»   » ಅಪ್ಪು ಮುಂದೆ ನಡೆದ ಮನಕಲಕುವ ಘಟನೆ : ಮಾನವೀಯತೆ ಮೆರೆದ ಮುಸ್ಲಿಂ ಕುಟುಂಬ

ಅಪ್ಪು ಮುಂದೆ ನಡೆದ ಮನಕಲಕುವ ಘಟನೆ : ಮಾನವೀಯತೆ ಮೆರೆದ ಮುಸ್ಲಿಂ ಕುಟುಂಬ

Posted By:
Subscribe to Filmibeat Kannada

ಜಾತಿ, ಧರ್ಮ ಎಲ್ಲದಕ್ಕಿಂತ ದೊಡ್ಡದು ಮಾನವೀಯತೆ ಮತ್ತು ಮನುಷ್ಯತ್ವ. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ್ಯ, ಬೌಧ್ದ ಇತ್ಯಾದಿ.. ಇತ್ಯಾದಿ.. ಧರ್ಮಗಳು ಭಾರತದಲ್ಲಿ ಇವೆ. ಆದರೆ ಎಲ್ಲ ಜಾತಿ ಧರ್ಮಗಳನ್ನು ಮೀರಿದ್ದು ಒಳ್ಳೆಯ ತನ. ನಾನು ಹಿಂದೂ, ನೀವು ಮುಸ್ಲಿಂ ಎಂದು ಕಾರಣ ಇಲ್ಲದೆ ಹೊಡೆದಾಡುತ್ತಿರುವ ಈ ಕಾಲದಲ್ಲಿ ಈಗ ನಡೆದಿರುವ ಒಂದು ಸಣ್ಣ ಘಟನೆ ಎಲ್ಲರ ಮನಸು ತಟ್ಟಿದೆ.

ಪುನೀತ್ ರಾಜ್ ಕುಮಾರ್ ನೆಡೆಸಿಕೊಂಡುವ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಆ ರೀತಿಯ ಒಂದು ಮನಕಲಕುವ ಘಟನೆ ನಡೆದಿದೆ. ಪ್ರತಿ ವಾರದಂತೆ ಕಳೆದ ವಾರವೂ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳು ಭಾಗಿಯಾಗಿತ್ತು. ಅದರಲ್ಲಿ ಒಂದು ಹಿಂದೂ ಕುಟುಂಬ, ಮತ್ತೊಂದು ಮುಸ್ಲಿಂ ಕುಟುಂಬ ಆಗಿದೆ. ಎಂದಿನಂತೆ ಆಟ ಶುರು ಆಯ್ತು. ಆದರೆ ಕೊನೆಗೆ ಮುಸ್ಲಿಂ ಕುಟುಂಬ ತಾವು ಗೆದ್ದ ಹಣವನ್ನು ಹಿಂದೂ ಕುಟುಂಬಕ್ಕೆ ನೀಡಿದೆ. ಅಂದಹಾಗೆ, ಪುನೀತ್ ಅವರೇ ಹೇಳುವಂತೆ ಈ ರೀತಿ ತಾವು ಗೆದ್ದ ಹಣವನ್ನು ಇನ್ನೊಂದು ಪ್ರತಿ ಸ್ಪರ್ಧಿ ಕುಟುಂಬಕ್ಕೆ ನೀಡಿರುವುದು ಇದೇ ಮೊದಲಂತೆ. ಇನ್ನು ಆ ಮುಸ್ಲಿಂ ಕುಟುಂವ ತಮ್ಮ ಹಣವನ್ನು ಹಿಂದೂ ಕುಟುಂಬಕ್ಕೆ ನೀಡಿರುವುದರ ಹಿಂದೆ ಒಂದು ಒಳ್ಳೆಯ ಕಾರಣ ಇದೆ. ಮುಂದೆ ಓದಿ..

ದರ್ಶನ್ - ಪುನೀತ್ ರಾಜ್ ಕುಮಾರ್ ನಡುವೆ TRP ಚಾಲೆಂಜ್ !

ಹಿಂದೂ - ಮುಸ್ಲಿಂ ಕುಟುಂಬ

ಪ್ರತಿ ವಾರದಂತೆ ಈ ವಾರವೂ ಕಲರ್ಸ್ ಕನ್ನಡ ವಾಹಿನಿಯ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಎರಡು ಕುಟುಂಬ ಭಾಗಿಯಾಗಿತ್ತು. ಶಾಹಿನಾ ಎಂಬ ಮುಸ್ಲಿಂ ಕುಟುಂಬದ ಜೊತೆಗೆ ಲೋಕಮ್ಮ ಎಂಬ ಹಿಂದೂ ಕುಟುಂಬ ಆಟ ಶುರು ಮಾಡಿದರು. ಶುರುವಿನಲ್ಲಿ ಲೋಕಮ್ಮ ಅವರಿಗೆ ಪುನೀತ್ ''ಇಲ್ಲಿ ಗೆದ್ದ ಹಣವನ್ನು ಏನು ಮಾಡುತ್ತೀರಾ?'' ಎಂದು ಕೇಳಿದರು. ಆಗ ಲೋಕಮ್ಮ ತಮ್ಮ ಮೊಮ್ಮಗಳಿಗೆ ಕಣ್ಣು ಇಲ್ಲ. ಈ ದುಡ್ಡಿನಲ್ಲಿ ಅವಳಿಗೆ ಕಣ್ಣಿನ ಚಿಕಿತ್ಸೆ ಮಾಡಿಸುತ್ತೇನೆ ಎಂದು ಹೇಳಿದರು.

ಅಂಧ ಬಾಲಕಿ

ಲೋಕಮ್ಮ ಅವರ 6 ವರ್ಷದ ಮೊಮ್ಮಗಳ ಹೆಸರು ದೀಕ್ಷಿತಾ. ದೀಕ್ಷಿತಾಗೆ ಸಣ್ಣ ಮಗು ಇರುವಾಗಲೇ ಆಕೆಯ ಕಣ್ಣುಗಳು ಇಲ್ಲ. ನಾಲ್ಕೈದು ಬಾರಿ ಡಾಕ್ಟರ್ ಬಳಿ ತೋರಿಸಿದ್ದಾರೆ. ಆದರೆ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಹಣ ಕೊಟ್ಟು ಅಲ್ಲಿ ಚಿಕಿತ್ಸೆ ಮಾಡಿಸುವಷ್ಟು ಅನುಕೂಲ ಲೋಕಮ್ಮ ಕುಟುಂಬಕ್ಕೆ ಇಲ್ಲ. ಅದೇ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಬಂದು ಗೆದ್ದ ಹಣದಲ್ಲಿ ಮಗುವಿಗೆ ಚಿಕಿತ್ಸೆ ಮಾಡಿಸುವ ಆಸೆಯನ್ನು ಲೋಕಮ್ಮ ಕುಟುಂಬ ಹೊಂದಿತ್ತು.

ಆಟದಿಂದ ಹೊಸ ಬಂದ ಲೋಕಮ್ಮ ಕುಟುಂಬ

ಮಗುವಿನ ಚಿಕಿತ್ಸೆಗಾಗಿ ಆಟ ಶುರು ಮಾಡಿದ ಲೋಕಮ್ಮ ಕುಟುಂಬ ಸೋಲು ಕಂಡಿತು. ಬರಿ 5000 ರೂಪಾಯಿ ಗೆದ್ದು ಕಾರ್ಯಕ್ರಮದಿಂದ ಹೊರ ಬರಬೇಕಾಯಿತು. ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ದೀಕ್ಷಿತಾಗೆ ಕಣ್ಣಿನ ಚಿಕಿತ್ಸೆ ಮಾಡಿಸಬಹುದು ಎಂಬ ಇಡೀ ಕುಟುಂಬದ ಕನಸು ನೆರೆವೇರದ ಹಾಗೆ ಆಯ್ತು. ಇದರಿಂದ ಇಡೀ ಕುಟುಂಬ ಮತ್ತೆ ದುಖಃ ಪಟ್ಟುಕೊಂಡು ಸುಮ್ಮನಾದರು.

ಗೆದ್ದ ಹಣವನ್ನು ಲೋಕಮ್ಮ ಕುಟುಂಬಕ್ಕೆ ನೀಡಿದ ಶಾಹಿನಾ ಕುಟುಂಬ

''ಆಟ ಮುಂದುವರೆಸಿದ ಶಾಹಿನಾ ಫ್ಯಾಮಿಲಿ ತಮ್ಮ ಉತ್ತಮ ಪ್ರದರ್ಶನದ ಮೂಲಕ 3 ಲಕ್ಷ ರೂಪಾಯಿಗಳನ್ನು ಗೆಲ್ಲುತ್ತಾರೆ. ನಂತರ ಮತ್ತೆ ಪುನೀತ್ ''ಗೆದ್ದ ಹಣವನ್ನು ನೀವು ಏನು ಮಾಡುತ್ತೀರ? ಎಂದು ಕೇಳುತ್ತಾರೆ. ಆಗ ಶಾಹಿನಾ ಅವರು ಹಣವನ್ನು ತಮ್ಮ ಪ್ರತಿ ಸ್ಪರ್ಧಿ ಆಗಿದ್ದ ಲೋಕಮ್ಮ ಫ್ಯಾಮಿಲಿಗೆ ನೀಡುವುದಾಗಿ ಹೇಳುತ್ತಾರೆ. ಒಂದು ಕ್ಷಣ ಪುನೀತ್ ಸಹ ಅವರ ಮಾತು ಹೇಳಿ ಏನು ಹೇಳಬೇಕು ಗೊತ್ತಾಗದೆ ಸುಮನ್ನಾಗಿ ಬಿಡುತ್ತಾರೆ.

ಮಾನವೀಯತೆ ಮೆರೆದ ಶಾಹಿನಾ ಫ್ಯಾಮಿಲಿ

ಆಟದಲ್ಲಿ ಗೆದ್ದ 3 ಲಕ್ಷ ರೂಪಾಯಿ ಹಣವನ್ನು ಶಾಹಿನಾ ಕುಟುಂಬ ಲೋಕಮ್ಮ ಕುಟುಂಬಕ್ಕೆ ದೀಕ್ಷಿತಾಳ ಕಣ್ಣಿನ ಚಿಕಿತ್ಸೆಗೆ ನೀಡುತ್ತಾರೆ. ಹಣ ನೀಡಿದ ಬಳಿಕ ಮಾತನಾಡಿದ ಶಾಹಿನಾ ಫ್ಯಾಮಿಲಿ '' ಮಗುವಿಗೆ ಕಣ್ಣು ಬರಲಿ ಅಂತ ನಾವು ಈ ಹಣವನ್ನು ಅವರಿಗೆ ನೀಡುತ್ತೇವೆ. ಮಗುವನ್ನು ನೋಡಿ ನಮಗೆ ತುಂಬ ದುಖಃವಾಯ್ತು'' ಅಂತ ಹೇಳಿದರು. ಬಳಿಕ ಪುನೀತ್ ಸಹ ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದರು. ಈ ಒಂದು ಕ್ಷಣ ಇಡೀ ಕಾರ್ಯಕ್ರಮದ ತುಂಬ ಅದೇನೋ ಸಂತೋಷ ತುಂಬಿತು. ಜಾತಿ, ಧರ್ಮ ಅಂತ ಜಗಳ ಮಾಡುವವರಿಗೆ ಈ ಒಂದು ಘಟನೆ ಕಣ್ಣು ತೆರೆಸಿದರೆ ಸಾಕು.

English summary
Muslim family give their prize money to Hindu family in Puneeth Rajkumar's 'Family Power' reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada