ಎಲ್ಲರಲ್ಲೂ ತಂದೆಯನ್ನು ನೋಡಿದೆ: ಅರ್ಜುನ್ ಜನ್ಯ ಭಾವುಕ ನುಡಿ
ಸ್ಯಾಂಡಲ್ ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತ್ತೀಚಿಗೆ ಲಘು ಹೃದಯಾಘಾತದಿಂದ ಕಳೆದ ತಿಂಗಳು ಫೆಬ್ರವರಿ ಕೊನೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ್ ಜನ್ಯ, ಕೆಲವು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಸದ್ಯ ಚೇತರಿಸಿಕೊಂಡಿರುವ ಅರ್ಜುನ್ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ.
Recommended Video
ಸಿನಿಮಾ ಜೊತೆಗೆ ಕಿರುತೆರೆಗೂ ಜನ್ಯ ವಾಪಸ್ ಆಗಿದ್ದಾರೆ. ಸರಿಗಮಪ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಕೊಳ್ಳುತ್ತಿದ್ದ ಆನಾರೋಗ್ಯದ ಹಿನ್ನಲೆ, ಕಳೆದ ಕೆಲವಾರ ಕಾಣಿಸಿಕೊಂಡಿರಲಿಲ್ಲ. ಆದರೆ ಈ ವಾರ ಅಭಿಮಾನಿಗಳ ಮುಂದೆ ಹಾಜರಾಗಿದ್ದಾರೆ. ಶೋಗೆ ಅದ್ದೂರಿಯಾಗಿ ಎಂಟ್ರಿ ಕೊಟ್ಟ ಜನ್ಯ ಎಲ್ಲರಿಗೂ ಧನ್ಯವಾದ ತಿಳಿಸಿ ಭಾವುಕರಾಗಿ ಮಾತನಾಡಿದ್ದಾರೆ.

ನಾನು ನನ್ನ ಕುಟುಂಬ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ
ನಾನೂ ಮತ್ತು ನನ್ನ ಕುಟುಂಬ ಎಲ್ಲರಿಗೂ ಧನ್ಯವಾದ ತಿಳಿಸುತ್ತೇವೆ. ಎಲ್ಲರ ಆಶೀರ್ವಾದ ನನ್ನ ಮೇಲೆ ಇತ್ತು. ಹಾಗಾಗಿ ಏನು ತೊಂದರೆಯಾಗದೆ ಇಲ್ಲಿ ಬಂದು ನಿಂತಿದ್ದೀನಿ. ಅಂದರೆ ಅದಕ್ಕೆ ನಿಮ್ಮ ಆಶೀರ್ವಾದನೆ ಕಾರಣ. ಎಂದು ಅರ್ಜುನ್ ಹೇಳಿದರು.

ಹಂಸಲೇಖ ಮಾತು ಕೇಳಿ ಅರ್ಧ ಗಂಟೆ ಅತ್ತಿದ್ದೀನಿ
ಸಾಕಷ್ಟು ಜನ ಮೆಸೇಜ್ ಮಾಡಿದ್ದರು. ಹಂಸಲೇಖ ಸರ್ ಒಂದು ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಫೋನ್ ಆನ್ ಮಾಡುವ ಹಾಗಿರಲಿಲ್ಲ. ಆದರೂ ಮಾಡಿದೆ. ಹಂಸಲೇಖ ಸರ್ ಮೆಸೇಜ್ ನೋಡಿ ಓಪನ್ ಮಾಡಿದೆ. ಅದರಲ್ಲಿ "ಡಿಯರ್ ಅರ್ಜುನ್ ಕಮಾನ್, ಐ ನೋ ವಾಟ್ ಯೂ ಆರ್, ಐ ನೋ ವಾಟೀಸ್ ಯುವರ್ ಹಾರ್ಟ್, ಐ ನೋ ಹೌ ಯು ಕಮ್ ಬ್ಯಾಕ್, ಅರ್ಜುನ್ ಕಮ್ ಬ್ಯಾಕ್" ಎಂದು ಹೇಳಿದ್ದರು. ಇದನ್ನ ಕೇಳಿ ಅರ್ಧ ಗಂಟೆ ಅತ್ತಿದ್ದೀನಿ ಎಂದು ಅರ್ಜುನ್ ಭಾವುಕರಾಗಿ ಹೇಳಿದರು.

ಮಗುವಿನ ಹಾಗೆ ನೋಡಿಕೊಂಡಿದ್ದಾರೆ
"ನಾವಿಲ್ಲ ಎಂದರೆ ಏನಾಗುತ್ತೆ ಎನ್ನುವುದನ್ನು ದೇವರು ಟ್ರೈಲರ್ ತೋರಿಸಿದ್ದಾನೆ. ಇದು ಹಾಗೆ. ಕೆಲ ಬೆಳವಣಿಗೆಗೆ ಕೆಲ ಬದಲಾವಣಿಗೆಯಾಗಬೇಕು. ಚಿಕ್ಕ ಬದಲಾವಣೆಯಾಗಿದೆ. ಎಲ್ಲರನ್ನು ತುಂಬ ಮಿಸ್ ಮಾಡಿಕೊಂಡೆ. ಅದರಲ್ಲೂ ಅಣ್ಣ ರಾಜೇಶ್ ಕೃಷ್ಣ ಹಾಗೂ ವಿಜಯ್ ಪ್ರಕಾಶ್ ಸರ್ ನನ್ನನ್ನು ಮಗುವಿನ ಹಾಗೆ ನೋಡಿಕೊಂಡಿದ್ದಾರೆ" ಎಂದು ರಾಜೇಶ್ ಕೃಷ್ಣ ಮತ್ತು ವಿಜಯ್ ಪ್ರಕಾಶ್ ಬಗ್ಗೆ ಹೇಳಿದ್ದಾರೆ.

ಎಲ್ಲರಲ್ಲೂ ತಂದೆಯನ್ನು ಕಂಡೆ
"ನನಗೆ ತಂದೆ ಇಲ್ಲ. ಎಷ್ಟೋ ಜನ ತಂದೆ ರೂಪದಲ್ಲಿ ಸಿಕ್ಕರೂ ನನಗೆ. ಅಣ್ಣ ರಾಜೇಶ್ ಕೃಷ್ಣ ಪ್ರೊಗ್ರಾಮ್ ತೊಂದರೆ ಆಗಿದ್ದಕ್ಕೆ ನೀನು ಮನೆಯಲ್ಲಿಯೇ ಇರು, ನಾನು ನಡೆಸಿಕೊಡುತ್ತೇನೆ ಎಂದು ಅವರೆ ನಡೆಸಿಕೊಟ್ಟಿದ್ದಾರೆ. ವಿಜಯ್ ಸರ್ ಮೈಸೂರಿಗೆ ಬಂದು ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದು ಕೊಂಡು ಹೋಗಿ ತಾಯತ ಕಟ್ಟಿಸಿಕೊಂಡು ಬಂದಿದ್ದಾರೆ. ಇವರೆಲ್ಲರ ಮೂಲಕ ನಾನು ತಂದೆಯನ್ನು ನೋಡಿದೆ. ಎಲ್ಲರಿಗೂ ಎಷ್ಟು ಧನ್ಯವಾದ ಹೇಳಿದರು ಸಾಲದು" ಅರ್ಜುನ್ ಭಾವುಕರಾಗಿ ಮಾತನಾಡಿದರು.

ಏಕ್ ಲವ್ ಯಾ ಸಿನಿಮಾಗೆ ಜನ್ಯ ಸಂಗೀತ
ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಪೂರ್ಣ ಮಾಡಲು ಜನ್ಯ ಈಗಾಗಲೆ ಕೆಲಸ ಪ್ರಾರಂಭಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.


Click it and Unblock the Notifications











