ಆತ್ಮವಾಗಿ ಕಾಡುವ ಅಂಬಿಕಾ ರಿಯಲ್ ಲೈಫ್‌ನಲ್ಲಿ ಎಷ್ಟು ರೊಮ್ಯಾಂಟಿಕ್ ಗೊತ್ತಾ?
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕಾಳ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿರುವುದು ನೀತಾ ಅಶೋಕ್. ಕುತಂತ್ರಿಗಳ ಕುತಂತ್ರಕ್ಕೆ ಬಲಿಯಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಈಗ ಆತ್ಮವಾಗಿ ಅಲೆಯುತ್ತಿದ್ದರು ತನ್ನ ಮಗಳದ್ದೇ ಚಿಂತೆಯಾಗಿದೆ. ಗಂಡನ ಬಗ್ಗೆಯೂ ಕಾಳಜಿ ಇದೆ. ಆದರೆ ರಿಯಲ್ ಲೈಫ್‌ನಲ್ಲಿ ಬೇರೆಯಾಗಿಯೇ ಕಾಣಿಸ್ತಾರೆ ನೀತಾ ಅಶೋಕ್.
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕಾ ದೆವ್ವವಾಗಿ ಆಕ್ಟ್ ಮಾಡಿದ್ರು ಕೂಡ ಆ ದೆವ್ವವೇ ಎಲ್ಲರ ಮನಸ್ಸನ್ನ ಗೆದ್ದಿದ್ದಾರೆ. ಸದಾ ಸೀರೆಯುಟ್ಟು, ಅಂದವನ್ನ ಹೆಚ್ಚಿಸಿದ್ದಾರೆ. ತನ್ನ ಮಗಳಿಗಾಗಿ ಹೋರಾಡುವ, ಸದಾ ಕಾಲ ಒಬ್ಬಂಟಿಯಾಗಿ ಏನನ್ನೋ ಯೋಚಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸೀರಿಯಲ್‌ನಲ್ಲಿ ದೆವ್ವದ ಪಾತ್ರ
' ನಿನ್ನ ಬಿಡಲಾರೆ'ಸೀರಿಯಲ್‌ನಲ್ಲಿ ಆತ್ಮವಾಗಿ ಕಾಡುವ ಈ ಅಂಬಿಕಾ ರಿಯಲ್ ಲೈಫ್‌ನಲ್ಲಿ ಬೇರೆ ರೀತಿಯಾಗಿಯೇ ಗಮನ ಸೆಳೆಯುತ್ತಾರೆ. ಅದುವೆ ರೊಮ್ಯಾಂಟಿಕ್ ಆಗಿ. ಸೋಷಿಯಲ್ ಮೀಡಿಯಾದಲ್ಲಿ ನೀತಾ ತಮ್ಮ ಪತಿ ಜೊತೆಗಿರುವ ಹಲವು ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿರುವ ವಿಡಿಯೋಗಳೇ ಹೆಚ್ಚಾಗಿವೆ. ಆನಿವರ್ಸರಿ, ಬರ್ತ್ ಡೇ ವಿಶ್, ವ್ಯಾಲೆಂಟೈನ್ಸ್ ಡೇ ಹೀಗೆ ಅನೇಕ ಸ್ಪೆಷಲ್ ಇವೆಂಟ್ಗಳಲ್ಲಿ ಸೆಲೆಬ್ರೇಷನ್ ಮಾಡಿರೋ, ರೊಮ್ಯಾಂಟಿಕ್ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.
ಗಂಡ - ಹೆಂಡತಿಗೆ ಫ್ಯಾನ್ಸ್ ಹಾರೈಕೆ
ಇನ್ನು ನೀತಾ ಅಶೋಕ್ 2023ರಲ್ಲಿ ಮದುವೆಯಾಗಿದ್ದಾರೆ. ಮದುವೆಗೂ ಮುನ್ನ ಫೋಟೋಶೂಟ್ ಎಲ್ಲಾ ಮಾಡಿಸಿಕೊಂಡಿದ್ದಾರೆ. ಪ್ರಿವೆಡ್ಡಿಂಗ್ ಫೋಟೋಶೂಟ್ ಕೂಡ ಹಾಕಿದ್ದಾರೆ. ಸತೀಶ್ ಮೆಸ್ತ ಎಂಬುದು ಅವರ ಪತಿಯ ಹೆಸರಾಗಿದೆ. ಈ ಕಪಲ್ ಶೂಟಿಂಗ್ ಗ್ಯಾಪ್ ಸಿಕ್ಕುದ್ರೆ ಸುತ್ತಾಟ ಮಿಸ್ ಮಾಡೋದೆ ಇಲ್ಲ. ಇವರ ಸೋಷಿಯಲ್ ಮೀಡಿಯಾ ನೋಡಿದರೇನೆ ಟ್ರಾವೆಲ್ ಅಂದ್ರೆ ಈ ಜೋಡಿಗೆ ಇಷ್ಟ ಎಂಬುದು ಅರ್ಥವಾಗುತ್ತಿದೆ.
ಗ್ಲಾಮರ್ ಗೊಂಬೆ
ಇನ್ನು ಅಂಬಿಕಾ ಪಾತ್ರದಲ್ಲಿ ಅದರಲ್ಲೂ ಸದಾ ಆತ್ಮ ಆಗಿಯೇ ಕಾಡುವ ನೀತಾ ಅಶೋಕ್, ಸದಾ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆದರೆ ರಿಯಲ್ ಲೈಫ್ ನಲ್ಲಿ ಗ್ಲಾಮರ್ ಗೊಂಬೆಯಂತಡ ಇದ್ದಾರೆ. ಮಾಡ್ರನ್ ಡ್ರೆಸ್ ಗಳಲ್ಲಿಯೂ ಮಿಂಚುತ್ತಾರೆ. ಟ್ರೆಡಿಷನಲ್‌ಗೂ ಸೈ.. ಮಾಡ್ರನ್‌ಗೂ ಜೈ ಎನ್ನುವ ಸ್ಟೈಲ್ ಅನ್ನ ಅವರು ಫಾಲೋ ಮಾಡ್ತಾರೆ. ಫೋಟೋಶೂಟ್, ಟ್ರಾವೆಲ್ ಮಾಡುತ್ತಿರೋ ವಿಡಿಯೋಗಳನ್ನೆಲ್ಲ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಕ್ಯೂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
'ವಿಕ್ರಾಂತ ರೋಣ' ಚಿತ್ರದ ನಟಿ
ಇನ್ನು ನಟಿ ನೀತಾ ಅಶೋಕ್ ಈ ಮೊದಲೇ ಸೀರಿಯಲ್, ಸಿನಿಮಾಗಳಲ್ಲಿ ಫೇಮಸ್ ಆಗಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿದ್ದರು. ಈ ಸಿನಿಮಾದ ಮೂಲಕ ಡೆಬ್ಯುಡೆಂಟ್ ಆಕ್ಟರ್ ಅಂತ ಫಿಲ್ಮ್ ಫೇರ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಇನ್ನು ಅದಕ್ಕೂ ಮುಂಚೆ ಯಶೋಧಾ ಎಂಬ ಹೆಸರಿನಿಂದಾನೇ ನೀತಾ ಅಶೋಕ್ ಫೇಮಸ್ ಆದವರು. ದಶಕಗಳ ಹಿಂದೆ ಈಟಿವಿಯಲ್ಲಿ ಪ್ರಸಾರವಾಗ್ತಿದ್ದ 'ಯಶೋಧೆ' ಎಂಬ ಧಾರಾವಾಹಿಯಲ್ಲಿ ಯಶೋಧಾ ಆಗಿ ಮನೆಮನಗಳನ್ನ ಗೆದ್ದವರು. ಸದ್ಯ ಅಂಬಿಕಾ ಆಗಿಯೂ ಅಷ್ಟೇ ಫೇಮಸ್ ಆಗುತ್ತಿದ್ದಾರೆ.


Click it and Unblock the Notifications











