ಸಣ್ಣ ಬ್ರೇಕ್ ನಂತರ 'ಪುಟ್ಟಕ್ಕನ ಮಕ್ಕಳು' ಜೊತೆ ಭುವನ್ ಅವತಾರದಲ್ಲಿ ಬಂದ 'ಮುತ್ತುಮಾಮ'!

By ಅನಿತಾ ಬನಾರಿ

ಬಹಳಷ್ಟು ಕನ್ನಡ ಕಿರುತೆರೆಯ ಕಲಾವಿದರು ವಿವಿಧ ಧಾರಾವಾಹಿಗಳೊಂದಿಗೆ ನಟನಾರಂಗಕ್ಕೆ ತಮ್ಮ ಪುನರಾಗಮನವನ್ನು ಮಾಡುತ್ತಿದ್ದಾರೆ. ಈ ಗುಂಪಿಗೆ ಇತ್ತೀಚೆಗಷ್ಟೆ ನಟ ಸೂರಜ್ ಹೊಳಲು ಸೇರ್ಪಡೆಗೊಂಡಿದ್ದಾರೆ. ನಟ ತನ್ನ ಹೊಸ ಪ್ರಾಜೆಕ್ಟ್‌ನೊಂದಿಗೆ ಗ್ಯಾಪ್‌ನ ನಂತರ ಕಿರುತೆರೆಗೆ ಮರಳಿದ್ದಾರೆ.

ಸಂಜನಾ ಬುರ್ಲಿ ಮತ್ತು ಧನುಷ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಜೀ ಕನ್ನಡ ವಾಹಿನಿ ವೀಕ್ಷಕರ ನೆಚ್ಚಿನ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಈಗ ಸೂರಜ್ ಈ ಬಳಗ ಸೇರಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಸೂರಜ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಂತೆಯೇ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲವನ್ನು ಹೊಂದಿರುವ ಭುವನ್ ಎಂಬ ಪಾತ್ರದಲ್ಲಿ ಸೂರಜ್ ಅಭಿನಯಿಸುತ್ತಿದ್ದಾರೆ.

Muthumama Fame Sooraj Holalu came to entertain as Bhuvan In Puttakkana Makkalu

ಚಂದ್ರು ಸ್ನೇಹಿತ ಭುವನ್

ಕಥೆಯ ಪ್ರಕಾರ, ಯುಪಿಎಸ್ ಸಿ ಪರೀಕ್ಷಾ ಕೇಂದ್ರದಲ್ಲಿ ಸ್ನೇಹಾ ಮತ್ತು ಭುವನ್ ಭೇಟಿಯಾಗುತ್ತಾರೆ. ಭುವನ್ ಸ್ನೇಹಾಳ ಸಹೋದರ ಚಂದ್ರು ಅವರ ಆತ್ಮೀಯ ಸ್ನೇಹಿತನಾಗಿರುತ್ತಾನೆ. ಸ್ನೇಹಾ ಭುವನ್‌ನ ಮಹತ್ವಾಕಾಂಕ್ಷೆಯಿಂದ ಪ್ರಭಾವಿತಳಾಗಿದ್ದರೆ, ಕಂಠಿ ಅವರ ಬಂಧವನ್ನು ಕಂಡು ಅಸೂಯೆ ಪಡುತ್ತಾಳೆ. ಪ್ರಭಾವಿ ಕುಟುಂಬದಿಂದ ಬಂದವರಾಗಿದ್ದರೂ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಅದನ್ನು ಅನುಸರಿಸುತ್ತಿರುವುದಕ್ಕಾಗಿ ಸ್ನೇಹಾ, ಭುವನ್ ಅನ್ನು ಶ್ಲಾಘಿಸುತ್ತಾಳೆ.

ಸ್ನೇಹಳತ್ತ ವಾಲಿದ ಭುವನ್

ಮತ್ತೊಂದೆಡೆ, ಸ್ನೇಹವನ್ನು ಉಳಿಸಿಕೊಳ್ಳುವ ಸಲುವಾಗಿ, ಸ್ನೇಹಾಳನ್ನು ಕಂಠಿಯಿಂದ ದೂರವಿಡಲು, ಸ್ನೇಹಾ ಹಾಗೂ ಭುವನ್‌ ಮದುವೆಯಾದರೆ ಒಳಿತೆಂದು ಚಂದ್ರು ನಿರ್ಧರಿಸುತ್ತಾನೆ. ಪುಟ್ಟಕ್ಕನಿಗೂ ಅದನ್ನೇ ತಿಳಿಸುತ್ತಾನೆ. ಅಲ್ಲದೇ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಭುವನ್ ಪಾತ್ರದ ಪ್ರವೇಶವು ಕತೆಗೆ ಪ್ರಮುಖ ತಿರುವು ತರುವುದು ಖಚಿತವಾಗಿದೆ.

ಕಿರುತೆರೆ ಹೊಸದೇನಲ್ಲ!

ಅಂದ ಹಾಗೇ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕುಲವಧು" ಧಾರಾವಾಹಿಯ ಗೌರವ್ ಆಗಿ ಕಿರುತೆರೆಗೆ ಕಾಲಿಟ್ಟ ಸೂರಜ್ ಹೊಳಲು ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ನಂತರ ಜೀ ಕನ್ನಡ ವಾಹಿನಿಯ 'ಯಾರೇ ನೀ ಮೋಹಿನಿ' ಧಾರಾವಾಹಿಯ ಮುತ್ತುಮಾಮನಾಗಿ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿದ್ದರು. ಸೂರಜ್ ಹೊಳಲು ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚಿದ್ದಾರೆ.

Muthumama Fame Sooraj Holalu came to entertain as Bhuvan In Puttakkana Makkalu

ಮಿಥುನ್ ಆಗಿ ಎಂಟ್ರಿ ಕೊಡಲಿದ್ದಾರೆ

ಇದರ ಜೊತೆಗೆ ಮಗದೊಂದು ಸಂತಸದ ವಿಚಾರವೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಗೃಹಪ್ರವೇಶ'ದಲ್ಲಿ ಮಿಥುನ್ ಆಗಿ ನಟಿಸುವ ಮೂಲಕ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಒಟ್ಟಿನಲ್ಲಿ ಸೂರಜ್ ಹೊಳಲು "ಯಾರೇ ನೀ ಮೋಹಿನಿ" ಧಾರಾವಾಹಿಯ ನಂತರ ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಸೂರಜ್ ಇದೀಗ ಮತ್ತೆ ಬಣ್ಣ ಹಚ್ಚುತ್ತಿರುವುದು ವೀಕ್ಷಕರಿಗೆ ಖುಷಿ ತಂದಿದೆ.

More from Filmibeat

English summary
Muthumama Fame Sooraj Holalu came to entertain as Bhuvan In Puttakkana Makkalu, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X