವಾಗಲೇ ಭೂಮಿ ಬಂದಿದ್ದಾಳೆ. ಇದು ನಮ್ಮ ಮನೆಯಲ್ಲ ಶಾರ್ವರಿಯ ಮನೆ ಎಂದೇ ಗುಡುಗಿದ್ದಾಳೆ. ಇದನ್ನು ಕೇಳಿದ ದೃಷ್ಟಿಗೆ ಶಾಕ್ ಆಗಿದೆ. ಭೂಮಿಯನ್ನು ನೋಡಿದ ಖುಷಿಯಲ್ಲಿದ್ದ ದೃಷ್ಟಿಗೆ ಅವಳು ಆಡಿದ ಮಾತುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ದೃಷ್ಟಿ ಪ್ರೀತಿಯಿಂದ ಮಾತನಾಡಿಸುವುದಕ್ಕೆ ಯತ್ನಿಸಿದರು ಭೂಮಿ, ಶತ್ರುವಿನಂತೆಯೇ ಮಾತನಾಡಿದ್ದಾಳೆ. ಯಾಕಂದ್ರೆ ಭೂಮಿ ಶಾರ್ವರಿಯ ಕೈಗೊಂಬೆಯಾಗಿದ್ದಾಳೆ. ಇದು ದೃಷ್ಟಿಗೆ ಅರ್ಥವಾಗುತ್ತಿಲ್ಲ. ಹೀಗಾಗಿ ಅಲ್ಲಿಂದ ನೋವು ಪಟ್ಟುಕೊಂಡೆ ಹೊರ ಹೋಗಿದ್ದಾಳೆ.

ಸಂಕಷ್ಟದಲ್ಲಿದ್ದಾಳೆ ದೃಷ್ಟಿ
ತನ್ನವರು ಅಂತ ಇದ್ದವರೆಲ್ಲಾ ಈಗ ದೂರವಾಗಿದ್ದಾರೆ. ಇಡೀ ಕುಟುಂಬದಂತಿದ್ದ ಎಲ್ಲರು ಒಂದೊಂದು ದಿಕ್ಕಿನ ಕಡೆಗೆ ಹೋಗಿದ್ದಾರೆ. ಈಗ ದೃಷ್ಟಿ ಕಂಪ್ಲೀಟ್ ಒಬ್ಬಂಟಿ. ಇದನ್ನು ಅವಳಿಂದ ಸಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಶಿವುನನ್ನು ನೋಡಲು ಜೈಲಿಗೆ ಹೋದಾಗಲೂ ಆ ನೋವು ಬಹಳ ಕಾಡುತ್ತೆ. ಮನೆಯಲ್ಲಿ ಒಬ್ಬಳೆ ಇರುತ್ತಾಳೆ. ತನ್ನವರನ್ನು ನೆನೆದು ಅಳುತ್ತಿದ್ದಾಳೆ. ಆದರೆ ಈ ಸಂಕಷ್ಟದಲ್ಲಿ ಜೊತೆಗೆ ಇರಬೇಕಾದವರೇ ಜೊತೆಗೆ ಇಲ್ಲ.

ಬಂದೇ ಬಿಟ್ಟಳು ಮುದ್ದುಲಕ್ಷ್ಮೀ
ಮುದ್ದುಲಕ್ಷ್ಮೀ ಜಾಹ್ನವಿಯಾಗಿ ಮರು ಜನ್ಮ ಪಡೆದಿದ್ದಾಳೆ. ದೃಷ್ಟಿಯ ಚಿಕ್ಕಮ್ಮನ ಮನೆಯಲ್ಲಿಯೇ ಈಗ ಮುದ್ದುಲಕ್ಷ್ಮೀ ಇದ್ದಾಳೆ. ದೃಷ್ಟಿಗೆ ಸಾಕಷ್ಟು ಸಲ ಅನ್ನಿಸಿದೆ ಅಮ್ಮ ಬದುಕಿ ಬಂದಿದ್ದಾಳೆ ಅಂತ. ಆಗೆಲ್ಲ ಹುಡುಕಾಟ ಕೂಡ ನಡೆಸಿದ್ದಾಳೆ. ದೇವಸ್ಥಾನದಲ್ಲಿ ಅಮ್ಮನ ದರ್ಶನವಾದರೂ ಕೈಗೆ ಸಿಗಲಿಲ್ಲ. ಕ್ಯಾಮೆರಾ ಲೆನ್ಸ್ ಆಗಬೇಕಿದ್ದ ಭೇಟಿಯೂ ತಪ್ಪಿ ಹೋಯ್ತು. ಹೀಗಾಗಿ ನೋವಿನಲ್ಲಿಯೇ ಇದ್ದಳು. ಒಬ್ಬಂಟಿಯಾದ ದೃಷ್ಟಿಗೆ ಯಾರಾದರೂ ಜೊತೆಗಿರಬೇಕು. ಅವಳಿಗೆ ಸಮಾಧಾನ ಹೇಳುವವರು ಬೇಕು ಎಂದು ಚಿಕ್ಕಿ ಮನೆಯವರು ಅಂದುಕೊಳ್ಳುವಾಗಲೇ ಜಾಹ್ನವಿ ನಾನೇ ಜೊತೆಗೆ ಇರುತ್ತೀನಿ ಎಂದಿದ್ದಾಳೆ. ದೃಷ್ಟಿ ಬಾಕ್ಸಿಗೆ ಊಟ ಹಾಕಿಕೊಂಡು ಹೊರಟಿದ್ದಾಳೆ. ದೃಷ್ಟಿಯ ಮನೆಯನ್ನು ತಲುಪಿದ್ದಾಳೆ. ಇನ್ನೇನು ಅಮ್ಮ ಮಗಳು ಒಂದಾಗಬೇಕಿದೆ. ಶತ್ರುಗಳ ಹುಟ್ಟು ಅಡಗಿಸಿಬೇಕಿದೆ.


Click it and Unblock the Notifications











