9 ವರ್ಷದ ದಾಂಪತ್ಯ ಜೀವನ ಅಂತ್ಯ, ಖ್ಯಾತ ನಾಯಕಿಯ ಬದುಕಿನಲ್ಲಿ ಬಿರುಗಾಳಿ..!

ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ.ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದು ಅನೇಕರ ಅಭಿಪ್ರಾಯ.ಆದರೆ ಕೆಲ ಒಮ್ಮೆ ಈ ದಾಂಪತ್ಯದಲ್ಲಿ ಮೂಡುವ ಬಿರುಕನ್ನು ಆರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಅದು ಹಾದಿ ತಪ್ಪಿ ಎಲ್ಲಿಗೋ ಹೋಗಿ ತಲುಪುವ ಅಪಾಯ ಇದ್ದೇ ಇರುತ್ತೆ.

ಅರ್ಧದಲ್ಲಿಯೇ ಸಂಬಂಧಗಳು ಕಳಚಿ ಹೋಗುತ್ತವೆ. ಇದಕ್ಕೆ ಮುಗ್ದಾ ಚಾಪೇಕರ್‌ ದಾಂಪತ್ಯ ಜೀವನ ಮತ್ತೊಂದು ಉದಾಹರಣೆ. ಹೌದು, ಧರ್ಮ ವೀರ್, ಗೋಲ್‌ಮಾಲ್ ಹೈ ಸಬ್ ಗೋಲ್‌ಮಾಲ್ ಹೈ, ಹಲ್ಲಾ ಬೋಲ್, ಮುಂತಾದ ಧಾರಾವಾಹಿಗಳ ಮೂಲಕ ಹಿಂದಿ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ಮುಗ್ದಾ ಚಾಪೇಕರ್ ಆ ನಂತರ ಕುಂಕುಮ್ ಭಾಗ್ಯ ಧಾರಾವಾಹಿ ಮೂಲಕ ಮಹಾರಾಷ್ಟ್ರದೆಲ್ಲೆಡೆ ಮನೆ ಮಾತಾಗಿದ್ದರು. ಅನೇಕರ ಹೃದಯವನ್ನು ಕೂಡ ಗೆದ್ದಿದ್ದರು.

Mugdha Chaphekar and Ravish Desai announce their divorce after 9 years of marriage

ಇಂಥಾ ಮುಗ್ದಾ ಚಾಪೇಕರ್ ಈಗ ತಮ್ಮ 09 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ತಮ್ಮ ಪತಿ ರಾವಿಶ್ ದೇಸಾಯಿಗೆ ವಿಚ್ಚೇದನ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಯಾಕೆಂದರೆ ಮುಗ್ದಾ ಚಾಪೇಕರ್ ಮತ್ತು ರಾವಿಶ್ ದೇಸಾತಿ ಅವರದ್ದು ಲವ್ ಮ್ಯಾರೇಜ್. ಧಾರಾವಾಹಿಯಲ್ಲಿ ಜೊತೆಯಲ್ಲಿ ಅಭಿನಯಿಸುತ್ತಾ ಪ್ರೀತಿಯಲ್ಲಿ ಬಿದ್ದವರು ಇಬ್ಬರು.

ಹೀಗಾಗಿಯೇ ತಮ್ಮ ನೆಚ್ಚಿನ ಜೋಡಿ ನಿಜ ಜೀವನದಲ್ಲಿ ಕೂಡ ಒಂದಾಗುತ್ತಿದೆ ಎಂದು ಅನೇಕರು ಖುಷಿ ಪಟ್ಟಿದ್ದರು. ಶುಭ ಕೋರಿದ್ದರು. ಆದರೆ ಈಗ 09 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇನ್ನು ಡಿವೋರ್ಸ್ ವಿಚಾರ ಹೊರ ಬಿದ್ದ ಬೆನ್ನಲ್ಲೇ ರಾವಿಶ್ ದೇಸಾಯಿ ಮತ್ತು ಮುಗ್ದಾ ಚಾಪೇಕರ್ ಅವರ ನಡುವೆ ಸಂಬಂಧ ಇಂದು ನಿನ್ನೆಯಲ್ಲ ಬದಲಿಗೆ ಮೂರು ವರ್ಷದ ಹಿಂದೆಯೇ ಹಳಸಿತ್ತು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ವಿಚ್ಚೇದನದ ಕುರಿತು ಎರಡು ವರ್ಷದ ಹಿಂದೆ ಇಬ್ಬರು ಮಾತನಾಡಿಕೊಂಡಿದ್ದರು, ಆಗಲೇ ಡಿವೋರ್ಸ್ ಪಡೆಯಲು ಮುಂದಾಗಿದ್ದರು ಆದರೂ ಕೂಡ ಕೊನೆಯದಾಗಿ ಸಂಬಂಧ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೊತೆಯಲ್ಲಿರುವ ಪ್ರಯತ್ನ ಮಾಡಿದ್ದರು ಆದರೆ ಅದು ಕೂಡ ವಿಫಲವಾಯ್ತು ಎಂದು ಮುಂಬೈ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ತಮ್ಮ ವಿಚ್ಚೇದನದ ವಿಚಾರದ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ರಾವಿಶ್ ದೇಸಾಯಿ ಕಳೆದ ಕೆಲವು ದಿನಗಳಿಂದ ನಡೆದ ಮಾತುಕಥೆ, ಚರ್ಚೆಯ ನಂತರ ನಾನು ಮತ್ತು ಮುಗ್ದಾ ದೂರವಾಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ನಾವು ಮುಂದಿನ ದಿನಗಳಲ್ಲಿ ನಮ್ಮ ನಮ್ಮ ದಾರಿಯಲ್ಲಿ ನಡೆಯಲು ತೀರ್ಮಾನವನ್ನು ಮಾಡಿದ್ದು ಕಳೆದೊಂದು ವರ್ಷದಿಂದ ನಾವು ಬೇರೆಯಾಗಿದ್ದೇವು ಆದರೆ ಈಗ ಅಧಿಕೃತವಾಗಿ ಬೇರೆಯಾಗಿದ್ದೇವೆ ಎಂದು ಹೇಳಿದ್ದಾರೆ. ಮುಂದುವರೆದು ನಮ್ಮೊಳಗಿನ ಪ್ರೀತಿ, ಗೌರವ, ಗೆಳೆತನ ಹಾಗೇ ಮುಂದುವರೆಯಲಿದೆ ಎಂದಿರುವ ರಾವಿಶ್ ದೇಸಾಯಿ ಈ ಕಷ್ಟಕರವಾದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿಯನ್ನು ಮಾಡಿದ್ದಾರೆ.

ಅಂದ್ಹಾಗೇ ಕುಂಕುಮ್ ಭಾಗ್ಯ ಧಾರಾವಾಹಿ ಮುಗ್ದಾ ಚಾಪೇಕರ್ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿದ್ದರೆ, ರಾವಿಶ್ ದೇಸಾತಿ ಹಲವು ಧಾರಾವಾಹಿ ಮತ್ತು ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿದ್ದರು. ಇನ್ನು ಇಬ್ಬರದ್ದು ಅರೆಂಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್ ಆಗಿತ್ತು. ಆದರೆ ಈಗ ಇಬ್ಬರ ಸುಂದರವಾದ ದಾಂಪತ್ಯ ಪ್ರಯಾಣ ಅಂತ್ಯವಾಗಿದೆ. ಪ್ರೀತಿ ಸತ್ತು ಹೋಗಿದೆ.

More from Filmibeat

Read more about: divorce filmibeat news actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X