Na Ninna Bidalare; ಒಂದೇ ತಿಂಗಳಲ್ಲಿ ನಂಬರ್ 1 ಸ್ಥಾನಕ್ಕೇರಿದ 'ನಾ ನಿನ್ನ ಬಿಡಲಾರೆ'

By ಎಸ್ ಸುಮಂತ್

ಜೀ ಕನ್ನಡದಲ್ಲಿ ಹಲವು ಹೊಸ ಧಾರಾವಾಹಿಗಳು ಶುರುವಾಗಿವೆ. ಇರುವ ಧಾರಾವಾಹಿಗಳ ನಡುವೆ ಹೊಸ ಧಾರಾವಾಹಿಗಳು ಕಾಂಪಿಟೇಷನ್ ನೀಡುತ್ತಿವೆ. ವೀಕ್ಷಕರ ಮನಸ್ಸಲ್ಲಿ ಸ್ಥಾನ ಪಡೆಯುತ್ತಿವೆ. ಅದರಲ್ಲಿ 'ನಾ ನಿನ್ನ ಬಿಡಲಾರೆ' ಕೂಡ ಒಂದು.

'ನಾ ನಿನ್ನ ಬಿಡಲಾರೆ' ಧಾರಾವಾಹಿ ಇತ್ತೀಚೆಗಷ್ಟೇ ಶುರುವಾದದ್ದು. ಆದರೆ ತುಂಬಾ ಇಂಟ್ರೆಸ್ಟಿಂಗ್ ಕೂಡ ಇದೆ. ಪಾತ್ರವರ್ಗಗಳು ಕೂಡ ಗಮನ ಸೆಳೆಯುತ್ತವೆ. ಅದರಲ್ಲೂ ದುರ್ಗಾ ಹುಡುಕುತ್ತಿರುವ ಅಕ್ಕ ಅಂಬಿಕಾನೆ ಎಂಬುದು ಗೊತ್ತಾಗುವ ಎಪಿಸೋಡ್ ಗಾಗಿ ವೀಕ್ಷಕರು ಕಾಯ್ತಿದ್ದಾರೆ.

Na Ninna Bidalare becomes the most-watched serial on kannada TV

ದುರ್ಗಾಳ ಅಕ್ಕನೇ ಅಂಬಿಕಾ. ಇವರ ತಂದೆ ಪೌರೋಹಿತ್ಯ ಮಾಡ್ತಾ ಇದ್ರು. ಆದ್ರೆ ಅಂದು ಮಾಳವಿಕಾಳ ತಾಯಿಯ ಮಾಂತ್ರಿಕ ಶಕ್ತಿಯಿಂದ ಅಂದು ಅಂಬಿಕಾಳನ್ನ ಕಳೆದುಕೊಳ್ಳಬೇಕಾಯ್ತು. ಅಂಬಿಕಾಳ ಸಾವಿನಿಂದ ದುರ್ಗಾ ಒಂಟಿಯಾದಳು, ಹಿತಾ ಅಪ್ಪನಿಂದ ಅಂತರ ಕಾಯ್ದುಕೊಂಡಳು. ಈಗ ಎಲ್ಲವೂ ಸರಿಯಾಗಬೇಕೆಂದರೆ ದುರ್ಗಾಳೆ ಹಿತಾಗೆ ತಾಯಿಯಾಗಬೇಕಿದೆ.

ಮೊದಲ ಸ್ಥಾನಕ್ಕೇರಿದ ಧಾರಾವಾಹಿ

ಜೀ ಕನ್ನಡದಲ್ಲಿ ಈಗಾಗಲೇ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಎಲ್ಲವೂ ವೀಕ್ಷಕರ ಮನಸ್ಸು ಗೆದ್ದಿರುವ ಧಾರಾವಾಹಿಗಳೇ ಆಗಿವೆ. ಆದರೆ ಇದೀಗ ಆ ಎಲ್ಲಾ ಧಾರಾವಾಹಿಗಳನ್ನ ಹಿಂದಿಕ್ಕಿದ ಧಾರಾವಾಹಿ ಎಂದರೆ ಅದು 'ನಾ ನಿನ್ನ ಬಿಡಲಾರೆ'. ಪ್ರಸಾರವಾಗಿರೋದು ಇನ್ನು 22 ಎಪಿಸೋಡ್ ಮಾತ್ರ. ಆದರೂ ನಂಬರ್ ಒನ್ ಸ್ಥಾನದಲ್ಲಿದೆ. 2ನೇ ಸ್ಥಾನಕ್ಕೆ 'ಶ್ರಾವಣಿ ಸುಬ್ರಮಣ್ಯ' ಬಂದಿದೆ.

ದುರ್ಗಾ & ಹಿತಾಗೆ ಒಂದೇ ಕನಸು

ಹಿತಾ ಇನ್ನು ಚಿಕ್ಕವಳು. ಆದರೆ ತಾನು ತುಂಬಾ ಪ್ರೀತಿಸುತ್ತಿದ್ದ ತಾಯಿ ಕಣ್ಣ ಮುಂದೆಯೇ ಸುಟ್ಟು ಹೋಗಿದ್ದನ್ನ ಈಗಲೂ ಅರಗಿಸಿಕೊಳ್ಳುತ್ತಿಲ್ಲ. ಅಪ್ಪನೇ ಅಮ್ಮನನ್ನ ಕಾಪಾಡಲಿಲ್ಲ ಎಂಬ ಕೋಪ ಅವಳಿಗೆ. ಮಾಯಾಳನ್ನ ಅಮ್ಮನಾಗಿ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹಿತಾಗೆ ಅಮ್ಮನ ಕೊನೆ ಕ್ಷಣ, ಆ ಚೀರಾಟದ ಕನಸು ಕಾಡುತ್ತಲೇ ಇರುತ್ತದೆ. ಹಾಗೇ ದುರ್ಗಾಗೆ ಪ್ರತಿದಿನವೂ ದುರ್ಗಾಳ ಚೀರಾಟದ ಕನಸು ಬೀಳುತ್ತಲೇ ಇರುತ್ತದೆ. ಆ ಹೆಂಗಸು ಯಾರು..? ನನಗೆ ಯಾಕೆ ಆ ಕನಸು ಬೀಳುತ್ತದೆ ಎಂಬುದೇ ಅವಳಿಗೆ ತಿಳಿಯಲು ಸಾಧ್ಯವಾಗುತ್ತಿಲ್ಲ.

ಅಕ್ಕ - ತಂಗಿಗೆ ಒಂದೇ ಟ್ಯಾಟೂ

ಅಂಬಿಕಾ ಅಂದು ಜಾತ್ರೆಯಲ್ಲಿ ಕಳೆದೋದವಳು ಈಗ ಆತ್ಮವಾಗಿದ್ದಾಳೆ. ತನ್ನ ಮಗಳಿಗೆ ಮಾಯಾ ಕಾಟ ಕೊಡ್ತಾ ಇರೋದು ಆ ಆತ್ಮಕ್ಕೆ ಶಾಂತಿ ಸಿಗುತ್ತಿಲ್ಲ. ಹಾಗೇ ಮುತ್ತೈದೆಯಾಗಿ ಇರುವುದು ಕೂಡ ಅವಳ ಆತ್ಮಕ್ಕೆ ಇನ್ನಷ್ಟು ಬಲ ತುಂಬಿದೆ. ಯಾರಿಗೂ ಕಾಣದ ಅಂಬಿಕಾಳ ಆತ್ಮ ದುರ್ಗಾಗೆ ಕಾಣಿಸ್ತಾ ಇದೆ. ಅಂಬಿಕಾಳೆ ತನ್ನ ಅಕ್ಕ ಎಂದು ಕಂಡು ಹಿಡಿಯಲು ಈಗ ತನ್ನಂತೆ ಇರುವ ಟ್ಯಾಟೂ ಕಾಣಬೇಕಿದೆ.

ಟ್ಯಾಟೂ ನೋಡ್ತಾಳಾ ದುರ್ಗಾ?

ದುರ್ಗಾ ಹಾಗೂ ಅಂಬಿಕಾಳ ಅಪ್ಪ ತನ್ನಿಬ್ಬರು ಹೆಣ್ಣು ಮಕ್ಕಳ ಕುತ್ತಿಗೆ ಭಾಗಕ್ಕೆ ಅರ್ಧ ಚಂದ್ರಾಕಾರಣ ಟ್ಯಾಟೂ ಹಾಕಿಸಿದ್ದಾರೆ. ಅಕ್ಕ ತಂಗಿಯರಿಬ್ಬರು ನಿಂತರೆ ಅದು ಪೂರ್ತಿ ಚಂದ್ರನ ಆಕಾರ ಕಾಣಿಸುತ್ತದೆ. ಅಂಬಿಕಾ ಕುತ್ತಿಗೆ ಭಾಗದಲ್ಲೂ ಈ ಟ್ಯಾಟೂ ಇದೆ. ಆದರೆ ಸದಾ ಕೂದಲನ್ನು ಬಿಡುವ ಅಂಬಿಕಾ ಕುತ್ತಿಗೆಯಲ್ಲಿ ಆ ಟ್ಯಾಟೂ ಕಾಣುವುದೇ ದುರ್ಗಾಗೆ ದೊಡ್ಡ ಸಾಹಸದ ಕೆಲಸವಾಗುತ್ತದೆ. ಟ್ಯಾಟೂ ಕಂಡಾಗ ಇಬ್ಬರ ಸಮಾಗಮವಾವೋದು ಗ್ಯಾರಂಟಿ. ಆ ದಿನಕ್ಕೋಸ್ಕರ ವೀಕ್ಷಕರು ಕಾಯ್ತಾ ಇದ್ದಾರೆ.

More from Filmibeat

English summary
The new serial Na Ninna Bidalare has reached number one in TRP ratings;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X