ಆ ವಿಡಿಯೋ ಲೀಕ್ ಆದಾಗ, ಅಮ್ಮ ನನಗೆ ಪೊರಕೆಯಲ್ಲಿ ಹೊಡೆದಿದ್ದರು - ಕರಾಳ ದಿನ ನೆನೆದು ಸೋನು ಗೌಡ ಭಾವುಕ
ಪ್ರೀತಿಯ ಹೆಸರಿನಲ್ಲಿ ಹಲವರು ಹಲವರನ್ನು ವಂಚಿಸುತ್ತಿದ್ಧಾರೆ. ಸುಂದರವಾದ ಹುಡುಗಿಯರನ್ನು ತಮ್ಮ ಖೆಡ್ಡಾಗೆ ಬೀಳಿಸಿಕೊಂಡು ಮಾಡಬಾರದ ಅನಾಚಾರವನ್ನೆಲ್ಲಾ ಮಾಡುತ್ತಿದ್ದಾರೆ. ಯುವತಿಯರನ್ನು ನಂಬಿಸಿ ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡುವವರ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಡಿಕೆ ಈಡೇರದಿದ್ದಾಗ ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಇನ್ನು ನಂಬಿದವರಿಂದಲೇ ದ್ರೋಹ ಆದಾಗ ಆ ನೋವು ಕೇವಲ ವ್ಯಕ್ತಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇಡೀ ಕುಟುಂಬವೇ ತತ್ತರಿಸಿ ಹೋಗುತ್ತೆ. ತೀವ್ರವಾದ ಖಿನ್ನತೆಗೆ ತಳ್ಳುತ್ತೆ. ಪ್ರೀತಿ, ನಂಬಿಕೆ ಮತ್ತು ವಂಚನೆಯ ಈ ಸುಳಿಯ ನಡುವೆ ಸಿಲುಕಿ ಹಿಂದೊಮ್ಮೆ ನರಕಯಾತನೆ ಅನುಭವಿಸಿದವರಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು.

ಹೌದು, ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು, ''ಬಿಗ್ ಬಾಸ್'' ಮನೆಗೆ ಕೂಡ ಹೋಗಿ ಬಂದ ಸೋನು ಗೌಡ ಅವರ ಖಾಸಗಿ ವಿಡಿಯೋವೊಂದು ಕೆಲ ವರ್ಷಗಳ ಹಿಂದೆ ವೈರಲ್ ಆಗಿತ್ತು.
ಇನ್ನೂ ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಹಲವರು ಆ ವಿಡಿಯೋ ನನ್ನದಲ್ಲ ಎಂಬ ವಾದ ಮಾಡುತ್ತಾರೆ. ತಂತ್ರಜ್ಞಾನದ ದುರ್ಬಳಕೆ ಎನ್ನುತ್ತಾರೆ. ಆದರೆ.. ಸೋನು ಗೌಡ ಆ ವಿಡಿಯೋ ತನ್ನದೇ ಎಂದು ಹಿಂದೆ ಒಪ್ಪಿಕೊಂಡಿದ್ದರು. ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಆ ವಿಡಿಯೋ ಹೊರ ಬಂದಿದ್ಹೇಗೆ ಎಂದು ಹೇಳಿ ಕಣ್ಣೀರನ್ನು ಕೂಡ ಹಾಕಿದ್ದರು.
ಇಂಥಾ ಸೋನು ಗೌಡ ಕಳೆದ ಕೆಲ ದಿನಗಳಿಂದ ತಮ್ಮ ಹಳೆಯ ಗಾಯವನ್ನು ಕೆದಕುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆ ವೈರಲ್ ವಿಡಿಯೋದ ಸುತ್ತ ಮುತ್ತ ನಡೆದಿದ್ದ ವಿದ್ಯಮಾನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದರ ಒಂದು ಭಾಗವಾಗಿ ಆ ವಿಡಿಯೋದಿಂದ ತಮ್ಮ ಕುಟುಂಬದ ಮೇಲಾದ ಪರಿಣಾಮದ ಕುರಿತು ಸೋನು ಗೌಡ ಮಾತನಾಡಿದ್ದಾರೆ.
ಈ ಕುರಿತು ವಿಡಿಯೋ ಹಂಚಿಕೊಂಡಿರುವ ಸೋನು ಗೌಡ ವಿಡಿಯೋ ವೈರಲ್ ಆದಾಗ, ನನಗೆ ಹೇಳಲಾರದಷ್ಟು ನೋವಾಗಿತ್ತು ಎಂದಿದ್ದಾರೆ. ನನ್ನ ವೈಯಕ್ತಿಕ ನೋವಿಗಿಂತಲೂ ಹೆಚ್ಚಾಗಿ, ನನ್ನ ಅಮ್ಮ ಮತ್ತು ತಮ್ಮನಿಗೆ ಈ ವಿಷಯ ಗೊತ್ತಾದ್ರೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಭಯ ನನ್ನನ್ನು ಆಗ ಕಾಡುತ್ತಿತ್ತು ಎಂದು ಹೇಳಿರುವ ಸೋನು ಶ್ರೀನಿವಾಸ್ ಗೌಡ ಆ ಸಮಯದಲ್ಲಿ ನಾನು ಅವರಿಬ್ಬರ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ನನ್ನ ತಮ್ಮ ಆಗ ನನಗೆ ತುಂಬಾನೇ ಸಪೋರ್ಟ್ ಮಾಡಿದ. ಹೋಗ್ಲಿ ಬಿಡು ನಿನ್ನದೇನು ತಪ್ಪಿಲ್ಲ. ನಿನ್ನ ನಂಬಿಕೆಗೆ ಮೋಸ ಆಗಿದೆ ಅಷ್ಟೇ ಎಂದು ಹೇಳಿದ್ದ ಎಂದು ನೆನಪು ಮಾಡಿಕೊಂಡಿದ್ದಾರೆ. ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ, ಬಟ್ಟೆ ಮೇಲೆ ಮುಳ್ಳು ಬಿದ್ದರೂ, ಹರಿಯೋದು ಬಟ್ಟೆನೆ ಅನ್ನೋ ರೀತಿ ಆಗೋಯ್ತು. ಏನಾದರೂ ಆಗಲಿ, ಹುಡುಗಿಯರದ್ದೇ ತಪ್ಪು ಅಂತಾರೆ ಎಂದು ಹೇಳಿರುವ ಸೋನು ಗೌಡ ನೀನೇ ಸರಿಯಿಲ್ಲ ಅಂತ ಚುಚ್ಚಿ ಚುಚ್ಚಿ ಮಾತಾಡ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ಅಮ್ಮನಿಗಂತೂ ನಮ್ಮ ಊರಲ್ಲಿ ತುಂಬಾ ಕೆಟ್ಟ ಕೆಟ್ಟದಾಗಿ ಮಾತಾಡಿದ್ದಾರೆ ಎಂದು ಹೇಳಿರುವ ಸೋನು ಗೌಡ, ನನ್ನ ಅಮ್ಮ ಇದೆಲ್ಲಾ ಹೇಗೆ ಸಹಿಸಿಕೊಳ್ತಾರೆ, ಅನ್ನೋದೇ ದೊಡ್ಡ ಚಿಂತೆ ಆಗಿತ್ತು, ಆಗ ನನ್ನ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿ, ಹಗ್ ಮಾಡಿ ಅತ್ತು ಬಿಡಬೇಕು ಎನ್ನುವುದಷ್ಟೇ ನನ್ನ ಮನದಲ್ಲಿತ್ತು ಎಂದಿದ್ದಾರೆ.
ಹೇಗೋ ಆ ನಂತರ ಕನ್ವಿನ್ಸ್ ಮಾಡಿ ಅಮ್ಮನನ್ನು ಬೆಂಗಳೂರಿಗೆ ಕರೆಸಿಕೊಂಡೆ. ಬಿಕ್ಕಿ ಬಿಕ್ಕಿ ಅತ್ತುಕೊಂಡು ಏನೇನ್ ಆಯ್ತು ಅಂತ ಎಲ್ಲವನ್ನೂ ವಿವರವಾಗಿ ಹೇಳಿದೆ ಎಂದು ಹೇಳಿರುವ ಸೋನು ಗೌಡ, ನಿಜವಾಗಲೂ ನನ್ನ ಅಮ್ಮ ಅವತ್ತು ಪೊರಕೆಯಿಂದ ನನಗೆ ಹೊಡೆದರು ಎಂದು ಹೇಳಿದ್ದಾರೆ. ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ಈ ಮೂಲಕ ನೆನೆದಿದ್ದಾರೆ.
` ` ` ` ` ` ` ` ` ` `


Click it and Unblock the Notifications