Muddumanigalu:ಅಮ್ಮನನ್ನು ಸೇರಲು ಎರಡೇ ಮೆಟ್ಟಿಲು.. ದೃಷ್ಟಿಗೆ ಕಾಣುತ್ತಾಳಾ ಪುನರ್ ಜನ್ಮ ಪಡೆದ ಮುದ್ದುಲಕ್ಷ್ಮೀ..?

By ಎಸ್ ಸುಮಂತ್

ಸಾಕಷ್ಟು ವರ್ಷ ಮುದ್ದುಲಕ್ಷ್ಮೀಯ ಮಕ್ಕಳು ಯಾರೆಂಬುದು ತಿಳಿಯದೇ ಬದುಕುತ್ತಿದ್ದವರು ದೃಷ್ಟಿ ಮತ್ತು ಭೂಮಿ. ಇನ್ನೇನು ಒಂದಾಗಬೇಕು ಎನ್ನುವಷ್ಟರಲ್ಲಿ ಅಹಲ್ಯಾ ಎದರಾದಳು. ಇಬ್ಬರನ್ನು ಬೇರೆ ಮಾಡುವುದಕ್ಕೆ ಯತ್ನಿಸಿದಳು. ಅಷ್ಟೇ ಯಾಕೆ ಇಬ್ಬರ ನಡುವೆ ಬೆಂಕಿ ಹಚ್ಚುವ ಕೆಲಸವನ್ನೇ ಹೆಚ್ಚಾಗಿ ಮಾಡಿದ್ದಳು.

ಈಗ ಮುದ್ದುಲಕ್ಷ್ಮೀಯ ಮುದ್ದುಮಣಿಗಳು ಎಲ್ಲಾ ಸಂಕಷ್ಟಗಳನ್ನು ಗೆದ್ದಿದ್ದಾರೆ. ಎಲ್ಲರದನ್ನು ಸರಿ ಮಾಡಿ ಬದುಕಬೇಕೆಂದುಕೊಳ್ಳುವಾಗಲೇ ಶಾರ್ವರಿಯ ಆಟ ಶುರುವಾಗಿದೆ. ಆದ್ರೆ ಶಾರ್ವರಿಯ ಆಟಕ್ಕೆ ಬ್ರೇಕ್ ಹಾಕಿ ಮಕ್ಕಳನ್ನು ಕಾಪಾಡುವುದಕ್ಕೆ ಮರುಜನ್ಮ ಎತ್ತಿ ಬಂದಿದ್ದಾಳೆ ಮುದ್ದುಲಕ್ಷ್ಮೀ.

ಚಿಕ್ಕಮ್ಮನ ಮನೆಯಲ್ಲಿರುವ 'ಮುದ್ದುಲಕ್ಷ್ಮೀ'

ಚಿಕ್ಕಮ್ಮನ ಮನೆಯಲ್ಲಿರುವ 'ಮುದ್ದುಲಕ್ಷ್ಮೀ'

'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಹೊಸದೊಂದು ಟ್ವಿಸ್ಟ್ ಇದೆ ಎನ್ನಲಾಗುತ್ತಿತ್ತು. ಆ ಟ್ವಿಸ್ಟ್ ಇದೀಗ ಬಯಲಾಗಿದೆ. ತನ್ನ ಮಕ್ಕಳಿಗಾಗಿ ಮುದ್ದುಲಕ್ಷ್ಮೀಯೇ ಮತ್ತೊಂದು ಜನ್ಮವೆತ್ತಿ ಬಂದಿದ್ದಾಳೆ. ಅದು ಮಕ್ಕಳಿಗೆ ತೀರ ಹತ್ತಿರದ ಸಂಬಂಧಿಕಳಾಗಿಯೇ ಜನ್ಮ ತಾಳಿದ್ದಾಳೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿದ್ದಾಳೆ. ಯೂಟ್ಯೂಬರ್ ಆಗಿ, ಸ್ಥಳಗಳನ್ನು ತಿಳಿಸುತ್ತಿದ್ದಾಳೆ. ದೃಷ್ಟಿಗೆ ಶಿವುನನ್ನು ಜೈಲಿನಿಂದ ಬಿಡಿಸಿಕೊಂಡು ಬರುವುದು ಹೇಗೆ ಎಂಬ ಚಿಂತೆ. ಜೊತೆಗೆ ಅಷ್ಟು ಪ್ರೀತಿ ಮಾಡುವ ಭೂಮಿ ಎಲ್ಲಿದ್ದಾಳೆ ಎಂಬುದು ಗೊತ್ತಿಲ್ಲ. ಆ ಕಡೆ ಶಾರ್ವರಿ ಭೂಮಿಯನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದಾಳೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿ ಮುದ್ದುಲಕ್ಷ್ಮೀಯ ಎಂಟ್ರಿಯಾಗಿದೆ.

ಮಕ್ಕಳಿಗಾಗಿ ಮುದ್ದುಲಕ್ಷ್ಮೀ ಕನವರಿಕೆ

ಮಕ್ಕಳಿಗಾಗಿ ಮುದ್ದುಲಕ್ಷ್ಮೀ ಕನವರಿಕೆ

ಮುದ್ದುಲಕ್ಷ್ಮೀಗೆ ಇದು ಮರುಜನ್ಮ. ಆದರೆ ಹಳೆಯ ಜನ್ಮದ ಹೆಸರು, ಮಕ್ಕಳ ಧ್ವನಿ ಕೇಳಿದರೇನೆ ಮುದ್ದುಲಕ್ಷ್ಮೀ ಒಂದು ಕ್ಷಣ ದಂಗಾಗಿ ನಿಲ್ಲುತ್ತಿದ್ದಾಳೆ. ಮೊದಲ ಬಾರಿಗೆ ಬೆಂಗಳೂರಿಗೆ ಬಂದು ಇಳಿದಿದ್ದಾಳೆ. ಬೆಂಗಳೂರಿಗೆ ಬಂದು ಇಳಿದ ಕೂಡಲೇ ಕಂಡಿದ್ದು ಆಸ್ಪತ್ರೆ. ಆ ಆಸ್ಪತ್ರೆಯಲ್ಲಿದ್ದ ಮುದ್ದುಲಕ್ಷ್ಮೀ ಎಂಬ ಹೆಸರನ್ನು ನೋಡಿದ ಮುದ್ದುಲಕ್ಷ್ಮೀಗೆ ಯಾವುದೋ ಹಳೆಯ ನೆನಪುಗಳೆಲ್ಲಾ ಬರುವುದಕ್ಕೆ ಶುರುವಾಗಿದೆ. ತನ್ನ ಹೆಸರಿರುವ ಬೋರ್ಡ್ ನೋಡುತ್ತಾ ಹಾಗೆಯೇ ನಿಂತು ಬಿಟ್ಟಿದ್ದಳು.

ಲೆನ್ಸ್ ಒತ್ತು ಬರುತ್ತಿರುವ ದೃಷ್ಟಿ

ಲೆನ್ಸ್ ಒತ್ತು ಬರುತ್ತಿರುವ ದೃಷ್ಟಿ

ಮುದ್ದುಲಕ್ಷ್ಮೀ ದೇವಸ್ಥಾನದ ಶೂಟ್ ಆಗಿದ್ದಳು. ಆಗ ಮಗಳನ್ನು ಗೊತ್ತಿಲ್ಲದೆ ಶೂಟ್ ಮಾಡಿದ್ದಾಳೆ. ಆ ವಿಡಿಯೋವನ್ನು ಮನೆಯಲ್ಲಿ ನೋಡುತ್ತಾ ಕೂತಿದ್ದಾಗ ಮಗಳ ಅಳುವು ಮನಸ್ಸಿಗೆ ತಟ್ಟಿದೆ. ಒಂದು ಕ್ಷಣ ಮನಸ್ಸು ಕಸಿವಿಸಿಯಾಗಿದೆ. ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬಂದಿದೆ. ಯಾಕೆ ಇಷ್ಟೊಂದು ಕಷ್ಟ ಕೊಟ್ಟಿದ್ದಾನೆ ದೇವರು ಎಂದು ಶಪಿಸಿದ್ದಾಳೆ. ಆದರೆ ತನ್ನ ಮಗಳು ಎಂಬುದು ಮಾತ್ರ ಅರಿವಿಗೆ ಬಂದಿಲ್ಲ.

ಅಮ್ಮನ ಕಣ್ಣಿಗೆ ಬೀಳುತ್ತಾಳಾ ದೃಷ್ಟಿ

ಅಮ್ಮನ ಕಣ್ಣಿಗೆ ಬೀಳುತ್ತಾಳಾ ದೃಷ್ಟಿ

ದೃಷ್ಟಿಗೆ ದೇವಸ್ಥಾನದಲ್ಲಿ ಇದ್ದವರು ನನ್ನ ಅಮ್ಮನ ರೀತಿಯೇ ಫೀಲ್ ಆಗುತ್ತೆ ಅನ್ನೋದು ಗೊತ್ತಾಗಿ ಹುಡುಕಾಟ ಶುರು ಮಾಡಿದ್ದಳು. ಕಡೆಯಲ್ಲಿ ಮುದ್ದುಲಕ್ಷ್ಮೀ ಹೋದ ಕಾರು ಸಿಕ್ಕಿತು. ಡ್ರೈವರ್‌ನನ್ನು ಕೇಳಿದಾಗ ಆತ ಫೋನ್ ನಂಬರ್ ಕೊಡುವುದರ ಜೊತೆಗೆ ಒಂದು ಲೆನ್ಸ್ ಕೂಡ ಕೊಟ್ಟ. ಇತ್ತ ದೃಷ್ಟಿ ಕೂಡ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಆಗ ಅಮ್ಮನ ಧ್ವನಿ ಕೇಳಿಸಿತು. ಮುದ್ದುಲಕ್ಷ್ಮೀಗೂ ಅದೇ ಅನುಭವವಾಗಿತ್ತು. ಅತ್ತ ಮುದ್ದುಲಕ್ಷ್ಮೀ ಕಳೆದುಕೊಂಡ ಲೆನ್ಸ್ ಗಾಗಿ ಒದ್ದಾಡುತ್ತಿದ್ದಾಳೆ. ಅದೇ ಸಮಯಕ್ಕೆ ಗೊತ್ತಿಲ್ಲದ ನಂಬರ್‌ನಿಂದ ಕರೆ ಬಂದಿದೆ. ಆದರೆ ಮುದ್ದುಲಕ್ಷ್ಮೀಯ ಧ್ವನಿ ಕೇಳಿ ಆ ಕಡೆಯಿಂದ ಸದ್ದು ಬರುತ್ತಿಲ್ಲ. ಆದರೆ ಅಮ್ಮ ಮಗಳನ್ನು ಈ ಲೆನ್ಸ್ ಖಂಡಿತಾ ಒಂದು ಮಾಡುತ್ತೆ. ಒಂದು ಮಾಡಲಿ ಎಂಬುದೇ ಎಲ್ಲರ ಆಶಯವಾಗಿದೆ.

More from Filmibeat

English summary
Muddumanigalu Serial Written Update on January 27th Episode. Here is the details about Drusti calling Muddulakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X