ಹಿಜಾಬ್ ಧರಿಸದಿರುವುದಕ್ಕೆ ಆಕ್ರೋಶ ; ನನ್ನ ಬಟ್ಟೆ, ನನ್ನ ಇಷ್ಟ- ಬಿಗ್ ಬಾಸ್ ಸ್ಫರ್ಧಿ ಕೆಂಡ..ಕೆಂಡ

ಕಾಲ ಎಷ್ಟೇ ಬದಲಾದರೂ.. ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬಂದಿದ್ದರೂ.. ಇವತ್ತು ಕೂಡ ಮಹಿಳೆಯ ವ್ಯಕ್ತಿತ್ವವನ್ನು ಆಕೆಯ ಹಾಕಿಕೊಳ್ಳುವ ಬಟ್ಟೆಯಿಂದ ಹಲವರು ನಿರ್ಧಾರ ಮಾಡುತ್ತಾರೆ. ತುಂಡು ಉಡುಗೆ ನಮ್ಮದಲ್ಲ. ಬದಲಿಗೆ ವಿದೇಶಿ ಪರಿಕಲ್ಪನೆ.. ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಹೇಳುತ್ತಾರೆ. ಮಹಿಳೆಯರ ಮೇಲೆ ಆಗುತ್ತಿರುವ ಅ*ತ್ಯಾಚಾರಕ್ಕೆ ಅವರು ಧರಿಸುವ ಪ್ರಚೋದನಾತ್ಮಕ ಬಟ್ಟೆಗಳೇ ಕಾರಣ ಎಂಬ.

ವಾದವನ್ನು ಕೂಡ ಹಲವರು ಮಾಡುತ್ತಾರೆ. ಉಡುಪಿನ ಆಯ್ಕೆಯನ್ನು ವ್ಯಕ್ತಿಯ ಸ್ವಾತಂತ್ರ್ಯ ಎಂದು ನೋಡದೇ ಸಂಸ್ಕ್ರತಿ ಮತ್ತು ಗೌರವದ ಮಾನದಂಡವನ್ನಾಗಿ ನೋಡುತ್ತಾರೆ. ಇನ್ನೂ... ಚಿತ್ರರಂಗದಲ್ಲಿ ಈಗೀಗ ಅಂಗಾಗ ಪ್ರದರ್ಶನ ಮಾಡುವುದನ್ನೇ ಸಾಧನೆ ಎಂದು ಹಲವರು ಅಂದುಕೊಂಡಿದ್ದಾರೆ. ಇದರಿಂದ ಕೂಡ ಆಗಾಗ ಮಹಿಳೆಯರು ಹಾಕಿಕೊಳ್ಳುವ ಬಟ್ಟೆಯ ಕುರಿತು ಚರ್ಚೆ ನಡೆಯುತ್ತೆ. ವಾದ ಪ್ರತಿವಾದ ಶುರುವಾಗಿ ವಿವಾದವಾಗುತ್ತೆ. ಮನಶಾಂತಿ ಕೂಡ ಹಾಳಾಗುತ್ತೆ. ಉದಾಹರಣೆಗೆ ಸನಾ ಮಕ್ಬೂಲ್ ಅವರ ವಿಚಾರವನ್ನೇ ತೆಗೆದುಕೊಳ್ಳಿ.

My Wish My Choice Bigg Boss OTT 3 Winner Sana Makbul Fires Back at Hijab Trolls with Bold Remark

ಹೌದು, ಸನಾ ಮಕ್ಬೂಲ್.. ಹಿಂದಿ ಕಿರುತೆರೆಯ ಚೆಲುವೆ. ''ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ''.. ''ವಿಶ್''.. ''ಅರ್ಜುನ್''.. ಧಾರಾವಾಹಿಯಲ್ಲಿ ಅಭಿನಯಿಸಿರುವ ಸನಾ ತೆಲುಗಿನ ''ದಿಕ್ಕುಲು ಚೂಡಕು ರಾಮಯ್ಯ''.. ''ಮಾಮಾ ಓ ಚಂದಮಾಮ''.. ಮತ್ತು ತಮಿಳಿನಲ್ಲಿ ''ರಂಗೂನ್'' ಚಿತ್ರಗಳಲ್ಲಿ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇನ್ನು ''ಖತ್ರೋನ್ ಕೆ ಕಿಲಾಡಿ''ಯ ಹನ್ನೊಂದನೇ ಸೀಸನ್‌ನಲ್ಲಿ ಕೂಡ ಕಾಣಿಸಿಕೊಂಡಿದ್ದ ಸನಾ ''ಬಿಗ್ ಬಾಸ್'' ಓಟಿಟಿಯ ಮೂರನೇ ಸೀಸನ್‌ನ ವಿನ್ನರ್ ಕೂಡ ಹೌದು.

ಇಂಥಾ ಸನಾ ಮಕ್ಬೂಲ್ ಅವರನ್ನು ಆಗಾಗ ಹಲವರು ಹಿಜಾಬ್ ವಿಚಾರಕ್ಕೆ ಕಾಲೆಳೆಯುತ್ತಾರೆ. ಟ್ರೋಲ್ ಮಾಡುತ್ತಾರೆ. ಇಸ್ಲಾಂ ಧರ್ಮಕ್ಕೆ ಕಪ್ಪುಚುಕ್ಕೆ ಎಂದು ಕೆಂಡ ಕಾರುತ್ತಾರೆ. ತಮ್ಮ ವಿರುದ್ಧ ವ್ಯಕ್ತವಾಗುವ ಈ ಅಭಿಪ್ರಾಯಗಳ ಬಗ್ಗೆ ಸನಾ ಈಗ ಮಾತನಾಡಿದ್ದಾರೆ. ನನ್ನ ಬದುಕು, ನನ್ನ ಹಕ್ಕು ಎಂದು ಕಿಡಿ ಕಾರಿದ್ದಾರೆ.

ಈ ಕುರಿತು ''ಫ್ರೀ ಪ್ರೆಸ್ ಜರ್ನಲ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸನಾ ಮಕ್ಬೂಲ್ ಯಾವ ವ್ಯಕ್ತಿ ಯಾವ ಉಡುಪು ಧರಿಸಬೇಕು ಎನ್ನುವುದು ಅವರ ಅವರ ವ್ಯೆಯಕ್ತಿಕ ಅಭಿಪ್ರಾಯ ಮತ್ತು ನಿರ್ಧಾರ ಎಂದು ಹೇಳಿದ್ದಾರೆ. ಬೇರೆಯವರ ಬಟ್ಟೆಯ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

My Wish My Choice Bigg Boss OTT 3 Winner Sana Makbul Fires Back at Hijab Trolls with Bold Remark

ನನ್ನ ಅಕ್ಕ ಹಿಜಾಬ್ ಧರಿಸುತ್ತಾಳೆ, ಹಿಜಾಬ್ ಇಲ್ಲದೇ ಅವಳು ಮನೆಯಾಚೆ ಬರುವುದಿಲ್ಲ, ನನ್ನ ಅಕ್ಕನನ್ನು ನೀವು ಎಂದಿಗೂ ಹಿಜಾಬ್ ಇಲ್ಲದೇ ನೋಡಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಸನಾ ಮಕ್ಬೂಲ್ ಹಿಜಾಬ್ ಧರಿಸುವುದು ನನ್ನ ಅಕ್ಕನಿಗೆ ಇಷ್ಟ ಎಂದು ಹೇಳಿರುವ ಸನಾ ನನ್ನ ಇನ್ನೊಬ್ಬ ಸೋದರಿ ಕೂಡ ಹಿಜಾಬ್ ಧರಿಸುತ್ತಾಳೆ, ಆದರೆ ನಾನು ಭಿನ್ನ ಹಿಜಾಬ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ. ನನ್ನ ನಿರ್ಧಾರದ ಮೇಲೆ ನನ್ನ ವ್ಯಕ್ತಿತ್ವವನ್ನು ನೀವ್ಯಾಕೇ ನಿರ್ಧಾರ ಮಾಡುವ ಪ್ರಯತ್ನ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಯಾವ ಬಟ್ಟೆ ಹಾಕಬೇಕು ಯಾವ ಬಟ್ಟೆ ಹಾಕಬಾರದು ಎನ್ನುವುದು ನನ್ನ ಆಯ್ಕೆ ನಾನು ಸ್ವಿಮ್ ಸೂಟ್ ಅಥವಾ ಬಿಕಿನಿ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋದರೂ ಕೂಡ ಅದು ನನ್ನ ನಿರ್ಧಾರ ಆಗಿರುತ್ತೆ ಎಂದು ಹೇಳಿರುವ ಸನಾ ಬಟ್ಟೆಯ ಬಗ್ಗೆ ಜನ ಮಾತನಾಡುವುದೇಕೆ ಎನ್ನುವುದೇ ನನಗೆ ಅರ್ಥವಾಗದ ವಿಷಯ ಎಂದು ಕೂಡ ಹೇಳಿದ್ದಾರೆ.

ಸದ್ಯ ಸನಾ ಮಕ್ಬೂಲ್ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇನ್ನುಳಿದಂತೆ ಸನಾ ಸದ್ಯ ''ಕಾದಲ್ ಕಂಡೀಷನ್ಸ್ ಅಪ್ಲೈ'' ಎಂಬ ತಮಿಳು ಚಿತ್ರ ಮತ್ತು ''ನೆಮೆಸಿಸ್'' ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ಧಾರೆ.

More from Filmibeat

English summary
Sana Makbul isn't holding back! The Bigg Boss OTT 3 star fires back at trolls questioning her wardrobe and hijab choices. Click to see her explosive reply.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X